Upanyasa - VNU690

08 ರಾಯರ ಮಹಾಗುಣಗಳು

ಶ್ರೀರಾಘವೇಂದ್ರಸ್ತೋತ್ರ — ಶ್ಲೋಕ 06 

ನಿರಸ್ತದೋಷೋ ನಿರವದ್ಯವೇಷಃ
ಪ್ರತ್ಯರ್ಥಿಮೂಕತ್ವನಿದಾನಭಾಷಃ ।
ವಿದ್ವತ್ಪರಿಜ್ಞೇಯಮಹಾವಿಶೇಷೋ
ವಾಗ್ವೈಖರೀನಿರ್ಜಿತಭವ್ಯಶೇಷಃ ।।

ನಮ್ಮ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ರಾಗ ದ್ವೇಷಗಳನ್ನು ಗೆದ್ದವರು, ಸಲ್ಲಕ್ಷಣಶರೀರಭರಿತರಾಗಿ, ಆಶ್ರಮಗಳಲ್ಲಿಯೇ ಶ್ರೇಷ್ಠವಾದ ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ದೋಷವಿಲ್ಲದ ಕಾಷಾಯವನ್ನುಟ್ಟವರು, ವಿದ್ವಜ್ಜನರಿಗೆ ಗೋಚರವಾಗುವ ಮಾಹಾತ್ಮ್ಯವುಳ್ಳವರು, ತಮ್ಮ ಅದ್ಭುತವಾದ ಮಾತುಗಾರಿಕೆಯಿಂದ ಶೇಷದೇವರನ್ನು ನೆನಪಿಸುತ್ತಿದ್ದವರು, ಪ್ರತಿವಾದಿಗಳನ್ನು ನಿರುತ್ತರರನ್ನಾಗಿ ಮಾಡುತ್ತಿದ್ದವರು, ಶೇಷನೆಂಬ ಮಹಾಪಂಡಿತನನ್ನು ಗೆದ್ದವರು. 

ನಿರಸ್ತದೋಷಃ — ರಾಗ ದ್ವೇಷ ಮುಂತಾದ ದೋಷಗಳಿಂದ ದೂರವಾಗಿದ್ದವರು

ನಿರವದ್ಯವೇಷಃ — ಸಲ್ಲಕ್ಷಣಭರಿತವಾದ ಶರೀರವುಳ್ಳವರು, ದೋಷವಿಲ್ಲದ ಕಾಷಾಯವಸ್ತ್ರವನ್ನುಟ್ಟವರು. 

ಪ್ರತ್ಯರ್ಥಿಮೂಕತ್ವನಿದಾನಭಾಷಃ — ಪ್ರತಿವಾದಿಗಳನ್ನು ನಿರುತ್ತರರನ್ನಾಗಿಸುವ ಅದ್ಭುತವಾದ ಮಾತುಗಾರಿಕೆಯುಳ್ಳವರು, 

ವಿದ್ವತ್ಪರಿಜ್ಞೇಯಮಹಾವಿಶೇಷಃ — ವಿದ್ವಜ್ಜನರಿಗೆ ಗೋಚರವಾಗುವಂತಗ ಶ್ರೇಷ್ಠ ಮಾಹಾತ್ಮ್ಯವುಳ್ಳವರು

ವಾಗ್ವೈಖರೀನಿರ್ಜಿತಭವ್ಯಶೇಷಃ — ತಮ್ಮ ಮಾತಿನ ವೈಭವದಿಂದ ಶೇಷದೇವರಂತೆ ಕಂಗೊಳಿಸುತ್ತಿದ್ದವರು, ತಮ್ಮ ಮಾತಿನ ವೈಖರಿಯಿಂದ ಶೇಷನೆಂಬ ಭವ್ಯಪಂಡಿತನನ್ನು ಗೆದ್ದವರು. 


 

Play Time: 26:46

Size: 6.13 MB


Download Upanyasa Share to facebook View Comments
8301 Views

Comments

(You can only view comments here. If you want to write a comment please download the app.)
 • Sowmya,Bangalore

  4:57 PM , 24/08/2021

  🙏🙏🙏
 • Apoorva Anandateertha,Bangalore

  7:27 PM , 09/09/2018

  🙏🙏🙏🙏
 • Vrunda.s,Kenchanagudda,siruguppa(tq)

  4:38 PM , 07/09/2018

  Super
 • Deshpande.P.N.,Bangalore

  4:03 PM , 06/09/2018

  Fantastic Anugrahvirali
 • K Dattatreya,Yeshwantnagar Sandur

  1:49 PM , 24/08/2018

  ನಮಸ್ಕಾರ ಆಚಾರ್ಯರಿಗೆ
  ಈ ಶ್ಲೋಕ ವನ್ನು ತಮ್ಮ ಧ್ವನಿಯಲ್ಲಿ ಕಳಿಸಿ, ಪಠಣ ಮಾಡಲು ನಮಗೆ ಸಹಾಯ ಆಗುತ್ತದೆ
 • K Dattatreya,Yeshwantnagar Sandur

  1:43 PM , 24/08/2018

  ನಮಸ್ಕಾರಗಳು 
  ಬಹಳ ದಿನದಿಂದ ಕಾಯ್ದೆ
 • Aniruddha,Bangalore

  10:52 AM, 24/08/2018

  Tumba dinadinda kayuteddevu.dhanyavadagalu,🙏🙏🙏
 • Tvenkatesh,Hyderabad

  7:45 AM , 24/08/2018

  Dhanyasmahaa