Upanyasa - VNU658

ಪುರುಷೋತ್ತಮ ಮಾಸದ ಪರಿಚಯ

ಅಧಿಕಮಾಸಕ್ಕೆ ನಿಯಾಮಕವಾದ ಭಗವದ್ರೂಪ ಗೋಲೋಕದ ಶ್ರೀ ಪುರುಷೋತ್ತಮ ಎನ್ನುವ ರೂಪ. ಹೀಗಾಗಿ ಈ ಮಾಸವನ್ನು ಪುರುಷೋತ್ತಮ ಮಾಸ ಎಂದು ಶಾಸ್ತ್ರಗಳು ದೊಡ್ಡವರು ಕರೆಯುತ್ತಾರೆ. ಈ ಮಾಸದ ಆವಶ್ಯಕತೆ, ಇದರ ಪರಿಚಯಗಳು ಈ ಉಪನ್ಯಾಸದಲ್ಲಿವೆ. ಪುರುಷೋತ್ತಮ ಮಾಸದ ಮಾಹಾತ್ಮ್ಯವನ್ನು ಕೇಳಲಿಕ್ಕಾಗಿ ಋಷಿಗಳ ಸಮುದಾಯವೇ ನೈಮಿಷಾರಣ್ಯಕ್ಕೆ ಧಾವಿಸಿ ಬರುತ್ತದೆ. ಈ ಮಾಹಾತ್ಮ್ಯವನ್ನು ಹೇಳಬರುವ ಸೂತಾಚಾರ್ಯರ ಅಪೂರ್ವ ವರ್ಣನೆಯೂ ಇಲ್ಲಿದೆ. 

Play Time: 48:00

Size: 7.60 MB


Download Upanyasa Share to facebook View Comments
8012 Views

Comments

(You can only view comments here. If you want to write a comment please download the app.)
 • Vithalachar,Raichur

  6:40 AM , 15/12/2020

  🙏🙏
 • Mrs laxmi padaki,Pune

  8:50 PM , 22/05/2018

  👏👏👏👏👏
 • ಸುದರ್ಶನ ಶ್ರೀ. ಲ.,ಬೆಂಗಳೂರು

  8:30 PM , 13/05/2018

  ಗುರುಗಳೆ🙏
  ದಯಮಾಡಿ ಉಪನ್ಯಾಸಗಳಲ್ಲಿ ಬರುವ ಸ್ತೋತ್ರಗಳನ್ನು ಪ್ರತ್ಯೇಕವಾಗಿ (ಆದರೆ ಸಾಹಿತ್ಯ ಮತ್ತು ಧ್ವನಿಮುದ್ರಿಕೆ ಎರಡೂ) ಪ್ರಕಟಿಸಬೇಕಾಗಿ ಪ್ರಾರ್ಥನೆ 🙏😊
 • Pawan,Gulbarga

  12:35 AM, 12/05/2018

  ಗುರುಗಳೆ ಅಧಿಕಮಾಸ ಅಷ್ಟು ಶ್ರೇಷ್ಠವಾದಲ್ಲಿ  ಶುಭಕಾರ್ಯ ಯಾಕೆ ಮಾಡಬಾರದು?

  Vishnudasa Nagendracharya

  ಅಧಿಕಮಾಸ ಎಲ್ಲ ಮಾಸಗಳಲ್ಲಿಯೂ ಶ್ರೇಷ್ಠ, ನಿಷ್ಕಾಮಕರ್ಮಗಳಿಗೆ ಮಾತ್ರ. ಸಕಾಮಕರ್ಮಕ್ಕಲ್ಲ. ಹೀಗಾಗಿ ಶುಭಕಾರ್ಯಗಳನ್ನು ಮಾಡತಕ್ಕದ್ದಲ್ಲ. 
  
  ಹೇಗೆ, ಏಕಾದಶಿ ಎಲ್ಲ ತಿಥಿಗಳಿಂದ ಶ್ರೇಷ್ಠವಾಗಿದ್ದರೂ, ಉಪವಾಸ ಮಾತ್ರ ಮಾಡುತ್ತೇವೆಯೋ, ಮದುವೆ ಮುಂಜಿ ಮುಂತಾದವನ್ನು ಆ ದಿವಸ ಮಾಡುವದಿಲ್ಲವೋ, ಹಾಗೆ ಅಧಿಕಮಾಸ ಎಲ್ಲ ಮಾಸಗಳಿಂದ ಶ್ರೇಷ್ಠವಾಗಿದ್ದರೂ, ಕೇವಲ ಭಗವತ್ಪ್ರೀತಿಕರವಾದ ಪೂರ್ಣ ನಿಷ್ಕಾಮ ಕರ್ಮಗಳನ್ನು ಮಾತ್ರ ಮಾಡತಕ್ಕದ್ದು. 
 • MAHADI SETHU RAO.,BENGALURU

  2:32 AM , 12/05/2018

  Dhanyavadagalu.
  Ekadai dina pravachana keli dhanyanade.
  HARE KRISHNA.
 • Ushasri,Chennai

  11:24 PM, 11/05/2018

  Achare . Tumba channagide. Dhanyavadagalu
 • Anantha,Bengaluru

  5:03 PM , 10/05/2018

  ಹರೇ ಶ್ರೀನಿವಾಸ. ಪ್ರಚವನ ಚೆನ್ನಾಗಿದೆ. ಸಾಯಲು ಹೊರಟ ಆ ದೇವತೆ ಯಾರು? ಅವರ ಪೂರ್ವ ವ್ಋತಾಂತ ವೇನು ಅವಕಾಶವಾದಾಗ ತಿಳಿಸಿ.

  Vishnudasa Nagendracharya

  ಮುಂದಿನ ಉಪನ್ಯಾಸಗಳಲ್ಲಿ ಈ ವಿಷಯ ವಿಸ್ತಾರವಾಗಿ ನಿರೂಪಿತವಾಗಿದೆ.