Upanyasa - VNU648

ಶ್ರೀಮದ್ ಭಾಗವತಮ್ — 131 — ಮತ್ತೊಬ್ಬರ ಪಾಪದ ಕುರಿತು

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂದು ಭಾಗವತ ಹೇಳುತ್ತದೆ ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್ ಎಂದು. ಹಾಗಾದರೆ ಮಹಾಭಾರತ ರಾಮಾಯಣ ತಾತ್ಪರ್ಯನಿರ್ಣಯ ಮಧ್ವವಿಜಯ ಮುಂತಾದ ಗ್ರಂಥಗಳಲ್ಲಿ ದುಷ್ಟರು ಮತ್ತು ಸಜ್ಜನರು ಇಬ್ಬರೂ ಮಾಡಿದ ಪಾಪಗಳನ್ನು ದಾಖಲಿಸಲಾಗಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಸಜ್ಜನರು ಮತ್ತು ದುರ್ಜನರು ಇಬ್ಬರೂ ಮಾಡಿದ ಪಾಪಗಳ ಕುರಿತು ಮಾತನಾಡುವ ಮುನ್ನ ನಮಗಿರಬೇಕಾದ ಎಚ್ಚರಗಳ ಕುರಿತು ಶ್ರೀಮದಾಚಾರ್ಯರು ನಿರ್ಣಯಿಸಿ ತಿಳಿಸಿದ ಸೂಕ್ಷ್ಮ ಪ್ರಮೇಯಗಳ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಏವಂ ಧರ್ಮೇ ಪ್ರವದತಿ ಸ ಸಮ್ರಾಡ್ ದ್ವಿಜಸತ್ತಮ।

ಸಮಾಹಿತೇನ ಮನಸಾ ವಿದಿತ್ವಾ ಪ್ರತ್ಯಚಷ್ಟ ತಮ್ ।। ೨೦ ।।

ರಾಜೋವಾಚ — 

ಧರ್ಮಂ ಬ್ರವೀಷಿ ಧರ್ಮಜ್ಞ ಧರ್ಮೋಽಸಿ ವೃಷರೂಪಧೃಕ್।

ಯದಧರ್ಮಕೃತಃ ಸ್ಥಾನಂ ಸೂಚಕಸ್ಯಾಪಿ ತದ್ ಭವೇತ್	 ।। ೨೧ ।।

ಭಾಗವತತಾತ್ಪರ್ಯಮ್ —
 
ಅಸತಾಂ ಸೂಚಕಸ್ಯ ನ ದೋಷಸ್ತಥಾsಪಿ ಸತಾಂ ನ ಸೂಚನೀಯಮಿತಿ ದರ್ಶಯಿತುಮ್।
 ಜ್ಞಾತುಂ ಶಕ್ಯತ್ವಾಚ್ಚ ರಾಜ್ಞಃ।
“ಯದ್ಯಧರ್ಮಃ ಕೃತಃ ಸದ್ಭಿರ್ನ ಸ ವಾಚ್ಯಃ ಕಥಞ್ಚನ ।

ಅಸತ್ಕೃತಮಧರ್ಮಂ ತು ವದನ್ ಧರ್ಮಮವಾಪ್ನುಯಾತ್” ಇತಿ ವ್ಯಾಸಸ್ಮೃತೌ ।।21।।

ಅಥವಾ ದೇವಮಾಯಾಯಾ ನೂನಂ ಗತಿರಗೋಚರಾ।
ಚೇತಸೋ ವಚಸಶ್ಚಾಪಿ ಭೂತಾನಾಮಿತಿ ನಿಶ್ಚಯಃ ।। ೨೨ ।।

ಭಾಗವತತಾತ್ಪರ್ಯಮ್ — 

ತಸ್ಯ ಗೋಚರತ್ವೇ ಭೂತಾನಾಮಗೋಚರೇತಿ ಜ್ಞಾಪಯಿತುಂ ವಾ ।
ತಪಃ ಶೌಚಂ ದಯಾ ಸತ್ಯಮಿತಿ ಪಾದಾಃ ಕೃತೇ ಕೃತಾಃ।

ಅಧರ್ಮಾಂಙ್ಗೈಸ್ತ್ರಯೋ ಭಗ್ನಾಃ ಸ್ಮಯಸಙ್ಗಮದೈಸ್ತವ ।। ೨೩ ।।

ಇದಾನೀಂ ಧರ್ಮ ಪಾದಸ್ತೇ ಸತ್ಯಂ ನಿರ್ವರ್ತಯೇದ್ ಯತಃ।

ತಂ ಜಿಘೃಕ್ಷತ್ಯಧರ್ಮೋಽಯಮನೃತೇನೈಧಿತಃ ಕಲಿಃ ।। ೨೪ ।।

ಇಯಂ ಚ ಭೂಮಿರ್ಭಗವತಾ ನ್ಯಾಸಿತೋರುಭರಾ ಸತೀ।

ಶ್ರೀಮದ್ಭಿಸ್ತತ್ಪದನ್ಯಾಸೈಃ ಸರ್ವತಃ ಕೃತಕೌತುಕಾ ।। ೨೫ ।।

ಶೋಚತ್ಯಶ್ರುಕಲಾ ಸಾಧ್ವೀ ದುರ್ಭಗೇವೋಜ್ಝಿತಾ ಸತೀ।

ಅಬ್ರಹ್ಮಣ್ಯಾ ನೃಪವ್ಯಾಜಾಃ ಶೂದ್ರಾ ಭೋಕ್ಷ್ಯನ್ತಿ ಮಾಮಿತಿ ।। ೨೬ ।।

Play Time: 47:28

Size: 7.60 MB


Download Upanyasa Share to facebook View Comments
5200 Views

Comments

(You can only view comments here. If you want to write a comment please download the app.)
 • Jagannath kulkarni,Bengaluru

  8:44 PM , 30/04/2018

  ಆಚಾರ್ಯರಿಗೆ ಸಿರಸಾಷ್ಟಾಂಗ ನಮಸ್ಕಾರಗಳು. ಈ ಘೋರ ಕಲಿಯುಗದಲ್ಲಿ ಸಜ್ಜನರು /ಅಸಜ್ಜನರನ್ನು ಗುರುತಿಸುವದು ಹೇಗೆ ಸ್ವಾಮಿ. ಸಂನ್ಯಾಸಿ ವೇಷ ಧಾರಿಗಳು

  Vishnudasa Nagendracharya

  ಸಂನ್ಯಾಸಿಗಳಾಗಲೀ, ಪಂಡಿತರಾಗಲೀ, ವೈದಿಕರಾಗಲೀ, ಗೃಹಸ್ಥರಾಗಲೀ ತಮ್ಮ ಧರ್ಮದ ಆಚರಣೆಯನ್ನು ಮಾಡದೆ ಕೇವಲ ಪ್ರತಿಷ್ಠೆ, ಹಣ, ಹೆಣ್ಣು, ಹೊನ್ನುಗಳಲ್ಲಿ ಆಸಕ್ತರಾಗಿದ್ದರೆ ಅವರಿಂದ ದೂರವಿರುವದು ಒಳಿತು. 
  
  ದೇವರ ಭಕ್ತಿ, ಪರೋಪಕಾರ, ತಮ್ಮ ಧರ್ಮದ ಪರಿಪಾಲನೆ, ಸತ್ಯವಚನ ಮುಂತಾದವು ಸಜ್ಜನಿಕೆಯ ಲಕ್ಷಣಗಳು. 
  
  ದೇವ-ಗುರುಗಳ ದ್ವೇಷ, ಸಮಾಜದ್ವೇಷ, ಧರ್ಮ-ಶಾಸ್ತ್ರದ ನಿಂದೆ ಮುಂತಾದವು ದುರ್ಜನರ ಲಕ್ಷಣಗಳು. 
  
  ಗೌರವಕ್ಕಾಗಿ, ಪ್ರತಿಷ್ಠೆಗಾಗಿ, ಹಣಕ್ಕಾಗಿ ಮತ್ತ್ಯಾವುದೋ ಲೌಕಿಕ ಕಾರ್ಯಗಳಿಗಾಗಿ ಧರ್ಮದ ಪರಿಪಾಲನೆಯ ನಾಟಕ ಮಾಡುವವರು ದುರ್ಜನರಿಗಿಂತ ನೀಚರು. ಕಾರಣ ದುರ್ಜನರು ಧರ್ಮದ ಬಳಿಗೇ ಬರುವದಿಲ್ಲ. ಅಧರ್ಮದ ಆಚರಣೆ ಮಾಡುತ್ತಾರೆ, ಧರ್ಮದ ನಿಂದೆ ಮಾಡುತ್ತಾರೆ. 
  
  ಆದರೆ ದಾಂಭಿಕರು ಧರ್ಮದ ಆಚರಣೆ ಮಾಡುತ್ತ ಧರ್ಮಕ್ಕೆ ಕೊಡಲಿ ಪೆಟ್ಟು ನೀಡುತ್ತಾರೆ. 
  
  ಈ ಸೂಕ್ಷ್ಮಗಳನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ಯಾರನ್ನೂ ಹೊರಗಿನ ವೇಷ ಭೂಷಣಗಳಿಂದ, ಕಾರ್ಯಕ್ರಮಗಳಿಂದ ನಂಬಬಾರದು. ನಂಬಿದರೂ ಅತಿಯಾಗಿ ನಂಬಿ ದಾಸರಾಗಬಾರದು. ವೈಯಕ್ತಿಕವಾಗಿ ಅವರನ್ನು ಕಂಡು ಸಜ್ಜನಿಕೆಯ ನಿರ್ಣಯವಾದ ಬಳಿಕವೇ ಅವರನ್ನು ಆದರಿಸಬೇಕು. 
  
  ಒಟ್ಟಾರೆ ಗುರುತಿಸುವದು ಕಷ್ಟವಾದಾಗ ಅವರ ತಪ್ಪುಗಳ ಬಗ್ಗೆ ಮಾತನಾಡಬಾರದು ಎನ್ನುವದೇ ನಿರ್ಣಯ. 
 • Jagannath kulkarni,Bengaluru

  8:47 PM , 30/04/2018

  ಧಾರಿಗಳು ಜೈಲಿಗೆ ಹೋಗುತ್ತಿದ್ದಾರೆ
 • Jayashree Karunakar,Bangalore

  3:04 PM , 30/04/2018

  ಗುರುಗಳೆ
  ಹಿಂದೆ ದೇವಸ್ಥಾಗಳಿಗೆ ಹೋದಾಗ ಈ ಕಲ್ಲಿನ ವಿಗ್ರಹವೇ ಭಗವಂತ ಅಂತ ತಿಳಿದು ನಮಸ್ಕಾರ ಮಾಡುತ್ತಿದ್ದೆವು.ನಾವು ದೖಹಿಕವಾಗಿ ಅಲ್ಲಿದ್ದರೂ ಮನಸ್ಸು ಮಾತ್ರ ಲೋಕವಾತೆ೯ಯಲ್ಲಿ ಮುಳುಗಿರುತ್ತಿತ್ತು.
  ಆದರೆ ಇದೀಗ ಶ್ರೀಮದ್ಭಾಗವತದ ನಿರಂತರ ಶ್ರವಣದಿಂದಾಗಿ, "ಸಕಲ ವಸ್ತುಗಳಲ್ಲಿಯೂ ವ್ಯಾಪ್ತನಾಗಿರುವ ಭಗವಂತನೇ ಈ ಕಲ್ಲಿನ ವಿಗ್ರಹದಲ್ಲಿಯೂ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ" ಎಂಬ ತಿಳುವಳಿಕೆಯೊಂದಿಗೆ ನಮಸ್ಕಾರ ಮಾಡುವಂತಾಗಿರುವದು, ತಾವು ನೀಡುತ್ತಿರುವ ಜ್ಞಾನದ ಫಲ. 
  ದೖಹಿಕವಾಗಿ ಗೃಹಕೃತ್ಯದಲ್ಲಿ ಮುಳುಗಿದ್ದರೂ ಮನಸ್ಸು ಮಾತ್ರ ಭಗವಂತನ ಚಿಂತನೆ ಮಾಡುವಂತಾಗುತ್ತಿರುವದು ನಮ್ಮ ಸೌಭಾಗ್ಯ.
  ನಮ್ಮಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸುತ್ತಿರುವ ನಿಮಗೆ ಭಕ್ತಿಯ ನಮಸ್ಕಾರಗಳು.
 • Niranjan Kamath,Koteshwar

  11:12 AM, 30/04/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂಬ ಸೂಕ್ಷ್ಮ ವಿಚಾರದ ವಿವರಣೆಯನ್ನು ಬಹಳ ಗೂಢವಾಗಿ ತಿಳಿಸಿದ್ದೀರಿ. ಸಜ್ಜನರ ಪಾಪದ ಬಗ್ಗೆ ಆಡುವುದು ಇತ್ಯಾದಿಗಳ ಸಕಲ ವಿವರಣೆ ಮಹತ್ವದ್ದು. ಧನ್ಯೋಸ್ಮಿ.
 • Sudha,Blore

  3:45 AM , 30/04/2018

  Namaste dhanyavadagalu