26/05/2018
ಬ್ರಹ್ಮದೇವರು ಸಮಗ್ರ ಹದಿನಾಲ್ಕು ಲೋಕಗಳನ್ನು ಸೃಷ್ಟಿ ಮಾಡು ಜ್ಞಾನ-ಸಾಮರ್ಥ್ಯಗಳನ್ನು ಪಡೆದದ್ದು ಈ ವೈರಾಜಪುರುಷದ ಧ್ಯಾನದಿಂದಲೇ ಎಂಬ ಅತ್ಯಪೂರ್ವಪ್ರಮೇಯವನ್ನು ಶುಕಾಚಾರ್ಯರು ತಿಳಿಸುತ್ತಾರೆ. ಮನುಷ್ಯನ ಸಮಸ್ತ ಮನೋದೋಷಗಳ ವಿನಾಶ ಮತ್ತು ಸಕಲ ಕರ್ಮಗಳಿಗೂ ಅನಂತಫಲ ಉಂಟಾಗುವದು ವಿರಾಡ್ರೂಪದ ಚಿಂತನೆಯಿಂದ ಎನ್ನುವ ತತ್ವದ ವಿವರಣೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತದ ವಚನ— ದ್ವಿತೀಯಸ್ಕನ್ಧೇ ದ್ವಿತೀಯೋಽಧ್ಯಾಯಃ। ಶ್ರೀಶುಕ ಉವಾಚ — ಏವಂ ಪುರಾ ಧಾರಣಯಾsತ್ಮಯೋನಿರ್ನಷ್ಟಾಂ ಸ್ಮೃತಿಂ ಪ್ರತ್ಯವರುಹ್ಯ ತುಷ್ಯನ್। ತಥಾ ಸಸರ್ಜೇದಮಮೋಘದೃಷ್ಟಿರ್ಯಥಾsಪ್ಯಯಾತ್ ಪ್ರಾಗ್ ವ್ಯವಸಾಯಬುದ್ಧಿಃ ।। ೧ ।।
Play Time: 52:19
Size: 7.60 MB