Upanyasa - VNU675

ಶ್ರೀಮದ್ ಭಾಗವತಮ್ — 145 — ವೃದ್ಧಾಪ್ಯ ಹೇಗಿರಬೇಕು

ಅಂತ್ಯಕಾಲ ಸಮೀಪಿಸಿದಾಗ ಸಾವಿನ ಭಯ ಬಿಡಬೇಕು ಎನ್ನುತ್ತಾರೆ ಶ್ರೀ ಶುಕಾಚಾರ್ಯರು. ಸಾವಿನ ಭಯ ಹೋಗಬೇಕಾದರೆ ಏನು ಮಾಡಬೇಕು ಎನ್ನುವದಕ್ಕೆ ಭಗವದ್ಗೀತೆ ಮುಂತಾದ ಶಾಸ್ತ್ರಗಳಲ್ಲಿ ಭಗವಂತ ತಿಳಿಸಿದ, ಅನುಭಾವಿಗಳು ತಮ್ಮ ಕೃತಿಗಳಲ್ಲಿ ತಿಳಿಸಿದ ಮಹತ್ತ್ವದ ವಿಷಯಗಳನ್ನು ನಿರೂಪಿಸಿ ನಮ್ಮ ಯೋಗ್ಯತೆಯಂತೆ ನಮ್ಮ ವೃದ್ಧಾಪ್ಯವನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎನ್ನುವದರ ಕುರಿತು ಚರ್ಚಿಸಲಾಗಿದೆ. 

ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತದ ವಚನಗಳು — 

ಭಾಗವತ ದ್ವಿತೀಯಸ್ಕಂಧದ ಪ್ರಥಮಾಧ್ಯಾಯ. 

Play Time: 49:08

Size: 7.60 MB


Download Upanyasa Share to facebook View Comments
8562 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  11:08 AM, 21/03/2020

  ನೀವು ನೀಡುತ್ತಿರುವ ಶ್ರೀಮದ್ಭಾಗವತವನ್ನು ನಾವು ಶ್ರವಣ ಮಾಡುತ್ತಿಲ್ಲ ಗುರುಗಳೆ....ಮತ್ತೆ..?
  ಆನಂದಾಶ್ರುಗಳ ಸಮೇತ ಆಸ್ವಾದನೆ ಮಾಡುತಿದ್ದೇವೆ...
  
  "ನಮ್ಮ ಕಮ೯ದಂತೆ ನಮ್ಮ ಸಂಭಂದಗಳು....ನಮ್ಮ ಸಂಭಂದಿಗಳು..
  ಇವರೆಲ್ಲರ ಸಂಭಂದವು ಕಮ೯ ಮುಗಿದ ಕ್ಷಣದಲ್ಲಿ ಕಡಿದು ಹೋಗುತ್ತದೆ....
  ಸಂಭಂದಗಳ ಪರದೆಯನ್ನು ಸರಿಸಿ ನೋಡು, ತಂದೆಯಲ್ಲಿ ನಿಮತು ಬುದ್ಧಿ ಹೇಳಿದವನು ಭಗವಂತ, ತಾಯಿಯ ಹೊಟ್ಟೆಯಲ್ಲಿ ಕುಳಿತು ರಕ್ಷಣೆಯನ್ನು ಮಾಡಿದವನು ಭಗವಂತ....
  ಯಾವ ಕಮ೯ದ ಬಂಧನವೂ ಇಲ್ಲದ ಲೇಪವೂ ಇಲ್ಲದ ಭಗವಂತನೊಂದಿಗೇ ನಮ್ಮ ಶಾಶ್ವತವಾದ ಸಂಭಂದ...."
  
  ಸಾಧನೆ ಮಾಡುವ ಹಪಹಪಿಕೆ ಯಾವ ರೀತಿಯಲ್ಲಿ ನಮ್ಮೊಳಗಿರಬೇಕು ಅನ್ನುವದನ್ನು ತಿಳಿಸಿದ ರೀತಿ ಪರಮಾದ್ಭುತವಾಗಿತ್ತು...
  
  ತಾಯಿಯ ಹೊಟ್ಟೆಯಲ್ಲಿ ಈಗತಾನೇ ಮೆದುಳು ಬೆಳೆಯಲು ಆರಂಭವಾಗಿದೆ...
  
  "ಜನ್ಮಾದ್ಯಸ್ಯತೋನ್ವಯಾತ್...ಅಂತ ನಮ್ಮ ಶ್ರವಣದ ಆರಂಭ..."
  
  "ಏಕಾದಶೀದಿವಸ ಅನ್ನ ತಿನ್ನುವ ತಾಯಿಯ ಹಾಲನ್ನು ಕುಡಿಯುವಂತಿರಬಾರದು ನನ್ನ ಹುಟ್ಟು..."
  ಅಂತ್ಯಕಾಲ ಬಂದಾಗ ಸಂಭ್ರಮವಾಗಬೇಕು..
  ನನಗಿನ್ನು ಈ ದೇಹ ಹೋಗಿ...ಹೊಸದಾದ ಸಾಧನಾ ದೇಹ ಬರುತ್ತದೆ..."
  
  ಅಷ್ಟು ಯೋಗ್ಯತೆ ನಮಗಿದೆಯೊ ಇಲ್ಲವೊ ಗೊತ್ತಿಲ್ಲ...ಆದರೆ ಮನಸ್ಸು ಮಾತ್ರ ಇಂತಹ ಜನ್ಮಕ್ಕಾಗಿ ಹಂಬಲಿಸಿತ್ತಿದೆ...
  
   ಮುಂದಿನ ಜನ್ಮ ಯಾವ ರೀತಿಯಾಗಿರಬೇಕು ಅನ್ನುವದನ್ನು ಈಗಲೇ ನಿಶ್ಚಯ ಮಾಡಿಕೊಂಡು ಅದಕ್ಕೆ ಬೇಕಾದ ಸಾಧನೆ ನಮ್ಮದಾಗಬೇಕು ಅಂತ... ತಿಳಿಸಿದ ರೀತಿ ತುಂಬಾ ಇಷ್ಟವಾಯಿತು...
  
  ಅದು ಇಷ್ಟ ಇದು ಇಷ್ಟ ಅನ್ನುವ ಪ್ರಶ್ನೆಯೇ ಇಲ್ಲ ಗುರುಗಳೆ...
  
  ಎಲ್ಲವೂ ಮೃಷ್ಟಾನ್ನವೇ....🙏
 • Vijaya bharathi k b,Bangalore

  12:13 PM, 26/07/2019

  👌🙏
 • Ashok Badarayan,Bangalore

  10:51 PM, 12/07/2019

  No words to say Acharyare. Have just gone silent after listening to this. Devaru kottare aa reethiya vruddhapyada bhagya barabahudu.
 • Ashok Badarayan,Bangalore

  10:51 PM, 12/07/2019

  No words to say Acharyare. Have just gone silent after listening to this. Devaru kottare aa reethiya vruddhapyada bhagya barabahudu.
 • Deshpande.P.N.,Bangalore

  1:31 PM , 06/06/2018

  S.Namaskargalu
 • Narayanaswamy,chamarajanagara

  9:50 AM , 24/05/2018

  ಪರಮ ಪೂಜ್ಯಗುರುಗಳಿಗೆ ಪ್ರಣಾಮಗಳು
  ವಿಶ್ವನಂದಿನಿ ಮೂಲಕ ಸಮಸ್ತ ವರ್ಣಾಶ್ರಮಗಳಿಗೂ ಜ್ಞಾನ ಕರುಣಿಸುತ್ತಿರುವ ತಮಗೆ ಕೋಟಿ ಕೋಟಿ ವಂದನೆಗಳು. ಜನ್ಮ ಜನ್ಮದಲ್ಲು ನಿಮ್ಮ ಮಾರ್ಗದರ್ಶನ ಸಿಗುವಂತಾಗಲಿ.
 • Latha Ramesh,Coimbatore

  8:09 AM , 24/05/2018

  Namaskaragalu Gurugalige 🙏🙏🙏🙏
 • H. Suvarna Kulkarni,Bangalore

  5:22 PM , 22/05/2018

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ದ ರಸಸ್ವಾದವನ್ನು ಬಣ್ಣಿಸಲು ಶಬ್ದಗಳಿಲ್ಲ.ಜಯಶ್ರೇಕರುಣಾಕರ ಅವರು ತಿಳಿಸಿದಂತೆ ಶ್ರೀ ಮದ್ಭಾಗವತ ಕೇಳದೇ ಇರುವ ದಿನಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತೊಮ್ಮೆ ಧನ್ಯವಾದಗಳು
 • Jasyashree Karunakar,Bangalore

  2:03 PM , 22/05/2018

  Gurugale you made me to understand what I have lost all these years, after listening your soul touching upyasa... 
  We are very much Blessed for this...
 • Deshpande.P.N.,Bangalore

  2:00 PM , 22/05/2018

  S.Namaskargalu SrimadBhagwatada swaada andarea bhakktiya swaada. Anthapurwaka namangalu
 • Jasyashree Karunakar,Bangalore

  1:37 PM , 22/05/2018

  ಗುರುಗಳೆ
  
   ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಾ ಸಾಗುತ್ತಿರುವ , ರಸಾಸ್ವಾದವನ್ನು ನೀಡುತ್ತಿರುವ ಶ್ರೀಮದ್ಭಾಗವತದ ಶ್ರವಣವನ್ನು ಮಾಡದೇ ಇರುವ ದಿನಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.
  ನಿರಂತರ ಶ್ರವಣದ ಫಲ ಇದು ಅಥ೯ಮಾಡಿಸಿದ ನಿಮಗೆ ಭಕ್ತಿಯ ನಮಸ್ಕಾರಗಳು
 • Niranjan Kamath,Koteshwar

  9:38 AM , 22/05/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀ ಕನಕದಾಸರ ಪದಕಮಲಗಳಿಗೆ ನಮೋ ನಮಃ. ಅವರ ಪದಗಳ ಬಳಕೆಯೇ ಅಮೋಘ. ಧನ್ಯೋಸ್ಮಿ