Upanyasa - VNU642

ಶ್ರೀಮದ್ ಭಾಗವತಮ್ — 125 — ದೇವರ ಗುಣಗಳು — 05

22/04/2018

ಸ್ಮೃತಿ, ಸ್ವಾತಂತ್ರ್ಯ, ಕೌಶಲ ಎಂಬ ಗುಣಗಳ ವಿವರಣೆ ಇಲ್ಲಿದೆ. 

ದೇವರಲ್ಲಿ ಸ್ಮೃತಿ ಎಂಬ ಗುಣವಿದೆ ಎಂದು ಭಾಗವತ ಹೇಳುತ್ತದೆ. ಸ್ಮೃತಿ ಎಂದರೆ ನೆನಪು. ನೆನಪು ಎಂಬ ಗುಣವಿರಬೇಕಾದರೆ ಮರೆವು ಎಂಬ ದೋಷವೂ ಇರಬೇಕು. ಅಂದಮೇಲೆ ದೇವರಲ್ಲಿ ನೆನಪು ಎಂಬ ಗುಣ ಹೇಗಿರಲು ಸಾಧ್ಯ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಟೀಕಾಕೃತ್ಪಾದರು ಈಶಾವಾಸ್ಯದ ಭಾಷ್ಯ ಟೀಕಾ ಗ್ರಂಥಗಳಲ್ಲಿ ನೀಡಿರುವ ಉತ್ತರದ ವಿವರಣೆ ಇಲ್ಲಿದೆ. 

ದೇವರಲ್ಲಿನ ಕೌಶಲ ಎಷ್ಟು ಪರಮಾದ್ಭುತವಾದದ್ದು, ಅದರ ಉಪಾಸನೆಯಿಂದ ಜೀವರು ಎಂತಹ ಉತ್ತಮವಾದ ಫಲಗಳನ್ನು ಪಡೆಯುತ್ತಾರೆ ಎನ್ನುವದನ್ನು ದೃಷ್ಟಾಂತಗಳ ಸಮೇತವಾಗಿ ಇಲ್ಲಿ ವಿವರಿಸಲಾಗಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ವಚನ —


ಸತ್ಯಂ ಶೌಚಂ ದಯಾ ದಾನಂ ತ್ಯಾಗಃ ಸಂತೋಷ ಆರ್ಜವಮ್।
ಶಮೋ ದಮಸ್ತಪಃ ಸಾಮ್ಯಂ ತಿತಿಕ್ಷೋಪರತಿಃ ಶ್ರುತಮ್ ।। ೨೬ ।।

ಜ್ಞಾನಂ ವಿರಕ್ತಿರೈಶ್ವರ್ಯಂ ಶೌರ್ಯಂ ತೇಜೋ ಧೃತಿಃ ಸ್ಮೃತಿಃ।
ಸ್ವಾತಂತ್ರ್ಯಂ ಕೌಶಲಂ ಕಾಂತಿಃ ಸೌಭಗಂ ಮಾರ್ದವಂ ಕ್ಷಮಾ ।। ೨೭ ।।

ಪ್ರಾಗಲ್ಭ್ಯಂ ಪ್ರಶ್ರಯಃ ಶೀಲಂ ಸಹ ಓಜೋ ಬಲಂ ಭಗಃ।
ಗಾಂಭೀರ್ಯಂ ಸ್ಥೈರ್ಯಮಾಸ್ತಿಕ್ಯಂ ಕೀರ್ತಿರ್ಮಾನೋಽನಹಂಕೃತಿಃ ।। ೨೮ ।।

ಏತೇ ಚಾನ್ಯೇ ಚ ಭಗವನ್ನಿತ್ಯಾ ಯತ್ರ ಮಹಾಗುಣಾಃ।
ಪ್ರಾರ್ಥ್ಯಾ ಮಹತ್ತ್ವಮಿಚ್ಛದ್ಭಿರ್ನ ವಿಯಂತಿ ಸ್ಮ ಕರ್ಹಿಚಿತ್ ।। ೨೯ ।।
ಭಾಗವತತಾತ್ಪರ್ಯಮ್ — ತ್ಯಾಗೋ ಮಿಥ್ಯಾಭಿಮಾನವರ್ಜನಮ್। 

“ಮಿಥ್ಯಾಭಿಮಾನವಿರತಿಸ್ತ್ಯಾಗ ಇತ್ಯಭಿಧೀಯತೇ” ಇತಿ ನಾರಾಯಣಾಧ್ಯಾತ್ಮೇ ।

ಏಕಾಂತತಃ ಶುಭಭಾಗಿತ್ವಂ ಸೌಭಾಗ್ಯಮ್ । 

“ಶುಭೈಕಭಾಗೀ ಸುಭಗೋ ದುರ್ಭಗಸ್ತದ್ವಿಪರ್ಯಯಃ” ಇತಿ ಗೀತಾಕಲ್ಪೇ ।

“ಶಮಃ ಪ್ರಿಯಾದಿಬುದ್ಧ್ಯುಜ್ಝಾ ಕ್ಷಮಾ ಕ್ರೋಧಾದ್ಯನುತ್ಥಿತಿಃ । 
ಮಹಾವಿರೋಧಕರ್ತುಶ್ಚ ಸಹನಂ ತು ತಿತಿಕ್ಷಣಮ್” ಇತಿ ಪಾದ್ಮೇ ।

“ಸ್ವಯಂ ಸರ್ವಸ್ಯ ಕರ್ತೃತ್ವಾತ್ ಕುತಸ್ತಸ್ಯ ಪ್ರಿಯಾಪ್ರಿಯೇ” ಇತಿ ಚ ಪಾದ್ಮೇ ।

“ಪ್ರಿಯಮೇವ ಯತಃ ಸರ್ವಮಪ್ರಿಯಂ ನಾಸ್ತಿ ಕುತ್ರಚಿತ್ । 
ಸ್ವಯಮೇವ ಯತಃ ಕರ್ತಾ ಶಾನ್ತೋತೋ ಹರಿರೀಶ್ವರಃ” ಇತಿ ಬ್ರಹ್ಮತರ್ಕೇ ।।

ಮಾನಃ ಪರೇಷಾಮ್ ।

“ಗುಣೈಃ ಸ್ವರೂಪಭೂತೈಸ್ತು ಗುಣ್ಯಸೌ ಹರಿರೀಶ್ವರಃ । 
ನ ವಿಷ್ಣೋರ್ನಚ ಮುಕ್ತಾನಾಂ ಕೋಪಿ ಭಿನ್ನೋ ಗುಣೋ ಮತಃ” ಇತಿ ಬ್ರಹ್ಮತರ್ಕೇ ।

Play Time: 41:07

Size: 7.60 MB


Download Upanyasa Share to facebook View Comments
4941 Views

Comments

(You can only view comments here. If you want to write a comment please download the app.)
 • Sangeetha prasanna,Bangalore

  9:52 AM , 24/04/2018

  ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .ಲಕ್ಷಂತರ ಜನ್ಮಗಲಿಂದ ಪಡೆದ ಬ್ರಾಹ್ಮಣ ಜನ್ಮವನ್ನು ಮನುಷ್ಯ ತನ್ನ ಅಜ್ಞಾನದ ಕಾರಣ ಹಾಳು ಮಾಡಿಕೊಳ್ಳಲು ಕಾರಣವೇನು ? ದಯವಿಟ್ಟು ತಿಳಿಸಿಕೊಡಿ .ಗುರುಗಳಲ್ಲಿ ಇದು ನಮ್ಮ ವಿನಮ್ರ ಪ್ರಾರ್ಥನೆ 🙏🙏🙏🙏🙏

  Vishnudasa Nagendracharya

  ಒಂದು ಕಾರಣವನ್ನು ನೀವೇ ನೀಡಿದ್ದೀರಿ. ಅಜ್ಞಾನ ಎಂದು. ಆ ಅಜ್ಞಾನಕ್ಕೂ ಕಾರಣ, ಮಾಡಿದ ದುಷ್ಟ ಕರ್ಮಗಳು. ಸತ್ಕರ್ಮಗಳನ್ನು ಮಾಡಿ ಅದರ ಫಲವಾಗಿ ಉತ್ತಮ ಜನ್ಮವನ್ನು ಪಡೆದ ಹಾಗೆ ದುಷ್ಕರ್ಮಗಳನ್ನು ಮಾಡಿ ಅದರ ಫಲವಾಗಿ ಆ ಜನ್ಮವನ್ನು ಹಾಳು ಮಾಡಿಕೊಳ್ಳುತ್ತಾನೆ, ಜೀವ. 
 • Smitha v,Hubli

  6:20 PM , 24/04/2018

  Gurugala padagalige anantha namaskaragalu.
 • Niranjan Kamath,Koteshwar

  8:14 AM , 24/04/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ದೇವರ smrathi ಎಂಬ ಮಹಾ ಗುಣದ ವ್ಯಾಖ್ಯಾನ ತುಂಬಾ ಕಾರುಣ್ಯ ಪೂರ್ಣ ವಾಗಿತ್ತು. ಧನ್ಯೋಸ್ಮಿ.