10/06/2018
ಸಾವಿನ ಭಯವನ್ನು ಕಳೆದುಕೊಳ್ಳಬೇಕು ಎಂದು ಭಾಗವತ ಆದೇಶಿಸುತ್ತದೆ — “ಅಂತಕಾಲೇ ತು ಪುರಷ ಆಗತೇ ಗತಸಾಧ್ವಸಃ” ಎಂದು. ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲದ ಈ ಸಾವಿನ ಭಯವನ್ನು ಗೆಲ್ಲುವ ಕ್ರಮವನ್ನು ಭಗವದ್ಗೀತೆ ಮತ್ತು ದಾಸಸಾಹಿತ್ಯ ತಿಳಿಸಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನದೊಂದಿಗೆ. ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು|| ಕಟ್ಟು ಮಾಡಿದನಂತೆ ಯಮ ತನ್ನ ದೂತರಿಗೆ|| ತಿರುಮಣ್ಣು ಶ್ರೀಚೂರ್ಣ ಪೂರ್ಣ ದ್ವಾದಶ ನಾಮ ಸಿರಿತುಳಸಿ ವನಮಾಲೆ ಕೊರಳಿನೊಳಗೆ ಇಪ್ಪವರ| ತಿರುಮಂತ್ರ ತೀರ್ಥ ಪ್ರಸಾದ ಕೊಳಗಾದವರ ತಿರುಪತಿಯ ಯಾತ್ರೆಯನು ಮಾಡಿದ ಮಹಾತ್ಮರನು|| ಬಡವನಾಗಲಿ ಅವನು ಬಲ್ಲಿದನು ಆಗಲಿ ಕಡುಮೂರ್ಖ ಘೋರ ಪಾತಕಿಯಾಗಲಿ| ನುಡಿ ನುಡಿಗೆ ಮಾಧವನ ಬಿಡದೆ ಕೊಂಡಾಡುವರ ಗೊಡವೆ ಬೇಡೆಂದ ಯಮ ತನ್ನ ದೂತರಿಗೆ| ವಾಸುದೇವ ಎಂಬ ವಾಕ್ಯವನ್ನು ಪಠಿಸುವರ ಬೇಸರದೆ ಶ್ರೀಹರಿಯ ಧ್ಯಾನದೊಳಗಿಪ್ಪವರ| ವಾಸುಕಿ ಶಯನ ಕಾಗಿನೆಲೆಯಾದಿ ಕೇಶವನ ದಾಸರ ದಾಸರ ದಾಸನಂತೆಂಬವರ||
Play Time: 14:59
Size: 3.54 MB