16/05/2018
ತನ್ನ ಉದ್ಧಾರಕ್ಕಾಗಿ ಮನುಷ್ಯ ಅರಿಯಬೇಕಾದ್ದೇನು ಎಂಬ ಪ್ರಶ್ನೆಗೆ, ದೇವರನ್ನು ಅರಿಯಬೇಕು ಎಂಬ ಉತ್ತರವನ್ನು ಶುಕಾಚಾರ್ಯರು ನೀಡುವ ರೀತಿಯೇ ಅದ್ಭುತ. ಹಾಳು ಹರಟೆಯಿಂದ, ಕೆಲಸಕ್ಕೆ ಬಾರದ ವಿಷಯಗಳಲ್ಲಿನ ಆಸಕ್ತಿಯಿಂದ ಬದುಕು ಹಾಳಾಗುತ್ತದೆ ಎಂದು ನಾವು ಭಾವಿಸಿದ್ದರೆ, ಧರ್ಮನಿಷ್ಠವಾದ ಬದುಕನ್ನು ಕಂಡು ಬೆರಗಾಗುತ್ತಿದ್ದರೆ, ದೇವರ ಚಿಂತನೆಯಿಲ್ಲದ ಧಾರ್ಮಿಕತೆಯಿಂದ ಯಾವ ಉಪಯೋಗವೂ ಇಲ್ಲ ಎನ್ನುವದನ್ನು ಆ ಬಾದರಾಯಣಪುತ್ರರು ಅದ್ಭುತವಾಗಿ ಮನಗಾಣಿಸುತ್ತಾರೆ. ಅವರ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. ಈ ಉಪನ್ಯಾಸದಲ್ಲಿನ ಕೆಲವು ಮಹತ್ತ್ವದ ವಿಷಯಗಳು — ಪರೀಕ್ಷಿತನ ಸಾಧನೆ, ಪರೀಕ್ಷಿತನ ಕಾರ್ಯಗಳನ್ನು ಹೊಗಳದ ಶುಕಾಚಾರ್ಯರು, ಪರೀಕ್ಷಿತನ ಪ್ರಶ್ನೆಯನ್ನು ಮಾತ್ರ ಹೊಗಳುತ್ತಾರೆ. ಅದರಿಂದ ಅವರು ನಮಗೆ ಕಲಿಸುತ್ತಿರುವ ಪಾಠ. ಚರಮದೇಹದಲ್ಲಿರುವ ಪರೀಕ್ಷಿದ್ರಾಜರಿಗೆ ಉತ್ತರ ತಿಳಿದೇ ಇದೆ. ಆದರೂ ಯಾಕೆ ಪ್ರಶ್ನೆ ಮಾಡಿದರು ಎಂಬ ಪ್ರಶ್ನಗೆ ಶ್ರೀಮದಾಚಾರ್ಯರು ಗೀತಾತಾತ್ಪರ್ಯ ಮತ್ತು ಅನುವ್ಯಾಖ್ಯಾನಗಳಲ್ಲಿ ನೀಡಿದ ನಾಲ್ಕು ಉತ್ತರಗಳು. ಧಾರ್ಮಿಕತೆಗೂ ಅಧ್ಯಾತ್ಮಿಕತೆಗೂ ಇರುವ ವ್ಯತ್ಯಾಸ. ದಾಸಸಾಹಿತ್ಯದಲ್ಲಿ ಕೆಲವು ಕಡೆ ಮಡಿಯನ್ನು ತೆಗಳುತ್ತಾರೆ, ಕೆಲವು ಕಡೆಯ ಸದಾಚಾರವನ್ನು ಹೊಗಳುತ್ತಾರೆ, ಇದರ ಅರ್ಥವೇನು? ಮನುಷ್ಯನ ಬದುಕು ಹೇಗೆ ಹಾಳಾಗುತ್ತದೆ ಎಂಬ ಶುಕವಾಣಿಯನ್ನು ಕನಕದಾಸಾರ್ಯರು ಅನುವಾದಿಸಿರುವ ಬಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಶ್ರೀಮದ್ಭಾಗವತೇ ದ್ವಿತೀಯಸ್ಕನ್ಧೇ ಪ್ರಥಮೋಧ್ಯಾಯಃ ಶ್ರೀಶುಕ ಉವಾಚ — ವರೀಯಾನೇಷ ತೇ ಪ್ರಶ್ನಃ ಕೃತೋ ಲೋಕಹಿತಂ ನೃಪ। ಆತ್ಮವಿತ್ಸಮ್ಮತಃ ಪುಂಸಾಂ ಶ್ರೋತವ್ಯಾದಿಷು ಯಃ ಪರಃ ।। ೧ ।। ಭಾಗವತತಾತ್ಪರ್ಯಮ್ — ಯಃ ಪರ ಇತಿ । ಶ್ರೋತವ್ಯಾನೀಹ ರಾಜೇನ್ದ್ರ ನೃಣಾಂ ಸನ್ತಿ ಸಹಸ್ರಶಃ। ಅಪಶ್ಯತಾಮಾತ್ಮತತ್ತ್ವಂ ಗೃಹೇಷು ಗೃಹಮೇಧಿನಾಮ್ ।। ೨ ।। ನಿದ್ರಯಾ ಹ್ರಿಯತೇ ನಕ್ತಂ ವ್ಯವಾಯೇನ ನವಂ ವಯಃ। ದಿವಾ ಚಾರ್ಥೇಹಯಾ ರಾಜನ್ ಕುಟುಮ್ಬಭರಣೇನ ವಾ ।। ೩ ।। ಭಾಗವತತಾತ್ಪರ್ಯಮ್ — ಅಪಶ್ಯತಾಂ ನಿದ್ರಯಾ । ದೇಹಾಪತ್ಯಕಲತ್ರಾದಿಷ್ವಾತ್ಮದೈನ್ಯೇಷ್ವಸತ್ಸ್ವಪಿ। ತೇಷಾಂ ಪ್ರಸಕ್ತೋ ನಿಧನಂ ಪಶ್ಯನ್ನಪಿ ನ ಪಶ್ಯತಿ ।। ೪ ।। ಭಾಗವತತಾತ್ಪರ್ಯಮ್ — ಅಸತ್ಸು ಅಭದ್ರೇಷು । “ಸದ್ಭಾವೇ ಸಾಧುಭಾವೇ ಚ” ಇತಿ ವಚನಾತ್ ।
Play Time: 56:30
Size: 7.60 MB