Upanyasa - VNU667

ಶ್ರೀಮದ್ ಭಾಗವತಮ್ — 143 — ಅಂತಿಮ ಸ್ಮರಣೆಯ ಮಾಹಾತ್ಮ್ಯ

ಅಂತಿಮಕಾಲದ ಸ್ಮರಣೆಯಲ್ಲಿನ ವೈವಿಧ್ಯಗಳು, ಆ ವಿವಿಧ ಕ್ರಮಗಳಿಂದ ಉಂಟಾಗುವ ವಿವಿಧ ಫಲಗಳು, ಕಟ್ಟ ಕಡೆಯಲ್ಲಿ ಸ್ಮರಣೆ ಬರಬೇಕಾದರೆ ಏನು ಮಾಡಬೇಕು ಎನ್ನುವ ವಿಷಯಗಳ ವಿವರಣೆ ಇಲ್ಲಿದೆ. ಮಹಾ ಪ್ರಯತ್ನ ಮಾಡಿ ಕಡೆಯಲ್ಲಿ ಸ್ಮರಣೆ ಮಾಡಿದರೆ ಸಾಕಲ್ಲವೇ, ಇಡಿಯ ಜನ್ಮ ಯಾಕಾಗಿ ಪ್ರಯತ್ನ ಪಡಬೇಕು ಎಂಬ ಪ್ರಶ್ನೆಗೆ ಆಚಾರ್ಯರು ಗೀತಾತಾತ್ಪರ್ಯನಿರ್ಣಯದಲ್ಲಿ ನೀಡಿರುವ ದಿವ್ಯ ಉತ್ತರದ ಚಿಂತನೆಯೊಂದಿಗೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕ — 

ಏತಾವಾನ್ ಸಾಂಖ್ಯಯೋಗಾಭ್ಯಾಂ ಸ್ವಧರ್ಮಪರಿನಿಷ್ಠಯಾ।

ಜನ್ಮಲಾಭಃ ಪರಃ ಪುಂಸಾಮನ್ತೇ ನಾರಾಯಣಸ್ಮೃತಿಃ ।। ೬ ।।

Play Time: 45:00

Size: 7.60 MB


Download Upanyasa Share to facebook View Comments
8765 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  2:36 PM , 18/03/2020

  ಗುರುಗಳೆ
  ಮನಸ್ಸು ಹಾತೊರೆಯುತ್ತಿದೆ ನೀವಿಲ್ಲಿ ತಿಳಿಸಿರುವಂತಹ ಸಾಧಕರ ಜನ್ಮ ಪಡೆಯಲು....
  
  ಅಪರೋಕ್ಷಜ್ಞಾನ ಪಡೆದವರ ಮತ್ತು ಚರಮ ದೇಹದಲ್ಲಿರುವವರ ಅಂತ್ಯಕಾಲದ ಭಗವಂತನ ಸ್ಮರಣೆ...
  
  ಬೇರೆ ಬೇರೆ ಸಾಧಕರು ಮಾಡುವ ಅಂತ್ಯಕಾಲದ ಸ್ಮರಣೆ....
  
  ಕೇಳುತ್ತಿದ್ದರೆ....
  ಎನೊ ಒಂದು ಹೇಳಲಾಗದ ಮನಸ್ಸಿನ ಭಾವನೆಗಳು...ಶ್ರವಣ ಮಾಡಿದನಂತರ ಆಗುವ, ವ್ಯಕ್ತಪಡಿಸಲಾಗದ ಅನುಭವಗಳು...
  ಮನಸ್ಸನ್ನು ಆವರಿಸಿಬಿಡುತ್ತದೆ...
  
  ದಿನವೆಲ್ಲಾ ಅದೇ ವಿಷಯಗಳು ಗುನುಗುತ್ತಿರುವಂತಾಗುತ್ತದೆ..
  
  ಅದು ಎಷ್ಟು ಸಮಯ ವ್ಯಥ೯ವಾಗಿ ಹೋಗಿದೆಯಲ್ಲಾ...
  
  ಈಗ ಅನ್ನಿಸುತ್ತಿದೆ ವ್ಯಥ೯ವಾಗಿದ್ದು ಗೊತ್ತಾಗಿದ್ದೇ ವಿಶ್ವನಂದಿನಿಯ ಸಂಪಕ೯ವಾದನಂತರ...
  ಆದರೆ ಪೂಣ೯ವಾಗಿ ತೊಡಗಿಸಿಕೊಳ್ಳಲು ಅವಿದ್ಯೆ ಬಿಡುತ್ತಿಲ್ಲ...
  
  ನೀವು ನೀಡುತ್ತಿರವ ಇಂತಹ ಗ್ರಂಥಗಳ ರಸಾಸ್ವದವು ನಮ್ಮ ಕಿವಿಗಳನ್ನು ಮನಸ್ಸನ್ನು, ಬುದ್ಧಿಯನ್ನು ಪಾವನಗೊಳಿಸುತ್ತಿದೆ, ದಿನ ದಿನವೂ ಹೇಳಿಮುಗಿಸದಷ್ಟು ಆನಂದವಾಗುತ್ತದೆ ಮನಸ್ಸಿಗೆ...
  
  ಆವ ಜನ್ಮದ ಪುಣ್ಯವೊ ನೀವು ದೊರೆತಿದ್ದೀರಿ, ನಿಮ್ಮ ಉಪನ್ಯಾಸಗಳು ನಾವು ಕುಳಿತಲ್ಲಿಯೇ ದೊರೆಯುತ್ತಿವೆ...
  ನಮ್ಮ ಯೋಗ್ಯತೆಯಂತೆ ನಿಮ್ಮಮೂಲಕ ನಮ್ಮ ಸಾಧನೆ ಸಾಗುತ್ತಿದೆ...
  
  ನೀವು ಮಧ್ವವಿಜಯದಲ್ಲಿ , ಆ ಮಹಾಗುರುಗಳ ಕೈಯಯನ್ನು ಹಿಡಿದವರ ಶಿಷ್ಯರ, ಶಿಷ್ಯರ ಅವರ ಶಿಷ್ಯರ ಅವರ ಶಿಷ್ಯರ ...ಕೈಯನ್ನು ಹಿಡಿದು ಭೋಗ೯ರೆವ ಗಂಗಾಸಾಗರವನ್ನು ದಾಟಿದ ಕಥೆಯನ್ನು ಎಂದೂ ನಮ್ಮ
  ಮ ನಸ್ಸಿನಿಂದ ಜಾರಿ ಹೋಗದ ರೀತಿಯಲ್ಲಿ ಹೇಳಿದ್ದೀರಿ...
  ಹಾಗೆಯೇ ನೀವು ಆ ಮಹಾ ಗುರುಗಳನ್ನು ಅವರ ಶಾಸ್ತ್ರದ ಮೂಲಕ ಹಿಡಿದಿದ್ದೀರಿ....ನಾವು ವಿಶ್ವನಂದಿನಿಯ ಮೂಲಕ ನಿಮ್ಮ ಪಾದಗಳನ್ನು ಇಲ್ಲಿಂದಲೇ ಹಿಡಿದಿದ್ದೇವೆ...ನಮ್ಮನ್ನೂ ಉಧ್ದಾರದ ಹಾದಿಯಲ್ಲಿರಿಸಿ ಗುರುಗಳೆ...
  
   ಇದು ಹೀಗೆಯೇ ಮುಂದುವರಿಯಲಿ ಅನ್ನುವದೇ ನಮ್ಮೆಲ್ಲರ ಪರವಾಗಿ ನನ್ನ ಕಳಕಳಿಯ ಪ್ರಾಥ೯ನೆ...🙏🙏🙏🙏🙏🙏🙏🙏🙏🙏🙏
 • Vijaya bharathi k b,Bangalore

  11:14 AM, 24/07/2019

  ಹೌದು ಗರುಗಳೆ.. ನಮ್ಮ ತಂದೆ ಸಾಯುವ ಮುಂಚೆ ನನ್ನ ಅಮ್ಮ ಮತ್ತು ತಂಗಿಗೆ ನೀವು ಹೋಗಿ ನಾನು ರಾಯರ ಸ್ಮರಣೆ ಮಾಡಬೇಕು ಅಂತ ಹೇಳಿ ಅವರನ್ನು ಅಲ್ಲಿಂದ ಕಳುಹಿಸಿದ್ದಾರೆ
 • Ashok,Bangalore

  7:52 PM , 22/05/2018

  ಅಪರೋಕ್ಷ ಜ್ಞ್ನಾ ನಕ್ಕೂ ನಂತರ ಧ್ಯಾನ ಮಾಡಿ ಪಡೆದುಕೊಳ್ಳುವ ಅಂತರ್ಯಾಮಿಯ ದರ್ಶನಕ್ಕೂ ಇರುವ ವ್ಯತ್ಯಾಸವೇನು ಎಂದು ದಯವಿಟ್ಟು ತಿಳಿಸಿ ಕೊಡಿ

  Vishnudasa Nagendracharya

  ಧ್ಯಾನ ಮಾಡುವಾಗ ನಾವು “ಚಿಂತಿಸುವದು” ದೇವರ ವಾಸನಾಮಯ ರೂಪವನ್ನು. ಇದು ಧ್ಯಾನ. ಪರೋಕ್ಷಜ್ಞಾನ. ನಾವು ಹೊರಗಿನ ಲೋಹದ ಪ್ರತಿಮೆಯಲ್ಲಿ ದೇವರನ್ನು ಚಿಂತಿಸುವಂತೆ ವಾಸನಮಮಯ ರೂಪದಲ್ಲಿ ದೇವರನ್ನು ಚಿಂತಿಸಬೇಕು. ಈ ವಾಸನಾಮಯ ರೂಪದ ದೇವರಿಂದ ಭಿನ್ನವಾದದ್ದು. 
  
  ಧ್ಯಾನದ ಫಲವಾಗಿ ನಾವು “ಕಾಣುವದು” ದೇವರ ಚಿದಾನಂದಾತ್ಮಕವಾದ ಶರೀರವನ್ನು. ಇದು ಅಪರೋಕ್ಷಜ್ಞಾನ. ದೇವರೇ ದೇವರ ಶರೀರ. ಆ ಶರೀರದ ದೇವರನ್ನು ಕಾಣುವದು ಅಪರೋಕ್ಷಜ್ಞಾನ. 
  
  ಧ್ಯಾನ ಮಾಡಿ ದೇವರ ದರ್ಶನವನ್ನು ಮಾಡುವದೇ ಅಪರೋಕ್ಷಜ್ಞಾನ. 
 • Ashok,Bangalore

  11:21 PM, 19/05/2018

  ಗುರುಗಳೇ, ಅಪರೋಕ್ಷ ಜ್ಞ್ನಾ ನ ಎನ್ನುವುದು(ಜೀವಂತರ್ಗತ bimba ರೂಪಿ ಪರಮಾತ್ಮನ ದರ್ಶನ), ಅನಂತ ಜನ್ಮಗಳ ಇಡೀ ಸ0ಸಾರ ಯಾತ್ರೆಯಲ್ಲಿ ಎಷ್ಟು ಬಾರಿ ಆಗುತ್ತದೆ ? ದಯವಿಟ್ಟು ತಿಳಿಸಿ ಕೊಡಿ 🙏🙏

  Vishnudasa Nagendracharya

  ಅಪರೋಕ್ಷ ಜ್ಞಾನ ಎನ್ನುವದು ಒಂದೇ ಬಾರಿ ಆಗುವದು. ಆ ನಂತರದಲ್ಲಿ ಮೋಕ್ಷವಾಗುವವರೆಗೆ ನಮ್ಮ ಯೋಗ್ಯತಾನುಸಾರಿಯಾಗಿ ಎಷ್ಟು ಬಾರಿಯಾದರೂ ಧ್ಯಾನವನ್ನು ಮಾಡಿ ಅಂತರ್ಯಾಮಿಯ ದರ್ಶನವನ್ನು ಪಡೆಯುತ್ತಿರಬಹುದು. 
 • Deshpande.P.N.,Bangalore

  1:37 PM , 20/05/2018

  s.namaskargalu. Aa Bhagwantanu namgoo Namma yoaggyteayente antyakaaldalli smarnea baruwante anugrahsali
 • Krishnaa,Bangalore

  7:31 PM , 19/05/2018

  Shri gurubhyo namah.
  These three upanyasas are close to my heart acharyare, thank you for dealing in depth with them.
  Namaskaragalu.

  Vishnudasa Nagendracharya

  This is how Srimad Bhagavatam works. Certain shlokas directly touch our soul and bring us to Sadhana Marga in full force. 
 • Krishnaa,Bangalore

  10:55 AM, 19/05/2018

  Shri gurubhyo namah.
  This upanyasa is like a beacon of light, inspiring us to do our little saadhane of namasmarane and namasankeertane .Our day is incomplete without repeated shravana of these wonderful upanyasas. We can not thank you enough for guiding us to the right path.
  Namaskaragalu.
 • Niranjan Kamath,Koteshwar

  8:41 AM , 19/05/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀಮಾನ್ ನಾರಾಯಣ ರೂಪಿ ಶ್ರೀ ವೇದವ್ಯಸಾತ್ಮಜ ಶ್ರೀ ಶುಕ ಮುನಿಗಳಲ್ಲಿ ನಮಗೆ ಸಾಧನೆಯ ಮಾರ್ಗದಲ್ಲಿ ಚಲಿಸುವಂತೆಯೂ , ಅಂತಿಮ ಕಾಲದಲ್ಲೂ ಭಗವನ್ ಸ್ಮರಣೆ ಆಗುವಂತೆಯೂ ಆಶೀರ್ವದಿಸಲಿ ಎಂದು ಪ್ರಾರ್ಥಿಸುತೇನೆ. ಧನ್ಯೋಸ್ಮಿ