04/05/2018
ಪರೀಕ್ಷಿದ್ರಾಜರಿಗೆ ಶಾಪ ಕೊಟ್ಟು ಬಂದ ಮಗನನ್ನು ಶಮೀಕರು ಅಭಿನಂದಿಸುವದಿಲ್ಲ, ಸಮಗ್ರ ಭೂಮಿಯ ಜನರ ಧರ್ಮಾಚರಣೆಗೆ ಆಧಾರನಾದ ರಾಜನ ಸಾವಿನಿಂದ ಎಂತಹ ಪಾಪವನ್ನು ಪಡೆದಿದ್ದೇವೆ ಎಂದು ಮಗನಿಗೆ ಮನಗಾಣಿಸಿ ಮಾಡಿದ ತಪ್ಪಿಗೆ ದೇವರ ಕ್ಷಮೆಯನ್ನು ಕೇಳುತ್ತಾರೆ. ಒಟ್ಟಾರೆ ಈ ಪ್ರಸಂಗದಲ್ಲಿ ಶೃಂಗಿ, ಶಮೀಕರು, ಪರೀಕ್ಷಿದ್ರಾಜರು ನಮಗೆ ಕಲಿಸುವ ಬದುಕಿನ ದಿವ್ಯ ಪಾಠಗಳ ವಿವರಣೆ ಇಲ್ಲಿದೆ. ನೀವೂ ಕೇಳಿ. ಮಕ್ಕಳಿಗೂ ತಪ್ಪದೇ ಕೇಳಿಸಿ. ಅಶ್ವತ್ಥಾಮಾಚಾರ್ಯರು ಪರೀಕ್ಷಿತನನ್ನು ಗರ್ಭದಲ್ಲೇ ಕೊಲ್ಲಲು ಬಂದಾಗ ರಕ್ಷಣೆಗೆ ಧಾವಿಸಿದ ಶ್ರೀಕೃಷ್ಣ, ಋಷಿಕುಮಾರನಾದ ಶೃಂಗಿ ಶಾಪ ಕೊಟ್ಟಾಗ ತಡೆಯಲು ಏಕೆ ಬರಲಿಲ್ಲ ಎನ್ನುವದರ ವಿವರಣೆ ಇಲ್ಲಿದೆ. ಗಾಯತ್ರಿ, ಬ್ರಾಹ್ಮಣ್ಯಗಳಿಗೆ ಶ್ರೀಹರಿ ನೀಡುವ ಬೆಲೆಯ ಚಿಂತನೆಯಿದೆ. ಈ ಉಪನ್ಯಾಸಕ್ಕೆ ಪ್ರಥಮಸ್ಕಂಧದ ಹದಿನೆಂಟನೆಯ ಅಧ್ಯಾಯ ಮುಗಿಯುತ್ತದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ತತೋಽಭ್ಯೇತ್ಯಾsಶ್ರಮಂ ಬಾಲೋ ಗಲೇ ಸರ್ಪಕಲೇವರಮ್। ಪಿತರಂ ವೀಕ್ಷ್ಯ ದುಃಖಾರ್ತೋ ಮುಕ್ತಕಣ್ಠೋ ರುರೋದ ಹ ।। ೩೮ ।। ಸ ವಾ ಆಙ್ಗಿರಸೋ ಬ್ರಹ್ಮನ್ ಶ್ರುತ್ವಾ ಸುತವಿಲಾಪಿತಮ್। ಉನ್ಮೀಲ್ಯ ಶನಕೈರ್ನೇತ್ರೇ ದೃಷ್ಟ್ವಾ ಚಾಂಸೇ ಮೃತೋರಗಮ್ ।। ೩೯ ।। ವಿಸೃಜ್ಯ ತಂ ಚ ಪಪ್ರಚ್ಛ ವತ್ಸ ಕಸ್ಮಾದ್ ವಿರೋದಿಷಿ। ಕೇನ ವಾ ತೇಽಪಕೃತಮಿತ್ಯುಕ್ತಃ ಸ ನ್ಯವೇದಯತ್ ।। ೪೦ ।। ನಿಶಮ್ಯ ಶಪ್ತಮತದರ್ಹಂ ನರೇನ್ದ್ರಂ ಸ ಬ್ರಾಹ್ಮಣೋ ನಾತ್ಮಜಮಭ್ಯನನ್ದತ್। ಅಹೋ ಬತಾಂಹೋ ಮಹದಜ್ಞ ತೇ ಕೃತಮಲ್ಪೀಯಸಿ ದ್ರೋಹ ಉರುಶ್ರಮೋ ಧೃತಃ ।। ೪೧ ।। ನ ವೈ ನೃಭಿರ್ನರದೇವೋsಪರಾಧ್ಯಃ ತಂ ಶಪ್ತುಮರ್ಹಸ್ಯವಿಪಕ್ವಬುದ್ಧೇ। ಯತ್ತೇಜಸಾ ದುರ್ವಿಷಹೇಣ ಗುಪ್ತಾ ವಿನ್ದನ್ತಿ ಭದ್ರಾಣ್ಯಕುತೋಭಯಾಃ ಪ್ರಜಾಃ ।। ೪೨ ।। ಅಲಕ್ಷ್ಯಮಾಣೇ ನರದೇವನಾಮ್ನಿ ರಥಾಙ್ಗಪಾಣಾವಯಮಙ್ಗ ಲೋಕಃ। ತದಾ ಹಿ ಚೋರಪ್ರಚುರೋ ವಿನಙ್ಕ್ಷ್ಯತ್ಯರಕ್ಷ್ಯಮಾಣೋ ವಿವರೂಥವತ್ಕ್ಷಣಾತ್ ।। ೪೩ ।। ಭಾಗವತತಾತ್ಪರ್ಯಮ್ — “ಸೇನಾ ವರೂಥಿನೀ ಪ್ರೋಕ್ತಾ ವರೂಥೋ ಗುಪ್ತಿರುಚ್ಯತೇ” ಇತ್ಯಭಿಧಾನೇ । ತದದ್ಯ ನಃ ಪಾಪಮುಪೈತ್ಯನನ್ವಯಂ ಯನ್ನಷ್ಟನಾಥಸ್ಯ ಪಶೋರ್ವಿಲುಮ್ಪಕಾಃ। ಪರಸ್ಪರಂ ಘ್ನನ್ತಿ ಶಪನ್ತಿ ವೃಞ್ಜತೇ ಪಶೂನ್ ಸ್ತ್ರಿಯೋಽರ್ಥಾನ್ ಪುರದಸ್ಯವೋ ಜನಾಃ ।। ೪೪ ।। ಭಾಗವತತಾತ್ಪರ್ಯಮ್ — “ವಿಡ್ ರಾಷ್ಟ್ರಂ ಪಶುರುತ್ಸೇಕೋ ಭ್ರಮರಶ್ಚೇತಿ ಕಥ್ಯತೇ” ಇತಿ ಚ । ತದಾರ್ಯಧರ್ಮಶ್ಚ ವಿಲೀಯತೇ ನೃಣಾಂ ವರ್ಣಾಶ್ರಮಾಚಾರಯುತಸ್ತ್ರಯೀಮಯಃ। ತತೋಽರ್ಥಕಾಮಾಭಿನಿವೇಶಿತಾತ್ಮನಾಂ ಶುನಾಂ ಕಪೀನಾಮಿವ ವರ್ಣಸಙ್ಕರಃ ।। ೪೫ ।। ಧರ್ಮಪಾಲೋ ನರಪತಿಃ ಸ ತು ಸಮ್ರಾಡ್ ಬೃಹಚ್ಛ್ರವಾಃ। ಸಾಕ್ಷಾನ್ಮಹಾಭಾಗವತೋ ರಾಜರ್ಷಿರ್ಹಯಮೇಧಯಾಟ್ । ಕ್ಷುತ್ತೃಟ್ಶ್ರಮಯುತೋ ದೀನೋ ನೈವಾಸ್ಮಚ್ಛಾಪಮರ್ಹತಿ ।। ೪೬ ।। ಅಪಾಪೇಷು ಸ್ವಭೃತ್ಯೇಷು ಬಾಲೇನಾಪಕ್ವಬುದ್ಧಿನಾ । ಪಾಪಂ ಕೃತಂ ತದ್ಭಗವಾನ್ಸರ್ವಾತ್ಮಾ ಕ್ಷನ್ತುಮರ್ಹತಿ ।। ೪೭ ।। ತಿರಸ್ಕೃತಾ ವಿಪ್ರಲಬ್ಧಾಃ ಶಪ್ತಾಃ ಕ್ಷಿಪ್ತಾ ಹತಾ ಅಪಿ। ನಾಸ್ಯ ತತ್ ಪ್ರತಿಕುರ್ವನ್ತಿ ತದ್ಭಕ್ತಾಃ ಪ್ರಭವೋಽಪಿ ಹಿ ।। ೪೮ ।। ಇತಿ ಪುತ್ರಕೃತಾಘೇನ ಸೋಽನುತಪ್ತೋ ಮಹಾಮುನಿಃ । ಸ್ವಯಂ ವಿಪ್ರಕೃತೋ ರಾಜ್ಞಾ ನೈವಾಘಂ ತದಚಿನ್ತಯತ್ ।। ೪೯ ।। ಸಾಧವಃ ಪ್ರಾಯಶೋ ಲೋಕೇ ಪರೈರ್ದ್ವನ್ದ್ವೇಷು ಯೋಜಿತಾಃ। ನ ವ್ಯಥನ್ತಿ ನ ಹೃಷ್ಯನ್ತಿ ಯತ ಆತ್ಮಾ ಗುಣಾಶ್ರಯಃ ।। ೫೦ ।। ಭಾಗವತತಾತ್ಪರ್ಯಮ್ — ಸ್ವಕೃತೋ ಗುಣಃ ಸ್ವಸ್ಯೈವ ಯತಃ । ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ಸಪ್ತದಶೋಽಧ್ಯಾಯಃ।
Play Time: 58:49
Size: 7.60 MB