Upanyasa - VNU654

ಶ್ರೀಮದ್ ಭಾಗವತಮ್ — 137 — ಶೃಂಗಿಯ ಶಾಪ

ಬೇಟೆಯನ್ನಾಡಿ ಹಸಿವು ಬಾಯಾರಿಕೆ ಶ್ರಮದಿಂದ ಬಳಲುತ್ತಿದ್ದ ಪರೀಕ್ಷಿದ್ರಾಜರು ನೀರನ್ನು ಅರಸುತ್ತ ಶಮೀಕರ ಆಶ್ರಮಕ್ಕೆ ಬಂದು ನೀರನ್ನು ಕೇಳುತ್ತಾರೆ. ಆದರೆ ಸಮಸ್ತ ಜಗತ್ತಿನ ಪರಿವೆಯನ್ನು ಮರೆತು ಶಮೀಕರು ಅಂತರ್ಯಾಮಿಯನ್ನು ಕಾಣುತ್ತ ಕುಳಿತಿರುತ್ತಾರೆ. ಪ್ರಾರಬ್ಧಕರ್ಮದ ವಶದಿಂದ ಇದನ್ನು ಅರಿಯದ ಮಹಾರಾಜರು, ಸಿಟ್ಟಿನಿಂದ ಅವರ ಕೊರಳಿಗೆ ಸತ್ತ ಹಾವೊಂದನ್ನು ಹಾಕಿ ಹೊರಟುಬಿಡುತ್ತಾರೆ. ಸುದ್ದಿಯನ್ನು ಕೇಳಿದ ಶೃಂಗಿ — ಶಮೀಕರ ಮಗ — ಇನ್ನೇಳು ದಿವಸಗಳಲ್ಲಿ ರಾಜನನ್ನು ತಕ್ಷಕ ಕೊಲ್ಲಲಿ ಎಂದು ಭಯಂಕರ ಶಾಪನ್ನು ನೀಡಿಬಿಡುತ್ತಾನೆ. 

ಮತ್ತೊಬ್ಬರು ಮಾಡುವ ಗೌರವ-ಮಾನಗಳಿಗಾಗಿ ಹಪಹಪಿಸುವ ಮನುಷ್ಯಬುದ್ಧಿಗೆ ಇಲ್ಲಿ ದೊಡ್ಡ ಪಾಠವಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಏಕದಾ ಧನುರುದ್ಯಮ್ಯ ವಿಚರನ್ ಮೃಗಯಾಂ ವನೇ।
ಮೃಗಾನನುಗತಃ ಶ್ರಾನ್ತಃ ಕ್ಷುಧಿತಸ್ತೃಷಿತೋ ಭೃಶಮ್ ।। ೨೪ ।।
ಜಲಾಶಯಮಚಕ್ಷಾಣಃ ಪ್ರವಿವೇಶ ಸ ಆಶ್ರಮಮ್।
ದದರ್ಶ ಮುನಿಮಾಸೀನಂ ಶಾನ್ತಂ ಮೀಲಿತಲೋಚನಮ್ ।। ೨೫ ।।
ಪ್ರತಿರುದ್ಧೇನ್ದ್ರಿಯಪ್ರಾಣಮನೋಬುದ್ಧಿಮುಪಾರತಮ್।
ಸ್ಥಾನತ್ರಯಾತ್ ಪರಂ ಪ್ರಾಪ್ತಂ ಬ್ರಹ್ಮಭೂತಮವಿಕ್ರಿಯಮ್ ।। ೨೬ ।।
ಭಾಗವತತಾತ್ಪರ್ಯಮ್ — “ಸ್ವತೋ ಮನಃಸ್ಥಿತಿರ್ವಿಷ್ಣೌ ಬ್ರಹ್ಮಭಾವ ಉದಾಹೃತಃ” ಇತಿ ಬ್ರಹ್ಮಾಣ್ಡೇ ।
ವಿಪ್ರಕೀರ್ಣಜಟಾಚ್ಛನ್ನಂ ರೌರವೇಣಾಜಿನೇನ ಚ।
ವಿಶುಷ್ಯತ್ತಾಲುರುದಕಂ ತಥಾಭೂತಮಯಾಚತ ।। ೨೭ ।।
ಅಲಬ್ಧತೃಣಭೂಮ್ಯಾದಿರಸಮ್ಪ್ರಾಪ್ತಾರ್ಘ್ಯಸೂನೃತಃ।
ಅವಜ್ಞಾತಮಿವಾsತ್ಮಾನಂ ಮನ್ಯಮಾನಶ್ಚುಕೋಪ ಹ ।। ೨೮ ।।
ಅಭೂತಪೂರ್ವಃ ಸಹಸಾ ಕ್ಷುತ್ತೃಡ್ಭ್ಯಾಮರ್ದಿತಾತ್ಮನಃ।
ಬ್ರಾಹ್ಮಣಂ ಪ್ರತ್ಯಭೂದ್ ಬ್ರಹ್ಮನ್ ಮತ್ಸರೋ ಮನ್ಯುರೇವ ಚ ।। ೨೯ ।।
ಭಾಗವತತಾತ್ಪರ್ಯಮ್ — “ಅಪ್ರೀತಿರ್ಮದ್ವಶೋ ನಾಯಮಿತಿ ಮತ್ಸರ ಈರಿತಃ” ಇತಿ ನಾಮಮಹೋದಧೌ ।
ಸ ತು ಬ್ರಹ್ಮಋಷೇರಂಸೇ ಗತಾಸುಮುರಗಂ ರುಷಾ।
ವಿನಿರ್ಗಚ್ಛನ್ ಧನುಷ್ಕೋಟ್ಯಾ ನಿಧಾಯ ಪುರಮಾಗತಃ ।। ೩೦ ।।
ಏಷ ಕಿಂ ನಿಭೃತಾಶೇಷಕರಣೋ ಮೀಲಿತೇಕ್ಷಣಃ।
ಮೃಷಾಸಮಾಧಿರಾಹೋತ್ ಕಿನ್ನಃ ಸ್ಯಾತ್ ಕ್ಷತ್ರಬನ್ಧುಭಿಃ ।। ೩೧ ।।
ತಸ್ಯ ಪುತ್ರೋಽತಿತೇಜಸ್ವೀ ವಿಹರನ್ ಬಾಲಕೋಽರ್ಭಕೈಃ।
ರಾಜ್ಞಾsಘಂ ಪ್ರಾಪಿತಂ ತಾತಂ ಶ್ರುತ್ವಾ ತತ್ರೇದಮಬ್ರವೀತ್ ।। ೩೨ ।।
ಅಹೋ ಅಧರ್ಮಃ ಪಾಲಾನಾಂ ಪೃಥ್ವ್ಯಾ ಬಲಿಭುಜಾಮಿವ।
ಸ್ವಾಮಿನ್ಯಘಂ ಯದ್ ದಾಸಾನಾಂ ದ್ವಾರಪಾನಾಂ ಶುನಾಮಿವ ।। ೩೩ ।।
ಬ್ರಾಹ್ಮಣೈಃ ಕ್ಷತ್ರಬನ್ಧುರ್ಹಿ ದ್ವಾರಪಾಲೋ ನಿರೂಪಿತಃ।
ಸ ಕಥಂ ತದ್ಗೃಹೇ ದ್ವಾಃಸ್ಥಃ ಸಭಾಣ್ಡಂ ಭೋಕ್ತುಮರ್ಹತಿ ।। ೩೪ ।।
ಕೃಷ್ಣೇ ಗತೇ ಭಗವತಿ ಶಾಸ್ತರ್ಯುತ್ಪಥಗಾಮಿನಾಮ್।
ತಾನ್ ಭಿನ್ನಸೇತೂನದ್ಯಾಹಂ ಶಾಸ್ಮಿ ಪಶ್ಯತ ಮೇ ಬಲಮ್ ।। ೩೫ ।।
ಇತ್ಯುಕ್ತ್ವಾ ರೋಷತಾಮ್ರಾಕ್ಷೋ ವಯಸ್ಯಾನೃಷಿಬಾಲಕಃ।
ಕೌಶಿಕ್ಯಪ ಉಪಸ್ಪೃಶ್ಯ ವಾಗ್ವಜ್ರಂ ವಿಸಸರ್ಜ ಹ ।। ೩೬ ।।
ಭಾಗವತತಾತ್ಪರ್ಯಮ್ — ಕೌಶಿಕೀ ಕುಶಪಾಣಿಃ ।
ಇತೋ ಲಙ್ಘಿತಮರ್ಯಾದಂ ತಕ್ಷಕಃ ಸಪ್ತಮೇಽಹನಿ।
ಧಕ್ಷ್ಯತಿ ಸ್ಮ ಕುಲಾಙ್ಗಾರಂ ಚೋದಿತೋ ಮೇ ಪಿತೃದ್ರುಹಮ್ ।। ೩೭ ।।

Play Time: 43:49

Size: 7.60 MB


Download Upanyasa Share to facebook View Comments
5902 Views

Comments

(You can only view comments here. If you want to write a comment please download the app.)
 • Vijaya bharathi k b,Bangalore

  12:32 PM, 20/07/2019

  ಪರೀಕ್ಷಿತ್ ರಾಜರಿಗೆ ಆ ರೀತಿ ಆದರೆ.. ನಮ್ಮಂತಹ ಪಾಪಿಗಳ ಗತಿಯೇನು ಆಚಾರ್ಯರೆ 🙏🙏
 • Latha Ramesh,Coimbatore

  8:19 AM , 16/05/2018

  Namaskaragalu Gurugalige 🙏🙏🙏🙏
 • M Sreenath,Bengaluru

  5:48 PM , 06/05/2018

  Prathi dinavu karma sarpane hangeaduvudu nimminda thilidu konthiddeevi.dhanyavadagalu nimage acharyare
 • Santosh,Gulbarga

  5:04 PM , 06/05/2018

  ಶ್ರೀ ಗುರುಗಳಿಗೆ ಧನ್ಯವಾದಗಳು.....
 • Niranjan Kamath,Koteshwar

  12:19 PM, 06/05/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ . ಗುರುಗಳ ಚರಣಗಳಿಗೆ ನಮೋ ನಮಃ. ಪರಮಾದ್ಭುತವಾಗಿತ್ತು ಶ್ರೀ ಪರೀಕ್ಷಿತ್ ರಾಜರಿಗೆ ಇಂತಹ ಪ್ರಾರಬ್ಧ ವಾದರೆ , ಇನ್ನು ನಮ್ಮಂತಹ ವರ ಗತಿಗೆ ದೇವರೇ ಕಾಪಾಡಬೇಕು. ಶ್ರೀ ಶಮಿಕ ಹಾಗೂ ಶ್ರೀ ಶೃಂಗಿ ಹೃಶಿ ಗಳ ಚರಣಗಳಿಗೆ ನಮೋ ನಮಃ. ಧನ್ಯೋಸ್ಮಿ.
 • Krishnaa,Bangalore

  9:37 AM , 06/05/2018

  Shri gurubhyo namah.
  Acharyare, you are making sure there is no break in Srimad bhagavata shravana on Sundays, thank you so much for that. 
  Namaskaragalu.