Upanyasa - VNU699

ಶ್ರೀಮದ್ ಭಾಗವತಮ್ — 149 — ದೇವರ ಸರ್ವಶಬ್ದವಾಚ್ಯತ್ವ

ಎಲ್ಲ ಶಬ್ದಗಳೂ ದೇವರ ಹೆಸರು ಹೇಗಾಗಲು ಸಾಧ್ಯ ಎನ್ನುವದಕ್ಕೆ ಶಾಸ್ತ್ರ ತಿಳಿಸುವ ಆರು ಕಾರಣಗಳ ವಿವರಣೆಯೊಂದಿಗೆ
ದೇವರನ್ನು ಸರ್ವಶಬ್ದವಾಚ್ಯ ಎಂದು ಒಪ್ಪುವದರಿಂದ ಉಂಟಾಗುವ ಮಹತ್ತರ ಪ್ರಯೋಜನದ ಕುರಿತು ನಾವಿಲ್ಲಿ ಕೇಳುತ್ತೇವೆ. 

ವೇದಗಳು ಕೋಟಿ ಕೋಟಿ ದೇವರನ್ನು ಹೇಳುತ್ತವೆ ಎಂದು ಲೇವಡಿ ಮಾಡುವ ಜನರಿಗೆ, ವೇದಗಳಲ್ಲಿ ಕೋಟಿ ದೇವರು ದೂರ ಉಳಿಯಿತು ಇಬ್ಬರು ದೇವರನ್ನೂ ಸಹ ವೇದಗಳು ಉಲ್ಲೇಖಿಸುವದಿಲ್ಲ, ವೇದಗಳು ಹೇಳುವದು ಕೇವಲ ಒಬ್ಬ ದೇವರನ್ನು ಮಾತ್ರ ಎನ್ನುವ ಉತ್ತರದ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಎರಡನೆಯ ಸ್ಕಂಧ, ಎರಡನೆಯ ಅಧ್ಯಾಯ. 

ಶಬ್ದಸ್ಯ ಹಿ ಬ್ರಹ್ಮಣ ಏಷ ಪನ್ಥಾ ಯನ್ನಾಮಭಿರ್ಧ್ಯಾಯತಿ ಧೀರಪಾರ್ಥೈಃ।
ಪರಿಭ್ರಮಂಸ್ತತ್ರ ನ ವಿನ್ದತೇಽರ್ಥಾನ್ ಮಾಯಾಮಯೇ ವಾಸನಯಾ ಶಯಾನಃ ।। ೨ ।।

ಅತಃ ಕವಿರ್ನಾಮಸು ಯಾವದರ್ಥಃ ಸ್ಯಾದಪ್ರಮತ್ತೋ ವ್ಯವಸಾಯಬುದ್ಧಿಃ।
ಸಿದ್ಧೇಽನ್ಯಥಾರ್ಥೇ ನ ಯತೇತ ತತ್ತತ್ಪರಿಶ್ರಮಂ ತತ್ರ ಸಮೀಕ್ಷಮಾಣಃ ।। ೩ ।।

ಭಾಗವತತಾತ್ಪರ್ಯಮ್ ।

ಏಷಃ ಹರಿಃ । ಯದಪಾರ್ಥೈರ್ಧ್ಯಾಯತಿ । ತತ್ರಾರ್ಥಾನ್ ನ ವಿನ್ದತೇ ।
“ಸರ್ವನಾಮಾ ಯತೋ ವಿಷ್ಣುಸ್ತದನ್ಯಾರ್ಥಾನ್ ನತು ಸ್ಮರೇತ್ । 
ಸ್ಮರಂಸ್ತು ಯಾವದರ್ಥಃ ಸ್ಯಾತ್ ಅನ್ಯಥಾ ಸ್ವಾತ್ಮಹಾ ಸ್ಮೃತಃ” ಇತಿ ಬ್ರಹ್ಮಾಂಡೇ। 


Play Time: 38:04

Size: 5.97 MB


Download Upanyasa Share to facebook View Comments
8055 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  10:59 AM, 11/04/2020

  ಸಕಲ ಬ್ರಹ್ಮಾಂಡವೂ ನಾಶವಾಗಿದೆ....
  
  ಬ್ರಹ್ಮಾಂಡದಲ್ಲಿರುವ ಸಕಲ ಪದಾಥ೯ವೂ ನಾಶವಾಗಿದೆ...
  
  ಆವರಣಗಳೂ ನಾಶವಾಗಿದೆ...
  
  ಆದರೆ,ಪರಮಾತ್ಮನನ್ನು ವಣಿ೯ಸುವ ವೇದಗಳು ನಾಶವಾಗಿಲ್ಲ, ವೇದದಲ್ಲಿ ಹೇಳಿದ ಪದಾಥ೯ಗಳಾದ...ಭೃಗು, ವರುಣ...ಮುಂತಾದ ಯಾರೂ... ಯಾವುದೂ ಇಲ್ಲ... 
  
  ಹಾಗಾದರೆ ನಿಜವಾದ ಭೃಗು...ವರುಣ ಅನ್ನುವ ಹೆಸರು ನಾರಾಯಣನದು ಅಂತಾಯಿತು.....
  
  *ಸಕಲ ಪದಗಳೂ ಪರಮಾತ್ಮನನ್ನೇ ತಿಳಿಸುತ್ತಿದೆ* 
  
  ದೇವರ ಸವ೯ ಶಬ್ದ ವಾಚ್ಯತ್ವ ತುಂಬಾ ಚೆನ್ನಾಗಿ ಪ್ರೂವ್ ಮಾಡಿದ್ದೀರಿ....
  
  ಎನು ವೈಭವದ ಉಪನ್ಯಾಸವಿದು ಗುರುಗಳೆ....
  
  ಎರಡು ಕಿವಿಯು ಸಾಲದಾಗಿದೆ...ಹಿಡಿದಿಟ್ಟುಕೊಳ್ಳಲು ಬುದ್ಧಿಯಲ್ಲಿರುವ ಶಕ್ತಿಯೂ ಸಾಲದಾಗಿದೆ...
  
  ಹೃದಯದಲ್ಲಿ ಇನ್ನಷ್ಟು ಇನ್ನಷ್ಟು ತುಂಬಿಕೊಳ್ಳಬೇಕೆಂಬ ಹಂಬಲ ಜಾಸ್ತಿಯಾಗಿದೆ....
 • Deshpande.P.N.,Bangalore

  10:33 AM, 20/10/2018

  S.Namaskargalu. Anugrahvirali
 • Srinath Ramachandra,Bengaluru

  4:46 AM , 20/10/2018

  Welcome to Advaitha

  Vishnudasa Nagendracharya

  :-)
  
  Absolutely this is not adwaitha. All Vaidik philosophies say there is only one God. 
  
  According to Adwaitha nothing exists other than Brahman.
  
  The truth is - infinite chetana and Achetatana entities exist and and Sriman Narayana is thier lord!
  
  Please wait until 2025. I will teach Samskrutha and basic shastras to one and all and then take up the issues of Dwaitha advaitha etc. 
  
  Will provide a wonderful forum for such debates.
 • ಸುದರ್ಶನ ಶ್ರೀ. ಲ.,ಬೆಂಗಳೂರು

  11:08 AM, 19/10/2018

  ಈ ಎಲ್ಲಾ ಕಾರಣಗಳಿಂದ ಪರಬ್ರಹ್ಮ ಸರ್ವಶಬ್ದವಾಚ್ಯ
  
  ೧) ಪರಮಾತ್ಮನನ್ನೇ ತಿಳಿಯಬೇಕಯ ಮುಕ್ತಿಗಾಗಿ. ಹೀಗಾಗಿ ವೇದಾದಿ ಶಾಸ್ತ್ರಗಳ ಶಬ್ದಗಳಿಂದ ಮುಖ್ಯವಾಗಿ ಮತ್ತು ಮೊದಲನೇಯದಾಗಿ ತಿಳಿಯಬೇಕಾದದ್ದು ಪರಬ್ರಹ್ಮ.
  ೨) ಎಲ್ಲ ಶಬ್ದಗಳು ಪರಮಾತ್ಮನ ಸ್ವಾತಂತ್ರ್ಯ ತಿಳಿಸುವುದರಲ್ಲಿ ಪರ್ಯವಸಾನವಾಗುತ್ತದೆ.
  ೩) ಸೃಷ್ಟಿಯ ಮುಂಚೆ ಅವನೊಬ್ಬನೇ ವಾಚ್ಯ
  ೪) ಎಲ್ಲರ ಒಳಗೂ ಅವನೇ ಇದ್ದಾನೆ
  ೫) ಎಲ್ಲವೂ ಅವನ ಅಧೀನ ಆದರೆ ಅವನು ದೋಷಗಳನ್ನು ನಿಯಮನ ಮಾಡುವನು ಹೊರತು ಅವನು ಅನುಭವಿಸುವವನಲ್ಲ
  ೬) ಸರ್ವಗುಣಪೂರ್ಣ - ವಸ್ತುವಿನ ಗುಣ ತಿಳಿಸಲು ಮುಂದಾದ ಶಬ್ದಗಳಿಂದಲೂ ಪೂರ್ಣವಾಗಿ ವಾಚ್ಯ
  
  ೫ನೇಯದು ೨ನೇಯ ಕಾರಣದಲ್ಲಿ ಪರ್ವಸಾನವಾಗುತ್ತದೆ.
  ೨ನೇಯ ಮತ್ತು ೪ನೇಯ ಕಾರಣಗಳು ೬ನೇಯದರಲ್ಲಿ ಪರ್ಯವಸಾನವಾಗುತ್ತದೆ.
  
  ಯಾಕೆ ೩ ಕಾರಣಗಳನ್ನು ಹೇಳುವುದರ ಬದಲು ೬ ಕಾರಣಗಳನ್ನು ಗುರುಗಳು ನೀಡಿದ್ದಾರೆ ?🙏🙏🙏

  Vishnudasa Nagendracharya

  ಐದನೆಯದು ಎರಡನೆಯದರಲ್ಲಿ ಪರ್ಯವಸಾನವಾಗುವದಿಲ್ಲ. 
  
  ಸ್ವತಂತ್ರನಾದ ಮಾತ್ರಕ್ಕೆ ಎಲ್ಲವೂ ಅವನ ಅಧೀನವಾಗಬೇಕು ಎಂಬ ನಿಯಮವಿಲ್ಲ. ಉದಾಹರಣೆಗೆ ನಮ್ಮ ಭಾರತದೇಶ ಸ್ವತಂತ್ರವೆಂದ ಮಾತ್ರಕ್ಕೆ ಇಡಿಯ ಪ್ರಪಂಚ ಅದರ ಅಧೀನವಲ್ಲ. 
  
  ಸ್ವತಂತ್ರ ಎಂದರೆ ಯಾರ ಅಧೀನನಲ್ಲ ಎಂದಷ್ಟೇ ಅರ್ಥ. ಎಲ್ಲದರ ಒಡೆಯ ಅಥವಾ ಎಲ್ಲವೂ ಅವನಧೀನ ಎನ್ನುವದು ಮತ್ತೊಂದು ಗುಣ. 
  
  ಸ್ವತಂತ್ರ ಎಂದಾದ ಮಾತ್ರಕ್ಕೆ ಅವನು ಸರ್ವಾಂತರ್ಯಾಮಿಯಾಗಬೇಕಾಗಿಲ್ಲ. ಅದೂ ಒಂದು ಪ್ರತ್ಯೇಕ ಗುಣ. 
  
  ವಸ್ತುಸ್ಥಿತಿಯಲ್ಲಿ ಆರನೆಯ ಕಾರಣದಲ್ಲಿ ಎಲ್ಲವೂ ಪರ್ಯವಸಾನವಾಗುತ್ತದೆ. 
  
  ವಸ್ತುವಿನಲ್ಲಿರುವ ಗುಣಗಳೂ ಸಹ ಭಗವಂತನಲ್ಲಿವೆ ಎಂದು ತಿಳಿಸಲು ಆರನೆಯ ಕಾರಣ ಹೊರಟಿದೆ. ಹೀಗಾಗಿ ಆ ಆರನೆಯ ಕಾರಣದಲ್ಲಿ ಎಲ್ಲವೂ ಪರ್ಯವಾಸನವಾಗುತ್ತದೆ. ಆದರೂ ಸಹ ಉಪನ್ಯಾಸದಲ್ಲಿ ತಿಳಿದಂತೆ ವಿಶೇಷಾಂಶಗಳನ್ನು ನಿರೂಪಿಸಲು, ಮತ್ತು ಆಯಾಯ ಫಲಗಳನ್ನು ಪಡೆಯಲು ಆರು ಪ್ರತ್ಯೇಕವಾಗಿ ನಿರೂಪಿತವಾಗಿವೆ. 
 • Sathyanarayana,Mysuru

  7:06 AM , 19/10/2018

  ಎಲ್ಲ ಹೆಸರು ದೇವರದ್ದಾದ ಮೇಲೆ ಈ ದಿನಗಳಲ್ಲಿ ಅರ್ಥವಿಲ್ಲದ ಹೆಸರುಗಳೂ ಸಹ ದೇವರ ಹೆಸರಾದರೆ ಕೃಷ್ಣ ನಾರಾಯಣ ಗೋವಿಂದ ಗೋಪಾಲ ಇವುಗಳಿಗೂ ವ್ಯತ್ಯಾಸ ವಿಲ್ಲವೆ

  Vishnudasa Nagendracharya

  ಅವಶ್ಯವಾಗಿ ವ್ಯತ್ಯಾಸವಿದೆ. 
  
  ದೇವರು ಎಲ್ಲೆಡೆಯಲ್ಲಿಯೂ ಇದ್ದಾನೆ. ಹಾಗೆಂದು ಎಲ್ಲ ವಸ್ತುಗಳನ್ನೂ ನಾವು ಪೂಜಿಸುವದಿಲ್ಲ. ಆ ವಸ್ತುವಿನ ಏನು ಕಾರ್ಯವೋ ಅದನ್ನೇ ಮಾಡುತ್ತೇವೆ. ಉದಾಹರಣೆಗೆ ಪಾದರಕ್ಷೆ ಮತ್ತು ತುಳಸೀಮಣಿಯ ಹಾರ. ಪಾದರಕ್ಷೆ ಮತ್ತು ತುಳಸೀಮಣಿ ಎರಡರಲ್ಲಿಯೂ ಭಗವಂತ ಇದ್ದಾನೆ. ಆದರೆ ತುಳಸೀಮಣಿಯನ್ನು ಕೊರಳಿಗೆ ಧರಿಸುತ್ತೇವೆ, ಪಾದರಕ್ಷೆಯನ್ನು ಕಾಲಿಗೆ ಧರಿಸುತ್ತೇವೆ. 
  
  ಹಾಗೆ, ಗೋವಿಂದ ವಿಷ್ಣು ಮುಂತಾದವು ದೇವರನ್ನೇ ತಿಳಿಸುವ ಶಬ್ದಗಳು. ಬೈಗುಳದ ಶಬ್ದಗಳೂ ದೇವರ ಹೆಸರೇ. ಆದರೆ ರೂಢಿಯಲ್ಲಿ ಅವನ್ನು ತುಚ್ಛವಾದ ಕಾರ್ಯಕ್ಕಾಗಿ ಬಳಸುತ್ತೇವೆ. ಆದ್ದರಿಂದ ಒಂದೇ ಆಗಲು ಸಾಧ್ಯವಿಲ್ಲ. 
  
  ಹಾಗಾದರೆ ದೇವರ ಹೆಸರು ಎಂದೇಕೆ ಒಪ್ಪಬೇಕು ಎಂಬ ಪ್ರಶ್ನೆ ಮೂಡಬಹುದು. ಉತ್ತರ — ಅನುಸಂಧಾನಕ್ಕಾಗಿ, ನಮ್ಮ ಉದ್ಧೃತಿಗಾಗಿ. 
  
  ದಿವಸಕ್ಕೆ ಐದು ಬಾರಿ ಕಿವಿಗಡಚಿಕ್ಕುವಂತೆ ಕೆಲವರು ನಮಾಜನ್ನು ಹಾಕುತ್ತಾರೆ. ಅದನ್ನು ಕೇಳುವಾಗ ಪ್ರತೀ ಶಬ್ದವೂ ಶ್ರೀಹರಿಯ ನಾಮವೇ ಎಂಬ ಅನುಸಂಧಾನವಿರಬೇಕು. ಆದರೆ, ಅದು ದೇವರ ಹೆಸರು ಎಂದು ಅದನ್ನು ಕಲಿತು ಪಠಿಸಬಾರದು. 
  
  ಹರಟೆಯನ್ನು ಕೇಳುವಾಗ ಈ ರೀತಿ ಅನುಸಂಧಾನ ಮಾಡುವದರಿಂದ ಅದನ್ನು ಕೇಳಿದ್ದರಿಂದ ಉಂಟಾದ ಪಾಪ ಪರಿಹಾರವಾಗುತ್ತದೆ. 
 • Meerajayasimha,Bengaluru

  7:18 PM , 19/10/2018

  Gurugalige anantha pranaamagalu.aneka dinagalaadamele aalisida Bhaagavatha pravachana manassige athiyaada thrupthi santhosha thandide.
 • Krishnaa,Bangalore

  4:23 PM , 19/10/2018

  Shri gurubhyo namah.
  Each one a gem, these last nine upanyasas acharyare, they touch one like nothing else does. Thank you so much for resuming Shrimad Bhagavatam.
  Namaskaragalu.
 • Niranjan Kamath,Koteshwar

  4:15 PM , 19/10/2018

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣಗಳಿಗೆ ನಮೋ ನಮಃ. ಶ್ರೀಮನ್ ನಾರಾಯಣನ ಮಹತ್ವ ಹಾಗೂ ಮೂಲ ವಿಚಾರ ಬಹಳ ಆಳವಾದ ವಿಚಾರ. ಧನ್ಯೋಸ್ಮಿ.
 • Shantha raghothamachar,Bengaluru

  11:34 AM, 19/10/2018

  ನಮಸ್ಕಾರಗಳು. ಪ್ರವಚನ ಕೇಳಿದ ದಿನವೇ ಶುಭದಿನವು.
 • Narayanaswamy,chamarajanagara

  10:08 AM, 19/10/2018

  ಪೂಜ್ಯಗುರುಗಳಿಗೆ ಪ್ರಣಾಮಗಳು ಮತ್ತೆ ತಮ್ಮ ಮಧುರ ಧ್ವನಿಯಲ್ಲಿ ಭಾಗವತ ಕೇಳಿ ಪರಮಾನಂದವಾಯಿತು
 • ಸುದರ್ಶನ ಶ್ರೀ. ಲ.,ಬೆಂಗಳೂರು

  9:56 AM , 19/10/2018

  ಪರಮಾದ್ಭುತ ಪರಮಾನಂದ
 • S.MADHUSUDAN,BENGALURU

  9:03 AM , 19/10/2018

  Sri Acharyaji thank you for Srimad Bhagavatam S.Madhusudan KSRTC LAYOUT
 • Anand Rayabhagi,Chennai

  8:01 AM , 19/10/2018

  Kindly post this pravachanalu in telugu lipi if possible