05/09/2018
ಶ್ರೀ ರಾಘವೇಂದ್ರ ಮಂತ್ರ, ಯಾರಿಂದ ಉಪದೇಶ ತೆಗೆದುಕೊಳ್ಳಬೇಕು, ಯಾರಿಂದ ಉಪದೇಶ ತೆಗೆದುಕೊಳ್ಳಬಾರದು, ಯಾರಿಂದ ತೆಗೆದುಕೊಳ್ಳಬೇಕು, ಮಂತ್ರೋಪದೇಶ ಮಾಡಬಲ್ಲ ಉತ್ತಮ ಗುರುಗಳನ್ನು ಪಡೆಯಲು ಏನು ಮಾಡಬೇಕು, ನಮ್ಮ ರಾಯರನ್ನು ಧ್ಯಾನ ಮಾಡಬೇಕಾದ ಕ್ರಮವೇನು ಎಂಬೆಲ್ಲ ವಿಷಯಗಳ ಚಿಂತನೆಯೊಂದಿಗೆ ಭಕ್ತರ ಸಮಸ್ತ ಅಭೀಷ್ಟಗಳನ್ನು ಪೂರೈಸುವ, ಸಕಲ ಕಷ್ಟಗಳನ್ನು ಕಳೆಯುವ ಶ್ರೀಮದ್ ರಾಘವೇಂದ್ರ ಅಷ್ಟಾಕ್ಷರ ಮಂತ್ರದ ಕುರಿತ ಯಥಾಮತಿ ವಿವರಣೆ ಇಲ್ಲಿದೆ. ರಾಯರ ಮಂತ್ರವನ್ನು ಆದಿ ಅಂತ್ಯಗಳಲ್ಲಿ ಪ್ರಣವವನ್ನು ಜಪಿಸುತ್ತಲೇ ಯೋಗ್ಯ ಅಧಿಕಾರಿಗಳು ಜಪಿಸಬೇಕು ಮತ್ತು ಸ್ತೋತ್ರದಲ್ಲಿ ಪ್ರಣವವಿಲ್ಲ ಎಂಬ ವಿಷಯವನ್ನು ಇಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಲಾಗಿದೆ. ಇಲ್ಲಿ ವಿವರಣೆಗೊಂಡ ರಾಯರ ಸ್ತೋತ್ರದ ಶ್ಲೋಕ. — ಶ್ರೀರಾಘವೇಂದ್ರಾಯ ನಮ ಇತ್ಯಷ್ಟಾಕ್ಷರಮಂತ್ರತಃ। ಜಪಿತಾದ್ ಭಾವಿತಾನ್ನಿತ್ಯಮಿಷ್ಟಾರ್ಥಾಃ ಸ್ಯುರ್ನ ಸಂಶಯಃ ।
Play Time: 26:04
Size: 5.97 MB