Upanyasa - VNU613

ಶ್ರೀಮದ್ ಭಾಗವತಮ್ — 100 — ಭೀಷ್ಮರ ಉಪದೇಶ

ಯುದ್ದವನ್ನು ಮಾಡಿ ಪ್ರಜಾದ್ರೋಹವನ್ನು ಮಾಡಿದ್ದೇನೆ ಎಂದು ಸಂಶಯಕ್ಕೀಡಾದ ಧರ್ಮರಾಜರು, ಶ್ರೀಕೃಷ್ಣನ ಮಾತಿನಂತೆ, ತಾನು ಮಾಡಿದ್ದು ತಪ್ಪೋ ಸರಿಯೋ ಎಂದು ತಿಳಿಯಲು, ಯುದ್ಧಭೂಮಿಯಲ್ಲಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರ ಬಳಿಗೆ ಬರುತ್ತಾರೆ. ಭೀಷ್ಮಾಚಾರ್ಯರ ಮುಖದಿಂದ ಹೊರಹೊಮ್ಮಿ ಬರಲಿರುವ ಧರ್ಮಸುಧೆಯನ್ನು ಪಾನ ಮಾಡಲು ಸಕಲ ಋಷಿಗಳೂ ಆಗಮಿಸುತ್ತಾರೆ. ಧರ್ಮರಾಜ ಮಾತನ್ನಾರಂಭಿಸುವ ಮೊದಲೇ ಅವನ ಮನಸ್ಸಿನಲ್ಲಿದ್ದ ಪ್ರಶ್ನೆಗೆ ಉತ್ತರವನ್ನಿತ್ತುಬಿಡುತ್ತಾರೆ ಭೀಷ್ಮಾಚಾರ್ಯರು. ಅವರ ಮಾತಿನ ಅನುವಾದ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನಗಳು — 

ಸೂತ ಉವಾಚ — 

ಇತಿ ಭೀತಃ ಪ್ರಜಾದ್ರೋಹಾತ್ ಸರ್ವಧರ್ಮವಿವಿತ್ಸಯಾ।

ತತೋ ವಿಶಸನಂ ಪ್ರಾಗಾದ್ ಯತ್ರ ದೇವವ್ರತೋಽಪತತ್ ॥ ೮ ॥

ತದಾ ತದ್ಭ್ರಾತರಃ ಸರ್ವೇ ಸದಶ್ವೈಃ ಸ್ವರ್ಣಭೂಷಿತೈಃ।

ಅನ್ವಗಚ್ಛನ್ ರಥೈರ್ವಿಪ್ರಾ ವ್ಯಾಸಧೌಮ್ಯಾದಯಸ್ತಥಾ ॥ ೯ ॥

ಭಗವಾನಪಿ ವಿಪ್ರರ್ಷೇ ರಥೇನ ಸಧನಂಜಯಃ।

ಸ ತೈರ್ವ್ಯರೋಚತ ನೃಪಃ ಕುಬೇರ ಇವ ಗುಹ್ಯಕೈಃ ॥ ೧೦ ॥

ದೃಷ್ಟ್ವಾ ನಿಪತಿತಂ ಭೂಮೌ ದಿವಶ್ಚ್ಯುತಮಿವಾಮರಮ್।

ಪ್ರಣೇಮುಃ ಪಾಂಡವಾ ಭೀಷ್ಮಂ ಸಾನುಗಾಃ ಸಹಚಕ್ರಿಣಃ ॥ ೧೧ ॥

ತತ್ರ ಬ್ರಹ್ಮರ್ಷಯಃ ಸರ್ವೇ ದೇವರ್ಷಯಶ್ಚ ಸತ್ತಮ।

ರಾಜರ್ಷಯಶ್ಚ ತತ್ರಾsಸನ್ ದ್ರಷ್ಟುಂ ಭರತಪುಂಗವಮ್ ॥ ೧೨ ॥

ಪರ್ವತೋ ನಾರದೋ ಧೌಮ್ಯೋ ಭಗವಾನ್ ಬಾದರಾಯಣಃ।

ಬೃಹದಶ್ವೋ ಭರದ್ವಾಜಃ ಸಶಿಷ್ಯೋ ರೇಣುಕಾಸುತಃ ॥ ೧೩ ॥

ವಸಿಷ್ಠ ಇಂದ್ರಪ್ರಮದಸ್ತ್ರಿತೋ ಗೃತ್ಸಮದೋಽಸಿತಃ।

ಕಕ್ಷೀವಾನ್ ಗೌತಮೋಽತ್ರಿಶ್ಚ ಕೌಶಿಕೋಽಥ ಸುದರ್ಶನಃ ॥ ೧೪ ॥

ಅನ್ಯೇ ಚ ಮುನಯೋ ಬ್ರಹ್ಮನ್ ಬ್ರಹ್ಮರಾತಾದಯೋಽಮಲಾಃ।

ಶಿಷ್ಯೈರುಪೇತಾ ಆಜಗ್ಮುಃ ಕಶ್ಯಪಾಂಗಿರಸಾದಯಃ ॥ ೧೫ ॥

ತಾನ್ ಸಮೇತಾನ್ ಮಹಾಭಾಗ ಉಪಲಭ್ಯ ವಸೂತ್ತಮಃ।

ಪೂಜಯಾಮಾಸ ಧರ್ಮಜ್ಞೋ ದೇಶಕಾಲವಿಭಾಗವಿತ್ ॥ ೧೬ ॥

ಕೃಷ್ಣಂ ಚ ತತ್ಪ್ರಭಾವಜ್ಞ ಆಸೀನಂ ಜಗದೀಶ್ವರಮ್।

ಹೃದಿಸ್ಥಂ ಪೂಜಯಾಮಾಸ ಮಾಯಯೋಪಾತ್ತವಿಗ್ರಹಮ್ ॥ ೧೭ ॥

ಪಾಣ್ಡುಪುತ್ರಾನುಪಾಸೀನಾನ್ ಪ್ರಶ್ರಯಪ್ರೇಮಸಂಗತಾನ್।

ಅಭ್ಯಾಚಷ್ಟಾನುರಾಗಾಸ್ರೈರಂಧೀಭೂತೇನ ಚಕ್ಷುಷಾ ॥ ೧೮ ॥

ಭೀಷ್ಮ ಉವಾಚ — 

ಅಹೋ ಕಷ್ಟಮಹೋಽನ್ಯಾಯ್ಯಂ ಯದ್ ಯೂಯಂ ಧರ್ಮನಂದನಾಃ।

ಜೀವಿತುಂ ನಾರ್ಹಥ ಕ್ಲಿಷ್ಟಂ ವಿಪ್ರಧರ್ಮಾಚ್ಯುತಾಶ್ರಯಾಃ ॥ ೧೯ ॥

ಸಂಸ್ಥಿತೇಽತಿರಥೇ ಪಾಂಡೌ ಪೃಥಾ ಬಾಲಪ್ರಜಾ ವಧೂಃ।

ಯುಷ್ಮತ್ಕೃತೇ ಬಹೂನ್ ಕ್ಲೇಶಾನ್ ಪ್ರಾಪ್ತಾsತೋಕವತೀ ಯಥಾ ॥ ೨೦ ॥

ಸರ್ವಂ ಕಾಲಕೃತಂ ಮನ್ಯೇ ಭವತಾಂ ಚ ಯದಪ್ರಿಯಮ್।

ಸ ಕಾಲೋ ಯದ್ವಶೇ ಲೋಕೋ ವಾಯೋರಿವ ಘನಾವಲಿಃ ॥ ೨೧ ॥

ಯತ್ರ ಧರ್ಮಸುತೋ ರಾಜಾ ಗದಾಪಾಣಿರ್ವೃಕೋದರಃ।

ಕೃಷ್ಣೋಽಸ್ತ್ರೀ ಗಾಂಡಿವಂ ಚಾಪಂ ಸುಹೃತ್ ಕೃಷ್ಣಸ್ತತೋ ವಿಪತ್ ॥ ೨೨ ॥

ನ ಹ್ಯಸ್ಯ ಕರ್ಹಿಚಿದ್ರಾಜನ್ ಪುಮಾನ್ ವೇದ ವಿಧಿತ್ಸಿತಮ್।

ಯದ್ವಿಜಿಜ್ಞಾಸಯಾ ಯುಕ್ತಾ ಮುಹ್ಯಂತಿ ಕವಯೋಽಪಿ ಹಿ ॥ ೨೩ ॥

ತಸ್ಮಾಜ್ಜಗದ್ ದೈವತಂತ್ರಂ ವ್ಯವಸ್ಯ ಭರತರ್ಷಭ।

ತಸ್ಯಾನುವಿಹಿತೋಽನಾಥಾ ನಾಥ ಪಾಹಿ ಪ್ರಜಾಃ ಪ್ರಭೋ ॥ ೨೪ ॥

Play Time: 51:06

Size: 7.60 MB


Download Upanyasa Share to facebook View Comments
3738 Views

Comments

(You can only view comments here. If you want to write a comment please download the app.)
 • Sowmya,Bangalore

  10:22 AM, 27/09/2022

  🙏🙏🙏
 • Prathap rao,Ananthapur

  10:09 AM, 25/05/2019

  Prathap Rao s/o Seetharam Rao Ananthapura ಎನು ಹೆಳಬೆಕು‌ನಾವು ಸಣ್ಣ ವರು ನಮಸ್ಕಾರಗಳು ಮಾತೇ ಹೆಳ ಬಳ್ಳ ವರು
 • PRASANNA KUMAR N S,Bangalore

  1:34 PM , 15/01/2018

  ತಾವು ಮಾಡಿದ ತಪ್ಪಿಗೆ ಅನುಭವಿಸುತ್ತಿರುವ ಅತಿಯಾದ ನೋವನ್ನೂ ಮೀರಿಸುವ ಭೀಷ್ಮರ ಭಕ್ತಿ, ತಾವು ಭಾಗವತವನ್ನು ವಿವರಿಸುತ್ತಿರುವ ಪರಿ ಎಂತಹ ಪಾಪಿಷ್ಠರನ್ನೂ ಪಾವನಗಳಿಸುತ್ತೆ.
  ನಿಮ್ಮನ್ನು ಪಡೆದ ನಾವೇ ಧನ್ಯರು.
 • H. Suvarna Kulkarni,Bangalore

  11:34 AM, 15/01/2018

  ಗುರುಗಳಿಗೆ ಪ್ರಣಾಮಗಳು ಉತ್ತರಾಯಣದ ಮೊದಲ ದಿನವೇ ಭೀಷ್ಮಾಚಾಯ೯ರ ಉಪದೇಶ ಕೇಳಿಸುತ್ತಿರುವ ತಮಗೆ ಭಕ್ತಿಪೂವ೯ಕ ನಮಸ್ಕಾರ ಗಳು ಪರಮ ಭಾಗ್ಯವಂತರು ನಾವು ಧನ್ಯವಾದಗಳು 🙏🙏
 • P N Deshpanse,Bangalore

  10:35 AM, 15/01/2018

  S.Namaskargalu. Mahabharatda ee katheayind prarabdhaweabudu yaarannu biduwadilla eambdu siddha. Bhishamacharyraagali pandavaraagali ellarigu anubhavisuwadu tappuwadilla aa Shrihari maatra ellawannu balla avaneedalea ellawu ghatisuwaaga jananiyaadawanu dukhawannu paduwadill. Dhanywaadagalu
 • Raghoottam Rao,Bangalore

  9:52 AM , 15/01/2018

  ಭೀಷ್ಮಾಚಾರ್ಯರ ಉಪದೇಶದಿಂದ ನಮ್ಮ ಈ ವರ್ಷದ ಉತ್ತರಾಯಣ ಆರಂಭವಾಗುವಂತೆ ಮಾಡಿದ ಗುರುಗಳಿಗೆ ನಮೊನಮಃ.
  
  ತಮಗೆ ಮಕರಸಂಕ್ರಾಂತಿಯ ಸಾಷ್ಟಾಂಗ ನಮಸ್ಕಾರಗಳು. 
  
  ರಘೂತ್ತಮರಾವ್ ಮತ್ತು ಕುಟುಂಬದ ಸದಸ್ಯರು.
 • Niranjan Kamath,Koteshwar

  9:39 AM , 15/01/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. 100 ದಿನ ಶ್ರೀಮದ್ ಭಾಗವತ ಪ್ರವಚನ ಮಾಲಿಕೆಯು ಪರಮ ಮಂಗಲಪ್ರದವಾಯಿತು. ಈ ಜೀವ ಧನ್ಯವಾಯಿತು. ನಿಮ್ಮ ಮೂಲಕ ಶ್ರೀಮನ್ ನಾರಾಯಣ ಚರಿತಅಮೃತಪಾನವಾಯಿತು. ಭೀಷ್ಮಾಚಾರ್ಯರ ವಾಕ್ಯಗಳು ಧರ್ಮಾನುಪೃದವಾಗಿತ್ತು. ಧನ್ಯೋಸ್ಮಿ.
 • Deshmukh seshagiri rao,Banglore

  4:36 AM , 15/01/2018

  ಶ್ರೀ ಗುರುಗಳಿಗೆ ನನ್ನ ಅನಂತ ಅನಂತ ವಂದನೆಗಳು.