Upanyasa - VNU634

ಶ್ರೀಮದ್ ಭಾಗವತಮ್ — 118 — ಪಾಂಡವರ ಮಹಾಪ್ರಸ್ಥಾನ

ಶ್ರೀಕೃಷ್ಣ ತೊರೆದ ಭೂಮಿ ನಮ್ಮಿಂದ ರಕ್ಷಣೀಯವೂ ಅಲ್ಲ, ಅನುಭವಿಸಲಕ್ಕೂ ಅರ್ಹವಲ್ಲ ಎಂದು ನಿರ್ಣಯಿಸಿದ ಪಾಂಡವರು, ತಮ್ಮ ಮೊಮ್ಮಗ ಪರೀಕ್ಷಿದ್ರಾಜರನ್ನು ಸಿಂಹಾಸನದ ಮೇಲೆ ಕೂಡಿಸಿ ಪಟ್ಟಾಭಿಷೇಕ ಮಾಡಿ, ಹಿರಿಯರಿಗೆ ಶ್ರಾದ್ಧಾದಿಗಳನ್ನು ಮಾಡಿ, ರಾಜಚಿಹ್ನೆಗಳನ್ನು ತ್ಯಾಗ ಮಾಡಿ ಲಯಚಿಂತನೆಯನ್ನು ಮಾಡಿ, ಅದ್ಭುತ ಯೋಗ ಸಾಮರ್ಥ್ಯದಿಂದ ಸಮಗ್ರ ಏಳು ಸಮುದ್ರಗಳಿಗೆ ಪ್ರದಕ್ಷಿಣೆಯನ್ನು ಮಾಡಿ ದೇಹತ್ಯಾಗ ಮಾಡಿದ ಘಟನೆಗಳ ವಿವರಣೆ ಇಲ್ಲಿದೆ. ನಾಯಿಯ ಘಟನೆ ಸೂಚಿಸುವ ಆಧ್ಯಾತ್ಮಿಕ ಅರ್ಥದ ಚಿಂತನೆಯೊಂದಿಗೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

निशम्य भगवन्मार्गं संस्थां यदुकुलस्य च।
स्वःपथाय मतिं चक्रे निभृतात्मा युधिष्ठिरः 		।। ४ ।।
यदा मुकुन्दो भगवानिमां महीं जहौ स्वतन्वा श्रवणीयसत्कथः।
तदा हरावाप्रतिबुद्धचेतसामभद्रहेतुः कलिरन्ववर्तत		।। ५ ।।
युधिष्ठिरस्तत्परिसर्पणं बुधः पुरे च राष्ट्रे च गृहे तथाऽत्मनि।
विभाव्य लोभानृतजिह्महिंसनाद्यधर्मचक्रं गमनाय पर्यधात्	।। ६ ।।
विजयध्वजीयम् — तदेवाह — विसृज्येति। सिञ्च्छन्नाशेषाशापशादिबन्धनः॥9॥
स्वराट् पौत्रं विनयिनमात्मनोऽनवमं गुणैः।
तोयनीव्याः पतिं भूमेरभ्यषिञ्चद् गजाह्वये		।। ७ ।।
			
भागवततात्पर्यम् — पौत्रत्वे योग्यत्वमनवमत्वम् ।
“इन्द्रादद्युत्तमतान्येषां समता वा स्वके कुले । 
उत्तमत्वमुपास्त्यादियोग्यता वा निगद्यते” इति च ब्रह्मतर्के ।। ७ ।।
मथुरायां तथा वज्रं शूरसेनपतिं ततः।
प्राजापत्यां निरूप्येष्टिमग्नीनपिबदीश्वरः			।। ८ ।।
विसृज्य तत्र तत् सर्वं दुकूलवलयादिकम्।
निर्ममो निरहङ्कारः सञ्छिन्नाशेषबन्धनः		।। ९ ।।
वाचं जुहाव मनसि तत्प्राण इतरे च तम्।
धृत्या ह्यपानं सोत्स तत्परत्वे ह्यजोहवीत्		।। १० ।।
त्रित्वे हुत्वा च पञ्चत्वं तच्चैकत्वेऽजुहोन्मुनिः।
सर्वमात्मन्यजुहवीद् ब्रह्मण्यात्मानमव्यये		।। ११ ।।
भागवततात्पर्यम् — प्राणमपाने । तं व्याने । समानोदानौ तेषु । तांश्च मूलप्राणे । आत्मा हृदिस्थो विष्णुः । ब्रह्म सर्वगतम् ।
“उमा वागात्मिका रुद्राज्जाता सा मनआत्मनः । 
प्राणाह्वयात् स वायोश्च सोऽपानादात्मरूपतः ।।
स्वरूपादेव स व्यानादुदानो व्यानतस्तथा । 
तस्मात् समानो व्यानाच्चाप्यपानः प्राण एव च ।।
अपानात् तिसृभिश्चापि समानोदानयोर्जनिः । 
त्रयाणामथ पञ्चानामनाद् वा प्राणतो भवः ।।
एकस्यैव स्वरूपाणि प्राणस्यैतानि पञ्च च । 
स च प्राणो हरेर्जातो हृदिस्थादात्मनो मतः ।।
स आत्मा ब्रह्मणो जातो विश्वरूपाज्जनार्दनात् । 
एतेषां ब्रह्मपर्यन्तं विलयोत्पत्तिचिन्तनम् ।।
ब्रह्मयज्ञ इति प्रोक्तः सर्वसंसारमोचकः” इति नारायणाध्यात्मे ।
“अस्यास्मिन् विलयो भावीत्येवं विज्ञानमाहुतिः । 
नतु तत्कालविलयस्त्वन्यो वा तस्य दर्शनात्” इति ब्रह्मतर्के ।। १०-११ ।।
चीरवासा निराहारो बद्धवाङ्मुक्तमूर्धजः।
दर्शयन्नात्मनो रूपं जडोन्मत्तपिशाचवत्			
अनवेक्षमाणो निरगादशृण्वन्बधिरो यथा		।। १२ ।।
उदीचीं प्रविवेशाशां गतपूर्वां महात्मभिः		
हृदि ब्रह्म परं ध्यायन् नाऽवर्तेत यतो गतः		।। १३ ।।

भागवततात्पर्यम् — नाऽवर्तेत वीरगतिं गतः ।।13।।
सर्वे तमनुनिर्जग्मुर्भ्रातरः कृतनिश्चयाः			
कलिनाधर्ममित्रेण दृष्ट्वा स्पृष्टाः प्रजा भुवि		।। १४ ।।
ते साधुकृतसर्वार्था ज्ञात्वात्यन्तिकमात्मनः।
मनसा धारयामासुर्वैकुण्ठचरणाम्बुजम्			।। १५ ।।
भागवततात्पर्यम् — आत्मनः स्वरूपमात्यन्तिकं ज्ञात्वा ।।15।।
तद्ध्यानोद्रिक्तया भक्त्या विशुद्धधिषणाः परे।
तस्मिन्नारायणपदे एकान्तमतयो गतिम्			।। १६ ।।
अवापुर्दुरवापां ते असद्भिर्विषयात्मभिः।
विधूतकल्मषस्थानं विरजेनाऽत्मनैव हि		।। १७ ।।

द्रौपदी च तदाज्ञाय पतीनामनपेक्षताम्।
वासुदेवे भगवति ह्येकान्तमतिराप तम् 			।। १८ ।।
यः श्रद्धयैतद् भगवत्प्रियाणां पाण्डोः सुतानामिति सम्प्रयाणम्।
शृणोत्यलं स्वस्त्ययनं पवित्रं लब्ध्वा हरौ भक्तिमुपैति सिद्धिम्	।। १९ ।।
इति श्रीमत्कृष्णद्वैपायनकृते श्रीमद्भागवते प्रथमस्कन्धे पञ्चदशोऽध्यायः।

Play Time: 54:45

Size: 7.60 MB


Download Upanyasa Share to facebook View Comments
6060 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  11:05 PM, 16/05/2019

  ಬದರೀಕಾಶ್ರಮ ದಲ್ಲಿರುವ ಮನಾ ವಿಲೇಜ್ ನಲ್ಲಿ ಸರಸ್ವತಿ ನದಿ ಮತ್ತು ಅಲಕನಂದ ಸಂಗಮ ದಿಂದ ಸ್ವರ್ಗಾರೋಹಣ ಮಾಡಿದ್ದು ಅಂತಾರೆ ನಿಜನಾ ಗುರುಗಳೇ
 • Vijaya bharathi k b,Bangalore

  10:49 PM, 16/05/2019

  ಮಾತುಗಳೇ ಬರುವುದಿಲ್ಲ ಗರುಗಳೆ 🙏
 • Indira,Canberra

  9:17 AM , 16/10/2018

  Atyadbhuta no words to speak
 • Prema9,Trichy

  10:46 PM, 19/04/2018

  Unaware
 • P N Deshpanse,Bangalore

  1:28 PM , 16/02/2018

  S.Namaskargalu.Anugrahvirli
 • Santosh,Gulbarga

  10:14 AM, 16/02/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು.....
 • Jayashree Karunakar,Bangalore

  8:05 PM , 14/02/2018

  ಗುರುಗಳೆ
  
  ಶ್ರೀಕೃಷ್ಣ ಪರಂಧಾಮ ಪ್ರವೇಶ ಮಾಡಿದರೂ, ಭಗವಂತ ತನ್ನ ಇನ್ನೂಂದು ರೂಪದಲ್ಲಿ ವ್ಯಾಸ ರೂಪದಲ್ಲಿ ಭೂಮಿಯ ಮೇಲೆ ಇದ್ದಾನಲ್ಲ ? ಆಗ ಕಲಿಯ ಪ್ರವೇಶವಾಗಲು ಹೇಗೆ ಸಾಧ್ಯ ? ಹಾಗಾಗಿ ಧಮ೯ರಾಜರು "ನಾನು ಭಗವಂತನಿಲ್ಲದ ಭೂಮಿಯನ್ನು ಆಳುವುದಿಲ್ಲ, ರಕ್ಷಣೆಯನ್ನೂ ಮಾಡುವುದಿಲ್ಲಂತ" ಹೇಗೆ ಹೇಳಿದರು ? ರೖತರ ಜಗಳವು ಹೇಗಾಗಲು ಸಾಧ್ಯ ? ಪರಮಾತ್ಮನ ಸಕಲ ರೂಪದಲ್ಲಿಯೂ ನಾವು ಅಭೇಧ ಚಿಂತನೆ ಮಾಡಿಕೊಂಡು ಬಂದಿದ್ದೇವೆ, ಹಾಗಾಗಿ ಈ ಸಂಧಭ೯ದಲ್ಲಿ ಇದನ್ನು ಹೇಗೆ ಅಥ೯ಮಾಡಿಕೊಳ್ಳುವುದು?

  Vishnudasa Nagendracharya

  ಪರಮಾತ್ಮನ ಎಲ್ಲ ರೂಪಗಳೂ ಅಭಿನ್ನವಾದರೂ, ವಿಶೇಷವಿದೆ. 
  
  ಹಾಲು ಹಾಲಿನ ಬಣ್ಣ ಮತ್ತು ಹಾಲಿನ ರುಚಿಗಳು ಪರಸ್ಪರ ಅಭಿನ್ನ ಪದಾರ್ಥಗಳಾದರೂ (ಈ ಮೂರನ್ನು ಬೇರ್ಪಡಿಸಲು ಸಾಧ್ಯವಿಲ್ಲ) ಹಾಲನ್ನು ನಮ್ಮ ಬೆರಳಿನಿಂದ ಮುಟ್ಟಬಹುದು, ರುಚಿಯನ್ನು ನಾಲಿಗೆಯಿಂದ ಮಾತ್ರ ಸವಿಯಬಹುದು, ಬಣ್ಣವನ್ನು ಕಣ್ಣಿನಿಂದ ಮಾತ್ರ ನೋಡಬಹುದು, ರುಚಿಯನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಹಾಗೆಯೇ ಬಣ್ಣವನ್ನು ನಾಲಿಗೆ, ಚರ್ಮಗಳಿಂದ ಅನುಭವಿಸಲು ಸಾಧ್ಯವಿಲ್ಲ, ಹೇಗೋ ಹಾಗೆ, ಪರಮಾತ್ಮನ ಅನಂತ ರೂಪಗಳು ಪರಸ್ಪರ ಅಭಿನ್ನವಾದರೂ ಅವುಗಳಲ್ಲಿ ವಿಶೇಷವಿದೆ. 
  
  ಶ್ರೀಕೃಷ್ಣ ಪರಂಧಾಮ ಪ್ರವೇಶ ಮಾಡಿದ ಬಳಿಕ, ರುಗ್ಮಿಣಿ ಸತ್ಯಭಾಮೆಯರು ಸಹ ಪರಂಧಾಮ ಪ್ರವೇಶ ಮಾಡುತ್ತಾರೆ. ವೇದವ್ಯಾಸ ರೂಪವಿದೆ, ಪರಶುರಾಮ ರೂಪವಿದೆ ಎಂದು ಆ ರೂಪಗಳ ಜೊತೆಯಲ್ಲಿ ಏಕೆ ಇರಲಿಲ್ಲ. ಏಕೆಂದರೆ, ಶ್ರೀಕೃಷ್ಣ ರೂಪದಿಂದಲೇ ಸ್ವಾಮಿ ರುಗ್ಮಿಣೀ ಸತ್ಯಭಾಮಾರಮಣ. ರಾಮ, ವ್ಯಾಸಾದಿರೂಪಗಳಿಂದ ಅಲ್ಲ. 
  
  ಹಾಗೆ, ವ್ಯಾಸ ರೂಪದಿಂದ ಸ್ವಾಮಿ ಪಾಂಡವರಿಗೆ ಗುರು ಮತ್ತು ತಾತ. ಶ್ರೀಕೃಷ್ಣ ರೂಪದಿಂದ ಗೆಳೆಯ, ಬಂಧು, ದೂತ, ಸಾರಥಿ, ಮುಂತಾದ ಹತ್ತಾರು ರೀತಿಯಲ್ಲಿ ಸಖ್ಯವನ್ನು ಅನುಗ್ರಹಿಸಿದ್ದ. ಆ ರೂಪದ ವಿಯೋಗದಿಂದ ಪಾಂಡವರಿಗೆ ದುಃಖವುಂಟಾಯಿತು. 
  
  122 ಮತ್ತು 123ನೆಯ ಉಪನ್ಯಾಸಗಳಲ್ಲಿ ಇದನ್ನು ವಿವರಿಸಲಾಗಿದೆ. 
 • Rangaswamy,Bengaluru

  3:43 PM , 14/02/2018

  ಗುರುಗಳೆ ನಮಸ್ಕಾರ
 • Jayashree Karunakar,Bangalore

  1:58 PM , 14/02/2018

  ಗುರುಗಳೆ
  
  ಜೀವನವು ನಮ್ಮಿಚ್ಚೆಯಂತೆ ಸಾಗುತ್ತಿಲ್ಲ..
  ಪ್ರತೀಕ್ಷಣವೂ ಅಪರಿಚಿತವೆ...
  ಘಟನೆಗಳು, ಸಂಧಭ೯ಗಳು ಅದರಪಾಡಿಗೆ ಘಟಿಸುತ್ತಲೆ ಇವೆ..
  ಯಾವುದನ್ನೂ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ..
  ಆದರೆ ಮನಸ್ಸಿನಲ್ಲಿ ದುಗುಡದ ಹೋರಾಟವಿಲ್ಲ...
  ಹಾಗೆಂದು ಸೋಮಾರಿಯಾಗಿ ಕುಳಿತಿಲ್ಲ...
  ಮನಸ್ಸು ಸಾತ್ವಿಕ ಚಿಂತನೆಯಿಂದ ಪ್ರಯತ್ನಮಾಡುತ್ತಿದೆ..
  ಯಾಕೆಂದರೆ ನಮ್ಮ ಬದುಕನ್ನೂ ಸೇರಿಸಿ, ಸಕಲ ಜೀವ ಜಗತ್ತನ್ನು ನಿಯಂತ್ರಿಸುವ ಭಗವಂತನನ್ನು ತಿಳಿಸಿಕೊಡುವ ಶ್ರೀಮದ್ಭಾಗವತವನ್ನು ಶ್ರವಣವನ್ನು ಮಾಡುತ್ತಿದ್ದೇವೆ ತಮ್ಮಿಂದ..
  
  ಆವ ಜನುಮದಲಿ ನಾನಾವ ಕಮ೯ಮಾಡಿದೆನೂ
  
  ಗುರುವೆ ಅದಕ್ಕುಂಟೇ ಈ ಪರಿಯ ಪುಣ್ಯ...?
 • Niranjan Kamath,Koteshwar

  11:57 AM, 14/02/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಎಷ್ಟೊಂದು ವಿಚಾರಗಳು, ಆಹಾ, ಧರ್ಮರಾಯರಿಗೆ ಇಂತಹ ಅನುಭವವಾದರೆ, ನಾವೆಲ್ಲಾ ಈ ರಲ್ಲಾ ಅನುಭಾಷಿಸಲಿದೆಯೋ!!! ದೇವರೇ ಕಾಪಾಡಬೇಕು. ಧನ್ಯೋಸ್ಮಿ.
 • Deshmukh seshagiri rao,Banglore

  6:29 AM , 14/02/2018

  ಶ್ರೀ ಗುರುಗಳಿಗೆ ಅನಂತ ವಂದನೆಗಳು