20/10/2018
ವೈರಾಗ್ಯದ ಉತ್ತುಂಗಾವಸ್ಥೆ ಎಂದರೆ ಅವಧೂತಚರ್ಯೆ. ಅಂತಹ ಅವಧೂತಶಿರೋಮಣಿಗಳು ಯಾವ ರೀತಿ ದೇಹದ ಮೇಲೆ ಸಕಲಾಭಿಮಾನವನ್ನೂ ತೊರೆದು ಬದುಕುತ್ತಾರೆ ಎನ್ನುವದರ ಚಿತ್ರಣ ಇಲ್ಲಿದೆ. ಅವಧೂತಚರ್ಯೆ ಎನ್ನುವದು ಸಂನ್ಯಾಸಿಗಳಿಗೆ ಮಾತ್ರ, ಗೃಹಸ್ಥರಿಗಲ್ಲ, ಸ್ತ್ರೀಯರಿಗಂತೂ ಸರ್ವಥಾ ಅಲ್ಲ ಎಂಬಿತ್ಯಾದಿ ಅಂಶಗಳ ವಿವರಣೆಯೂ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — ಸತ್ಯಾಂ ಕ್ಷಿತೌ ಕಿಂ ಕಶಿಪೋಃ ಪ್ರಯಾಸೈರ್ಬಾಹೌ ಸ್ವಸಿದ್ಧೇ ಹ್ಯುಪಬರ್ಹಣೈಃ ಕಿಮ್ । ಸತ್ಯಂಜಲೌ ಕಿಂ ಪುರುಪರ್ಣಪಾತ್ರೈಃ ದಿಗ್ಗ್ವಸ್ತ್ರಲಾಭೇ ಸತಿ ಕಿಂ ದುಕೂಲೈಃ ।। ೪ ।। ಚೀರಾಣಿ ಕಿಂ ಪಥಿ ನ ಸನ್ತಿ ದಿಶಂತಿ ಭಿಕ್ಷಾಂ ನೋ ವಾsಂಘ್ರಿಪಾಃ ಪರಭೃತಃ ಸರಿತೋಽಪ್ಯಶುಷ್ಯನ್ । ರುದ್ಧಾ ಗುಹಾಃ ಕಿಮವಧೂತಸುಹೃನ್ನ ಕೃಷ್ಣಃ ಕಸ್ಮಾದ್ ಭಜಂತಿ ಕವಯೋ ಧನದುರ್ಮದಾಂಧಾನ್ ।। ೫ ।।
Play Time: 45:24
Size: 5.97 MB