04/05/2018
ಗಂಗೆಯ ತೀರದಲ್ಲಿ, ಸಮಸ್ತ ಋಷಿಗಳ ಸಭೆಯಲ್ಲಿ ಪ್ರಾಯೋಪವೇಶಕ್ಕಾಗಿ ಕುಳಿತ ಪರೀಕ್ಷಿದ್ರಾಜರು ಪ್ರಶ್ನೆಯೊಂದನ್ನು ಆ ಎಲ್ಲ ಋಷಿಗಳಿಗೆ ಕೇಳುತ್ತಾರೆ. ಆ ಪ್ರಶ್ನೆ ಮುಗಿಯುವ ಕ್ಷಣಕ್ಕೆ, ಉತ್ತರ ನೀಡಲು ಸಾಕ್ಷಾತ್ ಶುಕಾಚಾರ್ಯರೇ ಆಗಮಿಸುತ್ತಾರೆ. ಆ ಮಹಾನುಭಾವರ ದಿವ್ಯವಾದ ರೂಪದ ವರ್ಣನೆ ಮತ್ತು ಪರೀಕ್ಷಿದ್ರಾಜರು ಅವರಿಗೆ ಮಾಡುವ ಪ್ರಶ್ನೆಯ ಉಲ್ಲೇಖದೊಂದಿಗೆ ಲಿ ಶ್ರೀಮದ್ ಭಾಗವತದ ಪ್ರಥಮಸ್ಕಂಧದ ಪ್ರವಚನ ಸಮಾಪ್ತವಾಗುತ್ತದೆ. ಕಾವೇರಿಯ ತೀರದ ಶ್ರೀ ಮಧ್ವಾನುಜಮಂದಿರದಲ್ಲಿ ಈ ಪ್ರಥಮಸ್ಕಂಧದ ಪ್ರವಚನೋತ್ಸವದ ಮಂಗಳ ಅಪ್ರಯತ್ನವಾಗಿ ನಡೆದದ್ದು ಚೈತ್ರಕೃಷ್ಣ ಚತುರ್ದಶಿಯಂದು, ಯಾರ ವೃಂದಾವನದ ಎದುರಿಗೆ ಶ್ರೀ ವಾರಿಧಿತೀರ್ಥರ ವೃಂದಾವನವಿದೆಯೋ ಆ ಶ್ರೀ ವಿದ್ಯಾಶ್ರೀಧರತೀರ್ಥರ ಆರಾಧನೆಯಂದು. ಈ ಕಡೆಯ ಪ್ರವಚನದ ಸ್ಟಡಿಯೋ ಕೆಲಸಗಳು ಮುಗಿದದ್ದು ವೈಶಾಖ ಶುದ್ಧ ಹುಣ್ಣಿಮೆ ಶ್ರೀ ರಾಜೇಂದ್ರತೀರ್ಥಗುರುಸಾರ್ವಭೌಮರ ಆರಾಧನೆಯಂದು. ಈ ಪ್ರವಚನ ನಿಮಗೆಲ್ಲ ತಲುಪುತ್ತಿರುವದು ಇಂದು ವೈಶಾಖ ಕೃಷ್ಣ ನವಮೀ. ಶ್ರೀ ವಿದ್ಯಾವಾರಿಧಿತೀರ್ಥರು ಯಾರ ಚರಣಕಿಂಕರರೋ ಅಂತಹ ಅವರ ಗುರುಗಳಾದ ಶ್ರೀ ವಿದ್ಯಾರತ್ನಾಕರತೀರ್ಥರ ಆರಾಧನೆ ಈ ದಿವಸ. ಯಾವುದನ್ನೂ ನಾನು ಆಲೋಚಿಸಿ ಮಾಡಿದ್ದಲ್ಲ. ಸಹಜವಾಗಿ ನಡೆದಿವೆ. ಈ ಶ್ರೀಮದ್ ಭಾಗವತದ ಪ್ರವಚನೋತ್ಸವದ ಪ್ರೇರಕಶಕ್ತಿಯಾದ ತಪೋನಿಧಿ ಶ್ರೀ ವಿದ್ಯಾವಾರಿಧಿತೀರ್ಥರು ನಮ್ಮ ಈ ಸೇವಾಪುಷ್ಪವನ್ನು ಸ್ವೀಕರಿಸುತ್ತಿದ್ದಾರೆ, ಸ್ವೀಕರಿಸಿ ಅದನ್ನು ತಮ್ಮ ಗುರುಗಳ, ಪರಮಗುರುಗಳ ಮುಖಾಂತರ ಶ್ರೀ ಗೋಪಾಲಕೃಷ್ಣದೇವರಿಗೆ ಸಮರ್ಪಿಸುತ್ತಿದ್ದಾರೆ ಎನ್ನುವದಕ್ಕೆ ಮೂರು ಸಂದರ್ಭಗಳಲ್ಲಿಯೂ ಬಂದೊದಗಿರುವ ಶ್ರೀ ವಿದ್ಯಾವಾರಿಧಿತೀರ್ಥರಿಗೆ ಅತ್ಯಂತ ಪ್ರಿಯವಾದ ಪರ್ವಕಾಲಗಳೇ ಸಾಕ್ಷಿ. ಆ ಮಹಾಗುರುಗಳು ನಮ್ಮಿಂದ ಸಮಗ್ರ ಭಾಗವತದ ಶ್ರವಣವನ್ನೂ ಇದೇ ರೀತಿ ಮಾಡಿಸಿ, ಅದನ್ನು ಮಧ್ವೇಶಕೃಷ್ಣನಿಗೆ ಸಮರ್ಪಿಸಿ ನಮ್ಮನ್ನು ಉದ್ದಾರ ಮಾಡಲಿ ಎಂದು ಸಮಗ್ರ ಜೀವದ ಭಕ್ತಿಯಿಂದ ಪ್ರಾರ್ಥಿಸೋಣ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಇತಿ ಸ್ಮ ರಾಜಾ ವ್ಯವಸಾಯಯುಕ್ತಃ ಪ್ರಾಚೀನಾಕಾಗ್ರೇಷು ಕುಶೇಷು ಧೀರಃ। ಉದಙ್ಮುಖೋ ದಕ್ಷಿಣಕೂಲ ಆಸ್ತೇ ಸಮುದ್ರಪತ್ನ್ಯಾಃ ಸ್ವಸುತೇ ನ್ಯಸ್ತಭಾರಃ ।। ೧೭ ।। ಭಾಗವತತಾತ್ಪರ್ಯಮ್ — ಗಙ್ಗಾಯಾಮುದಕ ಏವ ಕಿಞ್ಚಿದ್ ದಕ್ಷಿಣಭಾಗೇ ಪ್ರಾಸಾದೇ । ತಥಾಹಿ ಮಹಾಭಾರತೇ । ವಿಹಾಯ ಸರ್ವಂ ನರದೇವಚಿಹ್ನಂ ಕೇಯೂರಹಾರಾಙ್ಗದಮೌಲಿರತ್ನಾನ್। ರತ್ನಾಙ್ಗುಲೀಯಾನ್ ವಿಮಲಾನ್ ನಿರಸ್ಯ ಪವಿತ್ರಪಾಣಿರ್ಮುನಿವೇಷ ಆಸ್ತೇ ।। ೧೮ ।। ಏವಂ ಚ ತಸ್ಮಿನ್ ನರದೇವದೇವೇ ಪ್ರಾಯೋಪವಿಷ್ಟೇ ದಿವಿ ದೇವಸಙ್ಘಾಃ। ಪ್ರಶಸ್ಯ ಭೂಮೌ ವ್ಯಕಿರನ್ ಪ್ರಸೂನೈರ್ಮುದಾ ಮುಹುರ್ದುನ್ದುಭಯಶ್ಚ ನೇದುಃ ।। ೧೯ ।। ಮಹರ್ಷಯೋ ವೈ ಸಮುಪಾಗತಾ ಯೇ ಪ್ರಶಸ್ಯ ಸಾಧ್ವಿತ್ಯನುಮೋದಮಾನಾಃ। ಊಚುಃ ಪ್ರಜಾನುಗ್ರಹಶೀಲಸಾರಾ ಯದುತ್ತಮಶ್ಲೋಕಗುಣಾನುರೂಪಮ್ ।। ೨೦ ।। ನ ವಾ ಇದಂ ರಾಜರ್ಷಿವರ್ಯ ಚಿತ್ರಂ ಭವತ್ಸು ಕೃಷ್ಣಂ ಸಮನುವ್ರತೇಷು। ಯೇಽಧ್ಯಾಸನಂ ರಾಜಕಿರೀಟಜುಷ್ಟಂ ಸದ್ಯೋ ಜಹುರ್ಭಗವತ್ಪಾರ್ಶ್ವಕಾಮಾಃ ।। ೨೧ ।। ಸರ್ವೇ ವಯಂ ತಾವದಿಹಾಽಸ್ಮಹೇಽಥ ಕಲೇವರಂ ಯಾವದಸೌ ವಿಹಾಯ। ಲೋಕಂ ಪರಂ ವಿರಜಸ್ಕಂ ವಿಶೋಕಂ ಯಾಸ್ಯತ್ಯಯಂ ಭಾಗವತಪ್ರಧಾನಃ ।। ೨೨ ।। ಆಶ್ರುತ್ಯ ತದೃಷಿಗಣವಚಃ ಪರೀಕ್ಷಿತ್ ಸಮಂ ಮಧುಶ್ಚುದ್ ಗುರು ಚಾವ್ಯಲೀಕಮ್। ಆಭಾಷತೈನಾನಭಿವನ್ದ್ಯ ಯುಕ್ತಃ ಶುಶ್ರೂಷಮಾಣಶ್ಚರಿತಾನಿ ವಿಷ್ಣೋಃ ।। ೨೩ ।। ರಾಜೋವಾಚ — ಸಮಾಗತಾಃ ಸರ್ವತ ಏವ ಸರ್ವೇ ವೇದಾ ಯಥಾ ಮೂರ್ತಿಧರಾಸ್ತ್ರಿಪೃಷ್ಠೇ। ನೇಹಾಥವಾಽಮುತ್ರ ಚ ಕಶ್ಚನಾರ್ಥ ಋತೇ ಪರಾನುಗ್ರಹಮಾತ್ರಶೀಲಾಃ ।। ೨೪ ।। ತತಶ್ಚ ವಃ ಪ್ರಶ್ನಮಿಮಂ ವಿಪೃಚ್ಛೇ ವಿಶ್ರಭ್ಯ ವಿಪ್ರಾ ಇತಿಕೃತ್ಯತಾಯಾಮ್। ಸರ್ವಾತ್ಮನಾ ಮ್ರಿಯಮಾಣೈಸ್ತು ಕೃತ್ಯಂ ಶುದ್ಧಂ ಚ ತತ್ರಾಮೃಶತಾಭಿಯುಕ್ತಾಃ ।। ೨೫ ।। ಇತಿ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ಏಕೋನವಿಂಶೋಽಧ್ಯಾಯಃ। ಅಥ ವಿಂಶೋಽಧ್ಯಾಯಃ। ತತ್ರಾಭವದ್ ಭಗವಾನ್ ವ್ಯಾಸಪುತ್ರೋ ಯದೃಚ್ಛಯಾ ಗಾಮಟಮಾನೋಽನಪೇಕ್ಷಃ। ಅಲಕ್ಷ್ಯಲಿಙ್ಗೋ ನಿಜಲಾಭತುಷ್ಟೋ ವೃತಶ್ಚ ಬಾಲೈರವಧೂತವೇಷಃ ।। ೧ ।। ತಂ ದ್ವ್ಯಷ್ಟವರ್ಷಂ ಸುಕುಮಾರಪಾದಕರೋರುಬಾಹ್ವಂಸಕಪೋಲಗಾತ್ರಮ್। ಚಾರ್ವಾರುಣಾಕ್ಷೋನ್ನಸತುಲ್ಯಕರ್ಣಂ ಸುಭ್ರ್ವಾನನಂ ಕಮ್ಬುಸುಜಾತಕಣ್ಠಮ್ ।। ೨ ।। ನಿಗೂಢಜತ್ರುಂ ಪೃಥುತುಙ್ಗವಕ್ಷಸಮಾವರ್ತನಾಭಿಂ ವಲಿವಲ್ಗೂದರಂ ಚ। ದಿಗಮ್ಬರಂ ವಕ್ತ್ರವಿಕೀರ್ಣಕೇಶಂ ಪ್ರಲಮ್ಬಬಾಹುಂ ಸ್ವಮರೋತ್ತಮಾಭಮ್ ।। ೩ ।। ಶ್ಯಾಮಂ ಸದಾಪೀಚ್ಯವಯೋಽಙ್ಗಲಕ್ಷ್ಮ್ಯಾ ಸ್ತ್ರೀಣಾಂ ಮನೋಜ್ಞಂ ರುಚಿರಸ್ಮಿತೇನ। ಪ್ರತ್ಯುತ್ಥಿತಾ ಮುನಯಶ್ಚಾಽಸನೇಭ್ಯಸ್ತಲ್ಲಕ್ಷಣಜ್ಞಾ ಅಪಿ ಗೂಢವರ್ಚಸಮ್ ।। ೪ ।। ಭಾಗವತವಾಕ್ಯಮ್ — “ಕೈಶೋರಯೌವನಾಭ್ಯನ್ತಃ ಕಾಲ ಆಪೀಚ್ಯಮುಚ್ಯತೇ” ಇತ್ಯಭಿಧಾನಾತ್ । ಸ ವಿಷ್ಣುರಾತೋಽತಿಥಯ ಆಗತಾಯ ತಸ್ಮೈ ಸಪರ್ಯಾಂ ಶಿರಸಾಽಜಹಾರ। ತತೋ ನಿವೃತ್ತಾ ಹ್ಯಬುಧಾಃ ಸ್ತ್ರಿಯೋಽರ್ಭಕಾ ಮಹಾಸನೇ ಸೋಪವಿವೇಶ ಪೂಜಿತಃ ।। ೫ ।। ಸ ಸಂವೃತಸ್ತತ್ರ ಮಹಾನ್ಮಹೀಯಸಾಂ ಬ್ರಹ್ಮರ್ಷಿರಾಜರ್ಷಿದೇವರ್ಷಿಸಙ್ಘೈಃ। ವ್ಯರೋಚತಾಲಂ ಭಗವಾನ್ ಯಥೇನ್ದುರ್ಗ್ರಹರ್ಕ್ಷತಾರಾನಿಕರೈಃ ಪರೀತಃ ।। ೬ ।। ಪ್ರಶಾನ್ತಮಾಸೀನಮಕುಣ್ಠಮೇಧಸಂ ಮುನಿಂ ನೃಪೋ ಭಾಗವತೋಽಭ್ಯುಪೇತ್ಯ। ಪ್ರಣಮ್ಯ ಮೂರ್ಧ್ನಾಽವಹಿತಃ ಕೃತಾಞ್ಜಲಿರ್ನತ್ವಾ ಗಿರಾ ಸೂನೃತಯಾನ್ವಪೃಚ್ಛತ್ ।। ೭ ।। ರಾಜೋವಾಚ — ಅಹೋ ಅದ್ಯ ವಯಂ ಬ್ರಹ್ಮನ್ ಸತ್ಸೇವ್ಯಾಃ ಕ್ಷತ್ರಬನ್ಧವಃ। ಕೃಪಯಾಽತಿಥಿರೂಪೇಣ ಭವದ್ಭಿಸ್ತೀರ್ಥಕಾಃ ಕೃತಾಃ ।। ೮ ।। ಯೇಷಾಂ ಸಂಸ್ಮರಣಾತ್ ಪುಂಸಃ ಸದ್ಯಃ ಶುದ್ಧ್ಯನ್ತಿ ವೈ ಗೃಹಾಃ। ಕಿಂ ಪುನರ್ದರ್ಶನಸ್ಪರ್ಶಪಾದಶೌಚಾಸನಾದಿಭಿಃ ।। ೯ ।। ಸಾನ್ನಿಧ್ಯಾತ್ತೇ ಮಹಾಯೋಗಿನ್ಪಾತಕಾನಿ ಮಹಾನ್ತ್ಯಪಿ। ಸದ್ಯೋ ನಶ್ಯನ್ತಿ ವೈ ಪುಂಸಾಂ ವಿಷ್ಣೋರಿವ ಸುರೇತರಾಃ ।। ೧೦ ।। ಅಪಿ ಮೇ ಭಗವಾನ್ ಪ್ರೀತಃ ಕೃಷ್ಣಃ ಪಾಣ್ಡುಸುತಪ್ರಿಯಃ। ಪೈತೃಷ್ವಸೇಯಪ್ರೀತ್ಯರ್ಥಂ ತದ್ಗೋತ್ರಸ್ಯಾಽಪ್ತಬಾನ್ಧವಃ ।। ೧೧ ।। ಅನ್ಯಥಾ ತೇಽವ್ಯಕ್ತಗತೇರ್ದರ್ಶನಂ ನಃ ಕಥಂ ನೃಣಾಮ್। ನಿತರಾಂ ಮ್ರಿಯಮಾಣಾನಾಂ ಸಂಸಿದ್ಧಸ್ಯ ವರೀಯಸಃ ।। ೧೨ ।। ಅತಃ ಪೃಚ್ಛಾಮಿ ಸಂಸಿದ್ಧಿಂ ಯೋಗಿನಾಂ ಪರಮಂ ಗುರುಮ್। ಪುರುಷಸ್ಯೇಹ ಯತ್ಕಾರ್ಯಂ ಮ್ರಿಯಮಾಣಸ್ಯ ಸರ್ವಥಾ ।। ೧೩ ।। ಯಚ್ಛ್ರೋತವ್ಯಮಥೋ ಜಪ್ಯಂ ಯತ್ಕರ್ತವ್ಯಂ ನೃಭಿಃ ಪ್ರಭೋ। ಸ್ಮರ್ತವ್ಯಂ ಭಜನೀಯಂ ವಾ ಬ್ರೂಹಿ ಯದ್ವಾ ವಿಪರ್ಯಯಮ್ ।। ೧೪ ।। ನೂನಂ ಭಗವತೋ ಬ್ರಹ್ಮನ್ ಗೃಹೇಷು ಗೃಹಮೇಧಿನಾಮ್। ನ ಲಕ್ಷ್ಯತೇ ಹ್ಯವಸ್ಥಾನಮಪಿ ಗೋದೋಹನಂ ಕ್ವಚಿತ್ ।। ೧೫ ।। ಸೂತ ಉವಾಚ — ಏವಮಾಭಾಷಿತಃ ಪೃಷ್ಟಃ ಸ ರಾಜ್ಞಾ ಶ್ಲಕ್ಷ್ಣಯಾ ಗಿರಾ। ಪ್ರತ್ಯಭಾಷತ ಧರ್ಮಜ್ಞೋ ಭಗವಾನ್ ಬಾದರಾಯಣಿಃ ।। ೧೭ ।। ಇತಿ ಶ್ರೀಮದಾನನ್ದತೀರ್ಥಭಗವತ್ಪಾದಾಚಾರ್ಯವಿರಚಿತೇನ ಶ್ರೀಮದ್ಭಾಗವತತಾತ್ಪರ್ಯನಿರ್ಣಯೇನ ಸಂಯುಕ್ತೇ ಶ್ರೀಮತ್ಕೃಷ್ಣದ್ವೈಪಾಯನಕೃತೇ ಶ್ರೀಮದ್ಭಾಗವತೇ ಪ್ರಥಮಸ್ಕನ್ಧೇ ವಿಂಶೋಽಧ್ಯಾಯಃ।
Play Time: 58:29
Size: 7.60 MB