Upanyasa - VNU624

ಶ್ರೀಮದ್ ಭಾಗವತಮ್ — 110 — ವಿದುರರ ತೀರ್ಥಯಾತ್ರೆ

ವಿದುರರು ತೀರ್ಥಯಾತ್ರೆ ಮಾಡಿಕೊಂಡು ಬಂದು ಧರ್ಮರಾಜನ ಬಳಿಯಲ್ಲಿ ಮಾತನಾಡುವಾಗ, ಧರ್ಮರಾಜನಿಗೆ ನೋವುಂಟಾಗುತ್ತದೆ ಎಂಬ ಕಾರಣಕ್ಕೆ ಯದುಕುಲವಿನಾಶದ ಬಗ್ಗೆ ಹೇಳಲಿಲ್ಲ ಎಂಬ ಮಾತನ್ನು ಭಾಗವತದಲ್ಲಿ ಕೇಳುತ್ತೇವೆ. 

ಆದರೆ, ಯದುಕುಲವಿನಾಶವಾಗುವದಿಕ್ಕಂತಲೂ 21 ವರ್ಷಗಳ ಮುಂಚೆಯೇ ವಿದುರರ ದೇಹತ್ಯಾಗವಾಗಿರುತ್ತದೆ. ಅಂದ ಮೇಲೆ ಈ ಭಾಗವತದ ಮಾತನ್ನು ಹೇಗೆ ಒಪ್ಪುವದು ಎಂಬ ಪ್ರಶ್ನೆಗೆ ಆಚಾರ್ಯರು ಪದ್ಮಪುರಾಣದ ವಚನದಿಂದ ನಮಗೆ ಉತ್ತರವನ್ನು ನೀಡುತ್ತಾರೆ. ಆಚಾರ್ಯರ ವಚನದಲ್ಲಿಯೂ ಸಹ ಬನ್ನಂಜೆ ಒಂದು ಕಡೆಗೆ ಗೊಂದಲವನ್ನುಂಟು ಮಾಡಿದ್ದಾರೆ. ಈ ವಿಷಯಗಳ ಚರ್ಚೆ ಇಂದಿನ ಉಪನ್ಯಾಸದಲ್ಲಿ. 

ಕೆಟ್ಟಸುದ್ದಿಯನ್ನು ಹೇಳಬೇಕಾದರೆ ನಮಗಿರಬೇಕಾದ ಎಚ್ಚರಗಳ ಕುರಿತ ಚಿಂತನೆಯೂ ಇಂದಿನ ಉಪನ್ಯಾಸದಲ್ಲಿ. 

Play Time: 48:54

Size: 7.60 MB


Download Upanyasa Share to facebook View Comments
8368 Views

Comments

(You can only view comments here. If you want to write a comment please download the app.)
 • Sowmya,Bangalore

  10:31 AM, 12/10/2022

  🙏🙏🙏
 • Sowmya,Bangalore

  10:30 AM, 12/10/2022

  🙏🙏🙏
 • Ushasri,Chennai

  4:20 PM , 04/05/2018

  Achare dhanyavadagalu
 • prema raghavendra,coimbatore

  12:24 PM, 04/02/2018

  Anantha namaskara! !Danyavada!
 • Deshmukh seshagiri rao,Banglore

  8:16 PM , 03/02/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು
 • Jayashree Karunakar,Bangalore

  12:19 PM, 03/02/2018

  ಗುರುಗಳೆ
  
  ಇರುವ ಬದುಕನ್ನೇ ಅಥ೯ಪೂಣ೯ವಾಗಿಸುವಂತಹ, ನಮ್ಮನ್ನು ಸಾಧನೆಯ ಮಾಗ೯ದಲ್ಲಿರಿಸುವಂತಹ ತಮ್ಮ ಉಪನ್ಯಾಸಗಳು, ನಮಗೆ ದಾರಿದೀಪವಾಗಿವೆ.
  
  ಲೌಖಿಕವಾಗಿಯೇ ಸಂಚಾರ ಮಾಡುತ್ತಿದ್ದ ಮನಸ್ಸು ಇದೀಗ, ಶ್ರೀಮದ್ಭಾಗವತದ ಶ್ರವಣದಲ್ಲಿ ಆಸಕ್ತವಾಗಿ ನಿಂತು ಬಿಟ್ಟಿದೆ.
  
  ಸಹಜವಾಗಿಯೇ ನಮ್ಮಲ್ಲಿ ಒಳ್ಳೆಯತನವಿದ್ದರೂ, ಅದನ್ನು ಅನುಸರಿಸಲು ಬೇಕಾದಂತಹ ಸಾತ್ವಿಕ ಶಕ್ತಿಯನ್ನು ಶ್ರೀಮದ್ಭಾಗವತವು ನಮಗೆ ನೀಡುತ್ತಿದೆ.
  
  ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡರೂ, ನಮ್ಮೊಳಗಿರುವ ಸ್ವಾಥ೯ವನ್ನೇ ಪೊಷಣೆ ಮಾಡುತ್ತಾ, ಆತ್ಮಸಾಕ್ಷಿಗೆ ವಿರುದ್ಧವಾದ ನಡವಳಿಕೆ ನಮ್ಮದಾದಾಗ, ತಾವು ಶ್ರೀಮದ್ಭಾಗವತದಲ್ಲಿ ತಿಳಿಸಿಕೊಡುತ್ತಿರುವ ತತ್ತ್ವಗಳು, ನಮ್ಮನ್ನು ಸರಿಯಾದ ದಾರಿಯಲ್ಲಿ ನಿಲ್ಲಿಸುತ್ತಿದೆ.
  
  ದೇಹ ಮತ್ತು ಮನಸ್ಸನ್ನು ಮಾಧ್ಯಮವನ್ನಾಗಿಸಿಕೊಂಡು ಭಗವಂತನನ್ನು ಕಾಣಲು ಪ್ರಯತ್ನ ಪಡುವಂತಾಗಿದೆ.
  
  ನಮ್ಮನ್ನು ಭಾಗವತಾಸಕ್ತರನ್ನಾಗಿ ಮಾಡಿ, ಸಾಧನೆಯ ಮಾಗ೯ದಲ್ಲಿ ನಡೆಸುತ್ತಿರುವ ನಿಮಗೆ ಭಕ್ತಿಪೂವ೯ಕ ನಮಸ್ಕಾರಗಳು...🙏
 • Shantha raghothamachar,Bengaluru

  10:37 AM, 03/02/2018

  ನಮಸ್ಕಾರಗಳು ನಮೋನಮಃ
 • Niranjan Kamath,Koteshwar

  10:28 AM, 03/02/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಅತ್ಯಂತ ಮಹತ್ವವಾದ ವಿಚಾರ ಬಹಳ ಸ್ಪಷ್ಟವಾಗಿ , ಖಂಡಿತವಾಗಿ ತಿಳಿಸಿದ್ದೀರಿ. ಯಾರೇ ಆಗಲಿ ಶಾಸ್ತ್ರವನ್ನು ತಿರುಚಿ ಹೇಳಲು ಬದ್ಧರಲ್ಲ. ಇಂದಿನ ಶ್ರೀಮದ್ ಭಾಗವತ , ವಿದುರರ ವಿಚಾರ , ಅವರ ಅತ್ಯಂತ ಭಕ್ತಿ , ಎಲ್ಲವೂ ಬಹಳ ಪುಣ್ಯಪ್ರದ. ಧನ್ಯೋಸ್ಮಿ.