Upanyasa - VNU638

ಶ್ರೀಮದ್ ಭಾಗವತಮ್ — 122 — ದೇವರ ಗುಣಗಳು - 02

ದೇವರಲ್ಲಿನ ತ್ಯಾಗ, ಸಂತೋಷ, ಆರ್ಜವ, ಶಮ, ದಮ, ತಪಸ್ಸು ಮತ್ತು ಸಾಮ್ಯ ಎಂಬ ಗುಣಗಳ ಚಿಂತನೆ ಇಲ್ಲಿದೆ. 

ದೇವರಲ್ಲಿ ಯಾವ ಕಾರಣಕ್ಕೆ ದುಃಖವಿಲ್ಲ, ಜೀವರಿಗೆ ಯಾಕಾಗಿ ದುಃಖ ಉಂಟಾಗುತ್ತದೆ, ಆ ದುಃಖವನ್ನು ಕಳೆದುಕೊಳ್ಳಲು ಮಾಡಬೇಕಾದ ಉಪಾಸನೆ ಏನು ಎಂಬ ಪ್ರಶ್ನೆಗೆ ಉತ್ತರ ನೀಡುವ ಮಹತ್ತ್ವದ ಪ್ರಮೇಯದ ವಿವರಣೆ, ದೇವರ ಮನಸ್ಸು, ಮಾತು, ಕೃತಿಗಳು ಎಂದಿಗೂ ಏಕಪ್ರಕಾರವಾದದ್ದು, ದೇವರ ರೂಪಗಳಲ್ಲಿ ಸರ್ವಥಾ ಭೇದವಿಲ್ಲ, ದೇವರ ಯಾವ ಗುಣವನ್ನು ಉಪಾಸಿಸುವದರಿಂದ ನಮಗೆ ಇಂದ್ರಿಯನಿಗ್ರಹ ದೊರೆಯುತ್ತದೆ ಮುಂತಾದ ವಿಷಯಗಳ ನಿರೂಪಣೆ ಇಂದಿನ ಉಪನ್ಯಾಸದಲ್ಲಿ. 

ಇಲ್ಲಿ ವಿವರಣೆಗೊಂಡ ಭಾಗವತದ ಮತ್ತು ಭಾಗವತತಾತ್ಪರ್ಯದ ವಚನಗಳು — 


सत्यं शौचं दया दानं त्यागः सन्तोष आर्जवम्।
शमो दमस्तपः साम्यं तितिक्षोपरतिः श्रुतम्			।। २६ ।।

“शमः प्रियादिबुद्ध्युज्झा क्षमा क्रोधाद्यनुत्थितिः । 
महाविरोधकर्तुश्च सहनं तु तितिक्षणम्” इति पाद्मे ।

Play Time: 46:34

Size: 7.60 MB


Download Upanyasa Share to facebook View Comments
11035 Views

Comments

(You can only view comments here. If you want to write a comment please download the app.)
 • Sowmya,Bangalore

  12:06 PM, 14/11/2022

  ಗುರುಗಳಿಗೆ ನಮಸ್ಕಾರ, ದೇವರ ಗುಣಗಳು ಸಮ್ಮರಣೆ ಸದಾ ಕಾಲ ನಮಗೆ ಬರುವಂತಾಗಲಿ ಸ್ವಾಮಿ 🙏🙏🙏
 • Latha Ramesh,Coimbatore

  9:13 AM , 19/04/2018

  Namaskaragalu Gurugalige 🙏🙏🙏🙏
 • ಸುದರ್ಶನ ಶ್ರೀ. ಲ.,ಬೆಂಗಳೂರು

  8:23 PM , 02/03/2018

  ಗುರುಗಳಿಗೆ ಅನಂತ ಪ್ರಣಾಮಗಳು 🙏😊
  
  ಕರ್ಮದೊಳಗೆ ಭಗವಂತ ಇದ್ದಾನೆ ಎಂದು ಹೇಳಿದ್ದೀರಿ. ಹೀಗಂದರೇನು ?
  
  ಭಗವಂತನ ಸತ್ಯ ಎಂಬ ಗುಣದೊಳಗೆ ಸಂತೋಷವೂ ಸೇರಬೇಕಲ್ಲವೆ ಗುರುಗಳೆ🙏

  Vishnudasa Nagendracharya

  ಈ ಉಪನ್ಯಾಸದಲ್ಲಿಯೇ ವಿವರಿಸಿದ್ದೇನೆ. ಹಿಂದಿನ ಉಪನ್ಯಾಸಗಳಲ್ಲಿಯೂ ವಿವರಣೆ ಬಂದಿದೆ. ದೃಷ್ಟಾಂತದ ಮುಖಾಂತರ ಮತ್ತೊಮ್ಮೆ ವಿವರಿಸುತ್ತೇನೆ. 
  
  ಮನಸ್ಸಿಗೆ ಮುದ ನೀಡುವ ಭಾವ ಆನಂದ. ಮತ್ತೂ ಬೇಕು ಎಂಬ ಹಪಹಪಿಕೆ ಇಲ್ಲದ ಆನಂದ ಸಂತೋಷ. 
  
  ನಮಗೆ ಹಸಿವಾಗಿದೆ. ಮೊದಲ ತುತ್ತು ತಿನ್ನುತ್ತೇವೆ. ತುಂಬ ಆನಂದವಾಗುತ್ತದೆ. ಆದರೆ ತೃಪ್ತಿ ಉಂಟಾಗುವದಿಲ್ಲ. ರುಚಿಯಾದ ಶುಚಿಯಾದ ಪದಾರ್ಥವನ್ನು ತಿಂದು ಹೊಟ್ಟೆ ತುಂಬುವ ಸಂದರ್ಭದಲ್ಲಿ ಸಂತೃಪ್ತಿಯುಂಟಾಗುತ್ತದೆ. ಮತ್ತೂ ಬೇಕು ಎಂದೆನಿಸುವದಿಲ್ಲ. ಅದು ಸಂತೋಷ. 
  
  ಕರ್ಮದಲ್ಲಿ ದೇವರಿದ್ದಾನೆ ಎಂದರೆ, ಕ್ರಿಯೆಯಲ್ಲಿ ದೇವರಿದ್ದಾನೆ ಎಂದರ್ಥ. ಎಲ್ಲ ಪದಾರ್ಥಗಳಲ್ಲಿ ದೇವರಿರುವಂತೆ, ಕರ್ಮದಲ್ಲಿಯೂ ದೇವರಿದ್ದಾನೆ. 
  
  ಬರೆಯುವದು, ಮಾತನಾಡುವದು ಒಂದು ಕ್ರಿಯೆ. ಆ ಕ್ರಿಯೆಯಲ್ಲಿ ದೇವರಿರುವದಕ್ಕಾಗಿಯೇ ಆ ಕ್ರಿಯೆ ಅಸ್ತಿತ್ವದಲ್ಲಿದೆ. 
 • Santosh,Gulbarga

  5:28 PM , 11/03/2018

  ಶ್ರೀ ಗುರುಗಳಿಗೆ ಧನ್ಯವಾದಗಳು.....
 • Jayashree Karunakar,Bangalore

  11:40 AM, 19/02/2018

  ಗುರುಗಳೆ
  
  ನಮ್ಮ ಮನೆ ಆಕಸ್ಮಿಕವಾಗಿ ಬಿದ್ದು ಹೋದರೆ ನಮಗೆ ದುಃಖವಾಗುತ್ತದೆ, ಆದರೆ ನಾವು ಕಟ್ಟಿರುವ ಮನೆಯನ್ನು ನಾವೇ ಕೆಡವಿದಾಗ, ನಮಗೆ ದುಃಖ ಉಂಟಾಗುವುದಿಲ್ಲ, ಯಾಕೆಂದರೆ ನಮಗೆ ಮತ್ತೆ ಕಟ್ಟುವ ಸಾಮಥ್ಯ೯ವಿದೆ ಎಂದಿರಿ.. 
  ನಮ್ಮ ಎಲ್ಲಾ ದುಃಖಗಳಿಗೊ ಅದೇ ಕಾರಣ, ನಮಗೆ ಮರಳಿ ಪಡೆಯುವ ಸಾಮ೯ಥ್ಯವಿದ್ದಾಗ, ಎನನ್ನು ಕಳೆದುಕೊಂಡಾಗಲೂ ದುಃಖವಾಗುವುದಿಲ್ಲ.
  
   ಆದರೆ ಭಗವಂತನ ಅಭಿಮಾನ ತ್ಯಾಗಕ್ಕೆ ಇದು ಹೇಗೆ ಸಮ೯ಥವಾದ ಉದಾಹರಣೆ ಆಗುತ್ತದೆ ?
  
  ಭಗವಂತನಲ್ಲೂ ನಾವು ಈ ರೀತಿಯಾದ ಚಿಂತನೆ ಮಾಡಬಹುದಲ್ಲ... ಭಗವಂತ ಸವ೯ ಸಮ೯ಥ , ತಾನೆ ನಿಮಿ೯ಸಿದ ಬ್ರಹ್ಮಾಂಡವನ್ನು ಪುನಃ ನಿಮಾ೯ಣ ಮಾಡುವ ಸಾಮ೯ಥ್ಯವಿರುವುದರಿಂದಾಗಿಯೆ  ಅವನಿಗೆ ದುಃಖವಿಲ್ಲ... 
  ಇದರಿಂದ ಭಗವಂತನಲ್ಲಿರುವ ಅಭಿಮಾನತ್ಯಾಗ ಅನ್ನುವ ಗುಣವಿರಿವುದರಿಂದಲೆ ಅವನಲ್ಲಿ ದುಃಖವಿಲ್ಲ ಅನ್ನುವುದು ಇಲ್ಲಿ ಹೇಗೆ ನಿಣ೯ಯವಾಗುತ್ತದೆ ?
  
  ಭಗವಂತ ತನ್ನಿಂದ ತಾನೆ ಸಂತೋಷ ಅನುಭಿಸುವ ಸಾಮ೯ಥ್ಯವಿರುವ ಕಾರಣದಿಂದಾಗಿಯೆ, ಅವನ ಸಂತೋಷಕ್ಕೆ ಇತರರ ಅವಶ್ಯಕತೆಯಿಲ್ಲ...ಹೀಗಾಗಿ ಭಗವಂತನ ಅಭಿಮಾನ ತ್ಯಾಗವನ್ನು ಇಲ್ಲಿ ಹೇಗೆ ಅಥ೯ ಮಾಡಿಕೊಳ್ಳುವುದು ?
  
  ಪ್ರಶ್ನೆಯಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ ಗುರುಗಳೆ.

  Vishnudasa Nagendracharya

  ಮೊದಲನೆಯ ಉತ್ತರ
  
  ನಮ್ಮಲ್ಲಿ ಅಭಿಮಾನವಿದೆ, ಅಭಿಮಾನಪೂರ್ವಕವಾಗಿಯೇ ದುಃಖ ಎನ್ನುವದನ್ನು ಅರ್ಥ ಮಾಡಿಸಲು ನೀಡಿದ ದೃಷ್ಟಾಂತವದು. ದೇವರಲ್ಲಿ ಅಭಿಮಾನವಿಲ್ಲ ಎನ್ನುವದಕ್ಕಾಗಿ ಅಲ್ಲ. 
  
  ಎರಡನೆಯ ಉತ್ತರ — 
  
  ಮತ್ತು, ನಮ್ಮ ಮನೆ ಬಿದ್ದು ಹೋಗುವ ಸಂದರ್ಭದಲ್ಲಿದ್ದಾಗ, ನಮಗೆ ಪುನಃ ಕಟ್ಟುವ ಸಾಮರ್ಥ್ಯವಿದ್ದಾಗ, ಮನೆಯನ್ನು ಕೆಡವಿದರೆ ದುಃಖವಾಗುವದಿಲ್ಲ. 
  
  ಆದರೆ ಮನೆ ಕಟ್ಟಿ ಗೃಹಪ್ರವೇಶ ಮಾಡಿ ಮಾರನೆಯ ದಿವಸ ಮನೆಯನ್ನು ಒಡೆಯಲು ಹೊರಟರೆ? ಒಡೆಯುವ ವ್ಯಕ್ತಿಗೇ ದುಃಖವಾಗುತ್ತದೆ. 
  
  ಹಾಗೆ, ಬ್ರಹ್ಮಾಂಡ ಬಿದ್ದು ಹೋಗುವ ಸಂದರ್ಭದಲ್ಲಿದ್ದರೆ ಅದನ್ನು ಬೀಳಿಸಿ ದೇವರು ಕಟ್ಟುತ್ತಾನೆ ಎನ್ನಬಹುದು. ಆದರೆ ಬ್ರಹ್ಮಾಂಡ ಅತ್ಯಂತ ಸುದೃಢವಾಗಿದೆ. ಆದರೂ ದೇವರು ಅದನ್ನು ಒಡೆಯುತ್ತಾನೆ. ಹೀಗಾಗಿ ಅಭಿಮಾನವಿಲ್ಲ ಎಂದೇ ನಿರೂಪಿತವಾಗುತ್ತದೆ. 
  
  ಮೂರನೆಯ ಉತ್ತರ — 
  
  ಮನೆ ಒಡೆಯುವ ಪ್ರಕ್ರಿಯೆಯಲ್ಲಿ ದುಃಖ ಮತ್ತು ಸುಖ ಎರಡೂ ನಮ್ಮಲ್ಲಿ ವಿಭಿನ್ನ ಸಂದರ್ಭಗಳಿರುತ್ತವೆ. ಮನೆ ಒಡೆಯುವ ಪ್ರಕ್ರಿಯೆಯಿಂದ ದುಃಖವೇ ಉಂಟಾಗಬೇಕು ಎಂದೇನು ಇಲ್ಲ. ದುಃಖವಿರುವದಿಲ್ಲ ಎನ್ನುವದೂ ನಿರ್ಣೀತ. ದುಃಖವಾಗದೇ ಇರಲು ಕಾರಣ, ನಮಗೆ ಅಭಿಮಾನ ಕಳೆದು ಹೋದದ್ದು. 
  
  ಹಾಗೆ, ದೇವರಲ್ಲಿ ಮಿಥ್ಯಾಭಿಮಾನವೇ ಇಲ್ಲದ ಕಾರಣಕ್ಕೆ ಅವನಿಗೆ ಬ್ರಹ್ಮಾಂಡನಾಶದಿಂದ ದುಃಖವುಂಟಾಗುವದಿಲ್ಲ ಎಂದು ನಿರೂಪಿಸುವದಕ್ಕಾಗಿ ಈ ದೃಷ್ಟಾಂತವೇ ಹೊರತು ದೇವರಲ್ಲಿ ಮಿಥ್ಯಾಭಿಮಾನವಿಲ್ಲ ಎಂದು ತಿಳಿಸಲು ಹೊರಟ ದೃಷ್ಟಾಂತವಲ್ಲ. 
  
  ದೇವರಿಗೆ ಮಿಥ್ಯಾಭಿಮಾನ ಇಲ್ಲ ಎನ್ನುವದು ಶಾಸ್ತ್ರಗಳಿಂದಲೇ ಸಿದ್ಧ. 
 • ಸುದರ್ಶನ ಶ್ರೀ. ಲ.,ಬೆಂಗಳೂರು

  7:38 PM , 19/02/2018

  ಗುರುಗಳಿಗೆ ಅನಂತ ಪ್ರಣಾಮಗಳು 🙏😊
  
  ಅಭಿಮಾನವಿಲ್ಲದೆ ಭಕ್ತರ ಮೇಲೆ ಭಗವಂತ ಪ್ರೀತಿ ಅಥವಾ ಹೇಗೆ ತೋರುವನು?
  
  ಕರ್ಮದೊಳಗೆ ಭಗವಂತ ಇದ್ದಾನೆ ಎಂದು ಹೇಳಿದ್ದೀರಿ. ಇದು ಅರ್ಥವಾಗಿಲ್ಲ. ಇನ್ನಷ್ಟು ವಿವರಿಸಿ ಗುರುಗಳೆ🙏

  Vishnudasa Nagendracharya

  ಉಪನ್ಯಾಸದಲ್ಲಿಯೇ ಉತ್ತರವಿದೆ. 
  
  ಶ್ರೀಮದಾಚಾರ್ಯರು ಹೇಳುತ್ತಿರುವದು ದೇವರಿಗೆ ಮಿಥ್ಯಾಭಿಮಾನವಿಲ್ಲ ಎಂದು. ಅಂದರೆ ತನ್ನದಲ್ಲದ್ದನ್ನು ತನ್ನದು ಎಂದು ದೇವರು ತಿಳಿಯುವದಿಲ್ಲ. 
  
  ತನ್ನದ್ದನ್ನು ತನ್ನದು ಎಂದು ತಿಳಿದೇ ತಿಳಿಯುತ್ತಾನೆ. 
  
  ಒಬ್ಬ ಉತ್ತಮ ಪುರುಷ ಪರಸ್ತ್ರೀಯರನ್ನು ತಾಯಿಯಂತೆ ಕಾಣುತ್ತಾನೆ ಎಂದರೆ ತನ್ನ ಹೆಂಡತಿಯನ್ನೂ ತಾಯಿಯಂತೆ ಕಾಣುತ್ತಾನೆ ಎಂದೆ ಏಕೆ ಅರ್ಥವಾಗುತ್ತದೆ. 
  
  ಹಾಗೆ, ಪರಮಾತ್ಮನಿಗೆ ಮಿಥ್ಯಾಭಿಮಾನವಿಲ್ಲ ಎಂದರೆ ಅಭಿಮಾನವೇ ಇಲ್ಲ ಎಂದು ಹೇಗೆ ಅರ್ಥ ಬರುತ್ತದೆ. 
  
  “ಡಂಗುರವ ಹೊಯಿಸಯ್ಯ ನಿನ್ನವನೆಂದು” ಎಂದು ದಾಸರಾಯರು ಹೇಳುತ್ತಾರೆ. ನಾವು “ದೇವರವರು” ಆಗಬೇಕಾದರೆ ದೇವರು ನಮ್ಮಲ್ಲಿ ಅಭಿಮಾನ ಪ್ರೀತಿ ಕಾರುಣ್ಯಗಳನ್ನು ತೋರಲೇಬೇಕಲ್ಲವೇ. 
  
  ತನ್ನದ್ದನ್ನು ತನ್ನದು ಎಂದು ತಿಳಿಯುವ ಸತ್ಯಾಭಿಮಾನ ದೇವರಲ್ಲಿದೆ. ಮಿಥ್ಯಾಭಿಮಾನವಿಲ್ಲ. 
  
  
 • Nagarajan,Coimbatore

  5:18 AM , 23/02/2018

  Namaskara gurugale last 3 days I have received a message like new bhagavathe file uploaded ,but I did not received any file please kindly help me

  Vishnudasa Nagendracharya

  Samskrutha Surabhi work is in progress. So Bhagavata Upanyasas are stopped for a while. 
 • Nagarajan,Coimbatore

  5:34 AM , 23/02/2018

  Gurugale namaskara, my last received file sb 122
 • prema raghavendra,coimbatore

  10:49 AM, 22/02/2018

  Anantha namaskara! Danyavada!
 • P N Deshpanse,Bangalore

  1:53 PM , 20/02/2018

  S.Nanasjargalu.Anugrahvirli
 • Niranjan Kamath,Koteshwar

  11:07 PM, 19/02/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಧನ್ಯೋಸ್ಮಿ.
 • ಸುದರ್ಶನ ಶ್ರೀ. ಲ.,ಬೆಂಗಳೂರು

  8:03 PM , 19/02/2018

  ಭಗವಂತನ ಸತ್ಯ ಎಂಬ ಗುಣದಲ್ಲಿಯೇ ಸಂತೋಷ ಎಂಬ ಗುಣ ಸೇರಿರಬೇಕಲ್ಲವೇ ಗುರುಗಳೆ🙏 ?
 • Shantha raghothamachar,Bengaluru

  10:31 AM, 19/02/2018

  ನಮೋನಮಃ
 • Deshmukh seshagiri rao,Banglore

  9:13 AM , 19/02/2018

  ಶ್ರೀ ಗುರುಗಳಿಗೆ ನನ್ನ ಅನಂತ ಅನಂತ ವಂದನೆಗಳು