Upanyasa - VNU664

ಅಧಿಕಮಾಸದ ದಾನಗಳು

ದಾನವನ್ನು ಮಾಡಬೇಕಾದರೆ ನಮಗಿರಬೇಕಾದ ಎಚ್ಚರಗಳು, ಮಾಡುವ ತಪ್ಪುಗಳು, ಅಪೂಪ ದಾನ, ದೀಪದಾನ, ಭಾಗವತದಾನ, ತೀರ್ಥಸ್ನಾನ, ಅಧಿಕ ಮಾಸದ ನಿತ್ಯಧರ್ಮಗಳು, ರಾಧಾಪುರುಷೋತ್ತಮಪೂಜಾ, ಭಾಗವತಶ್ರವಣ ಮುಂತಾದ ವಿಷಯಗಳ ನಿರೂಪಣೆ ಇಲ್ಲಿದೆ. 

Play Time: 51:50

Size: 7.60 MB


Download Upanyasa Share to facebook View Comments
5563 Views

Comments

(You can only view comments here. If you want to write a comment please download the app.)
 • Lakshmi,Pune

  1:08 PM , 28/11/2021

  Tumba dhanyavadagalu gurugalige sadhane madalu olley sankalp namm manassinalli mudisidakkagi aacharyarige koti koti namaskargalu
 • Roopa,Bangalore

  2:19 PM , 18/09/2020

  dhanyavaadagalu danada bagge  uttamavaada mahiti tilisikottiddira. .. acharyarige anatanta namaskaaragalu
 • Jasyashree Karunakar,Bangalore

  9:48 AM , 27/05/2018

  ಸಾಮಾನ್ಯವಾಗಿ ಎಲ್ಲಾ ಮಹಿಳೆಯರೂ ಎದುರಿಸುವಂತಹ ಸಂಧಭ೯ವನ್ನೇ ಉತ್ತಮ ಪ್ರಶ್ನೆಯನ್ನಾಗಿ ಕೇಳಿದ ಉಷಾ ದೊನೆಕರ್ ಅವರಿಗೆ ಧನ್ಯವಾದಗಳು.
  
  ಯಾವ ಪಕ್ಷವನ್ನೂ ವಹಿಸದೆ ಕೇವಲ ನಮ್ಮ ಆದಿಗುರುಗಳಾದ ಶ್ರೀಮದಾನಂದತೀಥ೯ಭಗವತ್ಪಾದಾಚಾಯ೯ರು ತಮ್ಮ ಗ್ರಂಥಗಳಲ್ಲಿ ತೋರಿಸಿಕೊಟ್ಟ ಧಮಾ೯ಚರಣೆಯ ಮಾಗ೯ವನ್ನೇ ಆಧಾರವನ್ನಾಗಿಟ್ಟುಕೊಂಡು ನಮ್ಮೆಲ್ಲರ ಪ್ರಶ್ನೆಗಳಿಗೂ ಭಾವನೆಗಳಿಗೆ ಧಕ್ಕೆಯಾಗದಂತೆ, ನಾವು ಮಾಡುವ ಅಲ್ಪವಾದ ಧಮಾ೯ಚರಣೆಗಳಿಗೂ ತೊಡಕುಂಟಾಗುವ ಸಂಧಭ೯ಗಳಲ್ಲಿ, ಅವುಗಳನ್ನು ಕೈಬಿಡದೆ ನಿಶ್ಚಿಂತೆಯಿಂದ ಯಾವ ರೀತಿಯಾಗಿ ಮಾಡಿಕೊಂಡು ಹೋಗಬೇಕು ಎನ್ನುವದನ್ನು ನಿರಂತರವಾಗಿ ಮಾಗ೯ದಶ೯ನ ಮಾಡುತ್ತಿರುವ ಗುರುಗಳಿಗೆ ಭಕ್ತಿಯ ನಮಸ್ಕಾರಗಳು.
 • USHA DONEKAL,BALLARI

  2:29 PM , 26/05/2018

  Pathige vudaravagi Dana maduva manasilladiruvaga pathni arthikavagi swatantralagiddu pathige tiliyade sankalpa madi Dana madidare a Dana sampannavaguvudu hagu shastrasammata aguvude dayamadi tilisikodi gurugalige Pranamagalu.

  Vishnudasa Nagendracharya

  ತುಂಬ ಸೂಕ್ಷ್ಮವಾದ ವಿಷಯ. 
  
  ಶಾಸ್ತ್ರಗಳು ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತವೆ. ಗುರುಗಳ ಆಜ್ಞೆಯನ್ನು ಮೀರಿ ಯಾವುದೇ ಸತ್ಕರ್ಮವನ್ನು ಮಾಡಬಾರದು ಎಂದು. ಹೆಂಡತಿಗೆ ಪತಿಯೇ ಗುರುವಾದ್ದರಿಂದ ಆತನ ಆಜ್ಞೆಯಿಲ್ಲದೇ ಯಾವ ಸತ್ಕರ್ಮವನ್ನೂ ಮಾಡತಕ್ಕದ್ದಲ್ಲ ಎಂದು. ಇದು ಸಾಮಾನ್ಯ ನಿಯಮ. 
  
  ವಿಶೇಷವಾದ ನಿಯಮವೂ ಇದೆ. ಗುರುಗಳು ಉದ್ಧಾರದ ದಾರಿಯನ್ನು ತಿಳಿಸದೇ, ಅನರ್ಥದ ದಾರಿಯ ಕುರಿತು ಒಲವು ತೋರಿಸಬೇಕಾದರೆ ಅವರ ಮಾತನ್ನು ಕೇಳತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ಭಾಗವತ ತಿಳಿಸುತ್ತದೆ — “ಗುರೂಕ್ತಮಪಿ ನ ಗ್ರಾಹ್ಯಂ ಯದನರ್ಥೇsರ್ಥಕಲ್ಪನಮ್”
  
  ಇದನ್ನೇ ಹೆಂಡತಿಯರಿಗೆ ಅನ್ವಯಿಸಿದಾಗ, ಗಂಡ ಧರ್ಮಕ್ಕೆ ಒಲವು ತೋರುತ್ತಿಲ್ಲ, ಅಥವಾ ಅಧರ್ಮವನ್ನೇ ಮಾಡು ಎಂದು ಪಟ್ಟು ಹಿಡಿದಿದ್ದಾನೆ ಎಂದಾಗ ಅದನ್ನು ಮೀರಿ ಮೋಕ್ಷಸಾಧನವನ್ನು ಮಾಡಿಕೊಳ್ಳುವದು ತಪ್ಪಲ್ಲ. 
  
  ಆದರೆ, ಕೌಟುಂಬಿಕ ಸಮಸ್ಯೆಗಳು ಬಾರದಂತೆ ಎಚ್ಚರವಹಿಸತಕ್ಕದ್ದು ಎನ್ನುವದು ಭೀಮಸೇನದೇವರ ಮತ — ಸ್ನೇಹಭಂಗಭಯಾತ್. ಗಂಡ ಹೆಂಡತಿಯ, ಕುಟುಂಬದ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಮೋಕ್ಷಸಾಧನವನ್ನು ಮಾಡಿಕೊಳ್ಳತಕ್ಕದ್ದು. 
  
  ನಿಮ್ಮ ಪ್ರಶ್ನೆಗೆ ನೇರವಾಗಿ ಉತ್ತರ ನೀಡುವದಾದರೆ — ವಿಷ್ಣುಪ್ರೀತಿಕರವಾದ ಸತ್ಕರ್ಮವನ್ನು ಗಂಡನಿಗೆ ಮಾಡಲು ಅಪೇಕ್ಷೆ, ಅವಕಾಶಗಳು ಇಲ್ಲದಿದ್ದಾಗ, ಕೌಟುಂಬಿಕ ಸಾಮರಸ್ಯಕ್ಕೆ ಧಕ್ಕೆ ಬಾರದೆ ಇರುವಂತೆ ಧರ್ಮ ಮಾಡಲು ಸಾಮರ್ಥ್ಯವಿದ್ದಾಗ, ಹೆಣ್ಣು ಮೋಕ್ಷಸಾಧನವಾದ ಧರ್ಮಾಚರಣೆಯನ್ನು ಮಾಡುವದು ಸರ್ವಥಾ ತಪ್ಪಲ್ಲ. ಅವಶ್ಯವಾಗಿ ಮಾಡತಕ್ಕದ್ದು. 
  
  ಟೀಕಾಕೃತ್ಪಾದರು ನ್ಯಾಯದೀಪಿಕಾದಲ್ಲಿ ಹೇಳುತ್ತಾರೆ — ಮೋಕ್ಷಸಾಧನಸ್ಯೈವ ಕರ್ತವ್ಯತ್ವಾತ್ ಎಂದು. ಜೀವ ಮಹಾಪ್ರಯತ್ನ ಮಾಡಿ ಮಾಡಬೇಕಾದ್ದು ಮೋಕ್ಷದ ಸಾಧನೆಯನ್ನು. ಹೀಗಾಗಿ ಅವಶ್ಯವಾಗಿ ಮಾಡತಕ್ಕದ್ದು. ಕೌಟುಂಬಿಕ, ದಾಂಪತ್ಯ ಸಾಮರಸ್ಯಕ್ಕೆ ಧಕ್ಕೆ ಬಾರದಂತೆ ಮಾಡುವದು ಅತ್ಯವಶ್ಯ ಎನ್ನುವ ಎಚ್ಚರ ಸದಾ ಇರಲಿ. 
  
  ದಾನಕ್ಕಿಂತ ಮಿಗಿಲಾದದ್ದು ವಿಷ್ಣುಸ್ಮರಣೆ ಶಾಸ್ತ್ರಶ್ರವಣ. ಇವನ್ನಂತೂ ಸದಾಕಾಲದಲ್ಲಿಯೂ ಯಾರ ಹಂಗಿಲ್ಲದೆಯೂ ಮಾಡಬಹುದು. 
 • Ushasri,Chennai

  11:04 PM, 15/05/2018

  Achare dhanyavadagalu
 • Saraswathi,Bangalore

  5:19 PM , 14/05/2018

  ನಮಸ್ಕಾರ ಗುರು ಗಳಿಗೆ ಬಹಳ ಮುಖ್ಯ ವಾದ ದಾನ ಗಳ ಬಗೆ ತಿಳಿಸಿದ್ದಾರೆ ಧನ್ಯವಾದಗಳು