Upanyasa - VNU703

ಶ್ರೀಮದ್ ಭಾಗವತಮ್ — 153 — ಆನಂದನಿಧಿ

ಧ್ಯಾನವನ್ನು ಮಾಡುವ ಮುನ್ನ ನಮಗಿರಬೇಕಾದ ಎಚ್ಚರಗಳು ಮತ್ತು ಮಾಡಬೇಕಾದರೆ ಇರಲೇಬೇಕಾದ ಅನುಸಂಧಾನಗಳನ್ನು, ಹಾಗೂ ಅವಶ್ಯವಾಗಿ ಉಪಾಸನೆ ಮಾಡಬೇಕಾದ ಗುಣಗಳನ್ನು ಈ ಭಾಗದಲ್ಲಿ ತಿಳಿಯುತ್ತೇವೆ. 

ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರ ಅದ್ಭುತ ವ್ಯಾಖ್ಯಾನ ಕೌಶಲವನ್ನು ಮನಗಾಣಿಸುವಂತಹ ಅನೇಕ ಅಂಶಗಳನ್ನು ಇಲ್ಲಿ ಕೇಳುತ್ತೇವೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ಸ ಸರ್ವವಿದ್ ಹೃದ್ಯನುಭೂಶ್ಚ ಸರ್ವ ಆತ್ಮಾ ಯಥಾ ಸುಪ್ತಜನೇಕ್ಷಿತೈಕಃ ।
ತಂ ಸತ್ಯಮಾನಂದನಿಧಿಂ ಭಜೇತ ಸರ್ವಾತ್ಮನಾsತೋsನ್ಯತ ಆತ್ಮಘಾತಃ		 ।। ೭ ।।

ಭಾಗವತತಾತ್ಪರ್ಯಮ್ ।
“ಯಥೈಕಸ್ತು ಬಹೂನ್ ಸುಪ್ತಾನಸುಪ್ತಃ ಪಶ್ಯತಿ ಪ್ರಭುಃ । 
ಏವಮೀಶೇ ಬಹೂನ್ ಜೀಜೀವಾನಜ್ಞಾನ್ ಪಶ್ಯತಿ ನಿತ್ಯದೃಕ್” ಇತಿ ವ್ಯೋಮಸಂಹಿತಾಯಾಮ್ ।

“ಸ್ವಪ್ನೇನ ಶಾರೀರಮಭಿಪ್ರಹತ್ಯಾಸುಪ್ತಃ ಸುಪ್ತಾನಭಿಚಾಕಶೀತಿ” ಇತಿ ಚ ।

“ಯಥೇಷ್ಟಭವನಾದ್ ವಿಷ್ಣುರನುಭೂಃ ಪರಿಕೀರ್ತಿತಃ । 
ಉದಧಿಃ ಕರ್ಮಣಾಮೀಶಃ ಸರ್ವಃ ಪೂರ್ಣಗುಣೋ ಯತಃ ।
ಸತ್ಯಃ ಕೇವಲಸಾರತ್ವಾನ್ನಿಯಮೋ ನಿಯತೇರಜಃ” ಇತಿ ಬೃಹತ್ಸಂಹಿತಾಯಾಮ್ ।


Play Time: 44:00

Size: 5.97 MB


Download Upanyasa Share to facebook View Comments
6356 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  3:47 PM , 19/04/2020

  "ಭಗವಂತನಿಗೆ ನಮ್ಮ ಸಕಲ ಮನೋವೃತ್ತಿಗಳೂ ತಿಳಿದಿದೆ..."
  ಅನ್ನುವದು ಮನಸ್ಸನ್ನು ಆವರಿಸಿ ಬಿಟ್ಟಿತು ....
  
  "ಸವೋ೯ತ್ತಮನಾದ ಭಗವಂತನನ್ನು ನಾನು ಧ್ಯಾನ ಮಾಡುತಿದ್ದೇನೆ"
  ಅಂತಯಾ೯ಮಿ ರೂಪ ನಮ್ಮನ್ನು ಬಿಟ್ಟು ಹೋಗುವದಿಲ್ಲ...ಒಂದು ರೂಪದಿಂದ ನಮ್ಮ ಅಂತಯಾ೯ಮಿ ...ಇನ್ನೊಂದು ರೂಪದಲ್ಲಿ ನಾರಾಯಣನಾಗಿ ನಮ್ಮನ್ನು ತನ್ನುದರಲ್ಲಿಟ್ಟು ಕೊಂಡಿದ್ದಾನೆ....
  ಅನ್ನುವ ಚಿಂತನೆಯು ತುಂಬಾ ಮನಸ್ಸಿಗೆ ಹಿಡಿಸಿತು...
  ಆನಂದ ನಿಧಿ...
  ಶಬ್ದದಲ್ಲಿರುವ ರಸವನ್ನು ಪಾನ ಮಾಡಿಸಿದ ರೀತಿ ಪರಮಾದ್ಭುತ...
  
  ಮುಖ್ಯಪ್ರಾಣದೇವರು ಅನಂತಾನಂತ ಜನ್ಮಗಳಲ್ಲಿಯೂ ನಮ್ಮಲ್ಲಿ ನಿಂತು ಮಾಡಿಸಿದ "ಸಕಲ ಕಮ೯ಗಳನ್ನೂ" (ಆನಂದ ಅನ್ನುವ ಅಥ೯ ನೀಡುತ್ತದೆ ...ಭಗವಂತ ಪ್ರೀತನಾಗಲಿ ಅಂತ ಇರುವೆಗೆ ಒಂದು ಸಣ್ಣ ಸಕ್ಕರೆ ಕಾಳನ್ನು ಹಾಕಿದ್ದು ಸಹಿತ !!!!!) ಭಗವಂತ ಲೆಕ್ಕ ಇಟ್ಟುಕೊಂಡು ಬಂದಿದ್ದಾನೆ ನಮಗೆ ಮೋಕ್ಷ ಸಿಗುವವರೆಗೆ!!!!!
  ಇದು ಜೀವನಿಗೆ "ಆನಂದ ಕೊಡುವ ನಿಧಿ"
   *ಆನಂದ ನಿಧಿ*
  ಅದಕ್ಕಾಗಿ ಭಗವಂತ *ಆನಂದ ನಿಧಿ*......🙏🙏
  ಕಿವಿಯಲ್ಲಿ ಮತ್ತೆ ಮತ್ತೆ ಮಾಧ೯ನಿಸುತ್ತಿದೆ....
  
  ತನ್ನಿಷ್ಟದಂತೆ ಭಕ್ತಿರಿಗಾಗಿ ಅವತಾರಗಳನ್ನು ಸ್ವೀಕರಿಸುವ ಭಗವಂತ "ಇಷ್ಟಾತ್ಮಮೂತಿ೯"
  
  ಆದರೆ ನಾವು ನಮ್ಮ ಕಮ೯ದಿಂದಾಗಿ ವಿವಿಧಜನ್ಮಗಳಲ್ಲಿ ಬೇರೆ ರೂಪಗಳನ್ನು ಭಗವಂತ ನೀಡುತ್ತಾನೆ ....
  
  ಒಂದೊಂದು ಗುಣಗಳೂ ನಮ್ಮ ಮನಸ್ಸಿನಲ್ಲಿ ನಿಲ್ಲುವಂತೆ ವಿವರಿಸಿದ್ದೀರಿ...
  ಅದಕ್ಕೇ....ಶ್ರೀಮದ್ಭಾಗವತವನ್ನು ಎಷ್ಟು ಬಾರಿ ಕೇಳಿದರೂ ಮುಗಿಯಿತಾನೇ ಇಲ್ಲ ಗುರುಗಳೆ 🙏🙏
  ಅಂತಯಾ೯ಮಿಯ ಆರಾಧನೆಯನ್ನು ಭಕ್ತಿಯಿಂದ ಸುಲಭವಾದ ರೀತಿಯಲ್ಲಿ ಮಾಡಿಸುತ್ತಿರುವ ಗುರುಗಳಿಗೆ ವಿನಯಪೂವ೯ಕವಾದ ನಮನಗಳು ..
 • Ananthapadmanabhan,Kokar

  7:18 AM , 27/10/2018

  (REF 31 minutes about Mohini Avathara)  please l excuse us for asking you for INNOBARA pravachana.  Sri.Bannanje Aachaar said in Brahmanda Purana (ref serial no.74/130)thar Sri Lalitha Devi is DEVURA Mohini Avathara. 
  We request your clarification in this regard .

  Vishnudasa Nagendracharya

  Lalitha is Parvathi. Not Mohini.
 • Ananthapadmanabhan,Kokar

  7:05 AM , 27/10/2018

  Sir Namaskaragalu  (REF @31 min