Upanyasa - VNU628

ಶ್ರೀಮದ್ ಭಾಗವತಮ್ — 113 — ಪುರಾಣಗಳಲ್ಲೇಕೆ ವಿರುದ್ಧ ವಚನಗಳು

ಧೃತರಾಷ್ಟ್ರ ಧರ್ಮರಾಜನ ಅನುಮತಿಯನ್ನು ಪಡೆದು ವನಕ್ಕೆ ತೆರಳಿದ ಎಂದು ಮಹಾಭಾರತ ತಿಳಿಸಿದರೆ, ಪಾಂಡವರಿಗೆ ತಿಳಿಯದಂತೆ ಧೃತರಾಷ್ಟ್ರ ವನಕ್ಕೆ ತೆರಳಿದ ಎಂದು ಭಾಗವತ ಹೇಳುತ್ತದೆ. ಎರಡೂ ಸತ್ಯವಾಗಿರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ಹೀಗೆ ಪರಸ್ಪರವಿರುದ್ಧವಾಗಿ ಏಕೆ ಕಥೆಗಳನ್ನು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಆಚಾರ್ಯರು ನೀಡಿದ ಉತ್ತರದ ನಿರೂಪಣೆಯೊಂದಿಗೆ ಎರಡೂ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. 

ಋಷಿಗಳು ಕಾಮುಕರು, ಕುಂತಿ ಮುಂತಾದವರು ವ್ಯಭಿಚಾರಿಣಿಯರು ಎಂಬ ಇಂದಿನ ಜನರ ಆಕ್ಷೇಪಗಳಿಗೆ ಇಲ್ಲಿ ಉತ್ತರಗಳಿವೆ, ತಪ್ಪದೇ ಕೇಳಿ. ನಿಮ್ಮ ಮಕ್ಕಳಿಗೂ ಕೇಳಿಸಿ. 

ಇಲ್ಲಿ ವಿವರಣೆಗೊಂಡ ಭಾಗವತತಾತ್ಪರ್ಯದ ವಚನಗಳು — 

“ವ್ಯಾಸಾದಯೋ ವರ್ತಮಾನಮತೀತಾನಾಗತೇ ತಥಾ । ವ್ಯತ್ಯಸ್ಯಾಪಿ ವದಂತ್ಯದ್ಧಾ ಮೋಹನಾರ್ಥಂ ದುರಾತ್ಮನಾಮ್ ।।
ಪೌರ್ವಾಪರ್ಯಂ ಯತೋ ನೈವ ಸದೈವ ಪರಿವರ್ತನಾತ್ । ಅತಶ್ಚ ವ್ಯತ್ಯಯಾದೇತದ್ವದಂತಿ ಜ್ಞಾನಚಕ್ಷುಷಃ" ಇತಿ ಬ್ರಾಹ್ಮೇ ।

Play Time: 46:46

Size: 7.60 MB


Download Upanyasa Share to facebook View Comments
5607 Views

Comments

(You can only view comments here. If you want to write a comment please download the app.)
 • Sowmya,Bangalore

  10:33 AM, 24/10/2022

  🙏🙏🙏
 • Vijay Kulkarni,Bengaluru

  3:46 PM , 14/06/2019

  .1 Q
 • Vijay Kulkarni,Bengaluru

  3:46 PM , 14/06/2019

  .1 Q
 • Vijay Kulkarni,Bengaluru

  3:46 PM , 14/06/2019

  .1 Q
 • Santosh Patil,Gulbarga

  9:58 PM , 13/03/2019

  🙏
 • Jayashree Karunakar,Bangalore

  2:01 PM , 07/02/2018

  ಗುರುಗಳೆ
  
  ಶ್ರೀಮದ್ಭಾಗವತ ಶ್ರವಣದಿಂದ 
  
  ನಾವು ಪಡೆಯುತ್ತಿರುವ ಆನಂದ ಸತ್ಯ....
  
  ನಾವು ಪಡೆದ ಆನಂದಭಾಷ್ಪಗಳು ಸತ್ಯ....
  
  ಆದರೆ ತಾವು ಮುಂದೆ ಮುಂದೆ ಹೋಗುತ್ತಿದ್ದಂತೆ , ಹಿಂದನವುಗಳಿಂದ ಪಡೆದ ಆನಂದ ಮಾತ್ರ ಮನಸ್ಸಿನಲ್ಲಿಳಿಯುತ್ತಿದೆ ಅಷ್ಟೆ.....
   ಸಮುದ್ರದಂತೆ ವಿಸ್ತಾರವಾಗುತ್ತಾ ಇರುವ ಪ್ರಮೇಯಗಳನ್ನು ನಮ್ಮ ಮನಸ್ಸಿನಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ...
  ತಾವೇ ದಾರಿ ತೋರಿಸಿ ಗುರುಗಳೆ....

  Vishnudasa Nagendracharya

  ಹಿಂದೆಯೇ ಹೇಳಿದ್ದೇನೆ. 
  
  ಒಂದು ಬಾರಿ ಕೇಳಿ ಬಿಡಬಾರದು. ಮೇಲಿಂದ ಮೇಲೆ ಕೇಳಬೇಕು. 
  
  ಕೇಳಿದ್ದನ್ನು ಬರೆದಿಡಬೇಕು. 
 • Shantha raghothamachar,Bengaluru

  12:06 PM, 07/02/2018

  ನಮಸ್ಕಾರಗಳು, ಉಪಕಥೆಯ ನೀತಿ ತುಂಬಾ ಚೆನ್ನಾಗಿದೆ. ಶಾಸ್ತ್ರವಿಚಾರದಲ್ಲಿ ಧೃಡತೆ ಇರಬೇಕೆಂಬ ವಿವರಣೆ ಚೆನ್ನಾಗಿ ಮೂಡಿ ಬಂದಿದೆ ನಮೋನಮಃ ನಮೋನಮಃ
 • Deshmukh seshagiri rao,Banglore

  7:34 AM , 07/02/2018

  ಶ್ರೀ ಗುರುಗಳಿಗೆ ಅನಂತ ಅನಂತ ವಂದನೆಗಳು.
 • Niranjan Kamath,Koteshwar

  7:33 AM , 07/02/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ನಿಜ ಗುರುಗಳೇ, ಇವತ್ತಿನ ಕಾಲ ನಾವು ಮಾಡುವ ಅವಹೇಳನೆಗಳೇ ಹೆಚ್ಚಾಗಿದೆ. ದೇವರು ಎಲ್ಲರಿಗೂ ಸಂಮತಿಯ ಕರುಣಿಸಲಿ. ಸರ್ವೇ ಜನಾಃ ಸಂಮಂಗಲಾನಿ ಭವಂತು. ಧನ್ಯೋಸ್ಮಿ.