Upanyasa - VNU635

ಶ್ರೀಮದ್ ಭಾಗವತಮ್ — 119 — ಹ್ಯಾಂಗೆ ಮಾಡಲಯ್ಯ ಕೃಷ್ಣ ಪೋಗುತಿದೆ ಆಯುಷ್ಯ

14/02/2018

“ಪರೀಕ್ಷಿದ್ರಾಜರು ಕಲಿಯನ್ನು ನಿಗ್ರಹಿಸಿದ ಘಟನೆಯನ್ನು ವಿವರಿಸಿ” ಎಂದು ಪ್ರಾರ್ಥಿಸುವ ಶೌನಕರು, ಈ ಘಟನೆಯಲ್ಲಿ ಶ್ರೀಹರಿಯ ಭಾಗವತೋತ್ತಮರ ಮಾಹಾತ್ಮ್ಯವಿದ್ದರೆ ಮಾತ್ರ ತಿಳಿಸಿ ಎಂದು ಸೂತಾಚಾರ್ಯರನ್ನು ಕೇಳಿಕೊಳ್ಳುತ್ತಾರೆ. ಈ ಮುಖಾಂತರ ದೇವರ, ಭಾಗವತೋತ್ತಮರ ಪ್ರಸಂಗವಿಲ್ಲದೇ ಅಸಜ್ಜನರ ವಿಷಯವನ್ನು ಸರ್ವಥಾ ಕೇಳತಕ್ಕದ್ದಲ್ಲ ಎಂಬ ಪಾಠವನ್ನು ನಮಗೆ ಕಲಿಸುತ್ತಾರೆ. 

ನೈಮಿಷಾರಣ್ಯದಲ್ಲಿ ಒಂದು ಸಾವಿರ ವರ್ಷಗಳ ಜ್ಞಾನಸತ್ರ ಮುಗಿಯುವವರೆಗೆ ಅಲ್ಲಿಗೆ ಬಂದು ಸೇರಿದ್ದ ಮನುಷ್ಯರಿಗೆ ಸಹಿತ ಸಾವುಂಟಾಗದಂತೆ, ಯಮಧರ್ಮ, ಮುಖ್ಯಪ್ರಾಣ, ನರಸಿಂಹರನ್ನು ಶೌನಕರು ಪ್ರಾರ್ಥಿಸಿ ಅಲ್ಲಿ ಆ ದೇವತೆಗಳನ್ನು ಪೂಜಿಸುತ್ತಿದ್ದರು ಎಂಬ ಅಪೂರ್ವ ಪ್ರಮೇಯದ ವಿವರಣೆ ಇಲ್ಲಿದೆ. ಇಷ್ಟು ದೀರ್ಘ ಆಯುಷ್ಯವನ್ನು ಪಡೆದು, ಅಸಜ್ಜನರ ಕಥೆಯನ್ನು ಕೇಳಿ ಅದನ್ನು ಹಾಳು ಮಾಡಿಕೊಳ್ಳಬಾರದು ಎಂಬ ದಿವ್ಯ ಸಂದೇಶವನ್ನು ಈ ಪ್ರಶ್ನೆಯ ಮುಖಾಂತರ ಶ್ರೀ ಶೌನಕರು ನಮಗೆ ನೀಡುತ್ತಾರೆ. 

ವಿಧವಿಧವಾದ ಕ್ರಮದಲ್ಲಿ ಆಯುಷ್ಯವನ್ನು ಕಳೆದುಕೊಳ್ಳುವ ಚಿತ್ರಣವಿರುವ ಶ್ರೀ ಗೋಪಾಲದಾಸಾರ್ಯರ “ಹ್ಯಾಂಗೆ ಮಾಡಲಯ್ಯ ಕೃಷ್ಣ ಪೋಗುತಿದೆ ಆಯುಷ್ಯ” ಎಂಬ ಹಾಡಿನ ಅರ್ಥಾನುಸಂಧಾನವೂ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

अथ षोडशोध्यायः। 
सूत उवाच — 
ततः परीक्षिद् द्विजवर्यशिक्षया महीं महाभागवतः शशास ह।
यथा हि सूत्यामभिजातकोविदाः समादिशन् विप्र महद्गुणांस्तथा		।। १ ।।
स उत्तरस्य तनयामुपयेम इरावतीम्।
जनमेजयादींश्चतुरस्तस्यामुत्पादयत् सुतान्			।। २ ।।
आजहाराश्वमेधांस्त्रीन् गङ्गायां भूरिदक्षिणान्।
शारद्वतं गुरुं कृत्वा देवा यत्राक्षिगोचराः				।। ३ ।।
निजग्राहौजसा धीरः कलिं दिग्विजये क्वचित्।
नृपलिङ्गधरं शूद्रं घ्नन्तं गोमिथुनं पदा				।। ४ ।।
शौनक उवाच — 
कस्य हेतोर्निजग्राह कलिं दिग्विजये नृपः।
नृदेवचिह्नधृक् शूद्र कोऽसौ गां यः पदाऽहनत्			।। ५ ।।
भागवततात्पर्यम् — कोऽसावित्याक्षेपः। कलिमित्युक्तत्वात् ।
अनन्ततीर्थीयम् — यो गां पदाऽहनत् असौ नृपलिङ्गधरः शूद्रः कः कष्टः शूद्रादप्यतिकष्टो हि। अक्षेपार्थे द्वितीयः किंशब्दः। 
तत् कथ्यतां महाभाग यदि विष्णुकथाश्रयम्।
अथ वाऽस्य पदाम्भोजमकरन्दलिहां सताम्।
किमन्यैरसदालापैरायुषो यदसद्व्ययः।
भागवततात्पर्यम् — अथेति पक्षान्तरे । वा यदि । अन्यथा चेदायुषोऽसद्व्यय इत्यर्थः । “यद्यर्थे च विकल्पार्थे वाशब्दः समुदीर्यते” इति नाममहोदधौ । 

क्षुद्रायुषां नृणामङ्ग मर्त्यानां मृतिमृच्छताम्।
इहोपहूतो भगवान् मृत्युः शामित्रकर्मणि।
न कश्चिन् म्रियते तावद् यावदास्त इहान्तकः			।। ६ ।।
एतदर्थं हि भगवानाहूतः परमर्षिभिः।
अहो नृलोके पीयेत हरिलीलामृतं वचः				।। ७ ।।
भागवततात्पर्यम् — एतदर्थं हि मृत्युरुपहूतः । अहो नृलोके पीयेतेति ।
मन्दस्य मन्दप्रज्ञस्य वयो मन्दायुषश्च वै।
निद्रया ह्रियते नक्तं दिवा च व्यर्थकर्मभिः			।। ९ ।।


Play Time: 53:34

Size: 7.60 MB


Download Upanyasa Share to facebook View Comments
7307 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  12:28 PM, 17/05/2019

  😫😫🙏🙏😫😫 ನಿಜ ಆಚಾರ್ಯರೆ
 • Santosh,Gulbarga

  5:30 PM , 11/03/2018

  ಶ್ರೀ ಗುರುಗಳಿಗೆ ಧನ್ಯವಾದಗಳು.....
 • Sathyanarayana .HP.,Mysuru

  6:36 PM , 16/02/2018

  Ee bhagavannu kelidanantara nanna yochanegalu badalagive matugalilladiddaru sare aayassu kaleyuva matu mattu yochane beda. Nannageevada bhakthi yenda namaskaragalu
 • P N Deshpanse,Bangalore

  1:26 PM , 16/02/2018

  S.Namaskargalu.Anugravirli
 • Santosh,Gulbarga

  10:14 AM, 16/02/2018

  ಶ್ರೀ ಗುರುಗಳಿಗೆ ಅನಂತ ಧನ್ಯವಾದಗಳು.....
 • Shantha raghothamachar,Bengaluru

  10:46 AM, 15/02/2018

  ನಮಸ್ಕಾರ ಗಳು.ಮನುಷ್ಯ ಜನುಮದ ಸಾರ್ಥಕತೆ ಮಾಡಿಕೊಳ್ಳಲು ಎಚ್ಚರಿಕೆ ಮನಮುಟ್ಟುವಂತೆ ಇದೆ ನಮೋನಮಃ
 • Deshmukh seshagiri rao,Banglore

  8:01 AM , 15/02/2018

  ಶ್ರೀ ಗುರುಗಳಿಗೆ ನನ್ನ ಅನಂತ ಅನಂತ ವಂದನೆಗಳು
 • Niranjan Kamath,Koteshwar

  6:55 AM , 15/02/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಸ್ಪಷ್ಟ ವಾಗಿ , ಸರಿಯಾಗಿ ಹೇಳಿದ್ದೀರಿ ಗುರುಗಳೇ, ನಾವು ಈ ರೀತಿಯ ನಿಕೃಷ್ಟ ಬದುಕನ್ನು ಬದುಕುತ್ತಿದ್ದೆವೆ.ಯಾವುದೇ ಭಗವತ್ ಪ್ರೀತ ಕಾರ್ಯ ವಿಲ್ಲವಾಗಿದೆ. ಆ ಶ್ರೀಮನ್ ನಾರಾಯಣ ಸ್ಮರಣೆ ಸದಾ ಕಾಲ ಬಂದು, ನಿಮ್ಮಂತಹ ಪುಣ್ಯವಂತರಿಂದ ಶ್ರೀಮದ್ ಭಾಗವತ ಕೇಳಿಯಾದರು ನಮ್ಮ ಮಂದಮತಿ ಹಳಿದು , ಸನ್ಮಾರ್ಗದಲ್ಲಿ ನಡೆಯುವಂತಗಲಿ ಎಂದು ಬೇಡುತ್ತೇನೆ. ಧನ್ಯೋಸ್ಮಿ.