23/10/2018
ಪುಷ್ಕರನಿಂದ ಆರಂಭಿಸಿ ಮುಖ್ಯಪ್ರಾಣದೇವರವರೆಗೆ ಸಕಲ ಕಲಾಭಿಮಾನಿ-ತತ್ವಾಭಿಮಾನಿ ದೇವತೆಗಳನ್ನು ಯಾವ ರೀತಿ ಚಿಂತನೆ ಮಾಡಬೇಕು, ಶ್ರೀಹರಿಯ ರೂಪಗಳನ್ನು ಯಾವ ರೀತಿ ಚಿಂತನೆ ಮಾಡಬೇಕು ಎಂಬ ವಿವರ ಇಲ್ಲಿದೆ, ಶ್ರೀ ವಿಜಯಧ್ವಜತೀರ್ಥಗುರುಸಾರ್ವಭೌಮರು ತಿಳಿಸಿರುವ ದಿವ್ಯವಾದ ಅರ್ಥವಿಶೇಷಗಳೊಂದಿಗೆ. ಉತ್ತರಾಯಣಲ್ಲಿ, ಹಗಲಿನಲ್ಲಿ ಮರಣವಾದರೆ ಮಾತ್ರ ದೇವರು ದೊರೆಯುತ್ತಾನೆ, ದಕ್ಷಿಣಾಯನದಲ್ಲಿ, ರಾತ್ರಿಯಲ್ಲಿ ಮರಣವಾದರೆ ದೊರೆಯುವದಿಲ್ಲ ಎಂಬ ಮಾತಿಗೆ ಬ್ರಹ್ಮಸೂತ್ರಗಳು ನೀಡಿರುವ ಉತ್ತರದ ಚಿಂತನೆ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಸ್ಥಿರಂ ಸುಖಂ ಚಾಽಸನಮಾಸ್ಥಿತೋ ಯತಿರ್ಯದಾ ಜಿಹಾಸುರಿಮಮಂಗ ಲೋಕಮ್ । ಕಾಲೇ ಚ ದೇಶೇ ಚ ಮನೋ ನ ಸಜ್ಜೇತ್ ಪ್ರಾಣಾನ್ನಿಯಚ್ಛೇನ್ಮನಸಾ ಜಿತಾಸುಃ ।। ೧೬ ।। ಭಾಗವತತಾತ್ಪರ್ಯಮ್ — “ಭಕ್ತ್ಯಾ ಪ್ರಾಣಂ ವಶಂ ನೀತ್ವಾ ಜಿತಪ್ರಾಣೋ ಭವತ್ಯುತ” ಇತಿ ಷಾಡ್ಗುಣ್ಯೇ । ಮನಃ ಸ್ವಬುದ್ಧ್ಯಾಽಮಲಯಾ ನಿಯಮ್ಯ ಕ್ಷೇತ್ರಜ್ಞ ಏತಾಂ ನಿನಯೇತ್ ತಮಾತ್ಮನಿ । ಆತ್ಮಾನಮಾತ್ಮನ್ಯವರುಧ್ಯ ಧೀರೋ ಲಬ್ಧೋಪಶಾಂತಿರ್ವಿರಮೇತ ಕೃತ್ಯಾತ್ ।। ೧೭ ।। ಭಾಗವತತಾತ್ಪರ್ಯಮ್ । “ಜೀವಸ್ಥೋ ಭಗವಾನ್ ವಿಷ್ಣುಃ ಕ್ಷೇತ್ರಜ್ಞ ಇತಿ ಗೀಯತೇ । ದೇಹಸ್ಥೋಪಿ ಸ ಏವಾತ್ಮಾ ವ್ಯಾಪ್ತೋಪ್ಯಾತ್ಮೇತಿ ಭಣ್ಯತೇ” ಇತಿ ತತ್ತ್ವನಿರ್ಣಯೇ । “ಹರೌ ಹರೇರ್ಭವೇನ್ನೀತಿಸ್ತದೇಕತ್ವಸ್ಯ ಚಿಂತನಮ್ । ಅನ್ಯತ್ರ ತನ್ನಿಯಮ್ಯಾದಿಚಿಂತನಂ ನೀತಿರುಚ್ಯತೇ” ಇತಿ ಪ್ರಕಾಶಸಂಹಿತಾಯಾಮ್ । ನ ಯತ್ರ ಕಾಲೋಽನಿಮಿಷಪ್ರಭುಃ ಪ್ರಭುಃ ಕುತೋ ನು ದೇವಾ ಜಗತಾಂ ಯ ಈಶಿರೇ । ನ ಯತ್ರ ಸತ್ತ್ವಂ ನ ರಜಸ್ತಮಶ್ಚ ನವೈ ವಿಕಾರೋ ನ ಮಹಾನ್ ಪ್ರಧಾನಮ್ ।। ೧೮ ।। ಭಾಗವತತಾತ್ಪರ್ಯಮ್ — ಕಾಲೋ ವಾಯುಃ । “ಹರಿಶ್ಚ ಪ್ರಕೃತಿಶ್ಚೈವ ಬ್ರಹ್ಮವಾಯೂ ತಥೈವ ಚ । ಸುಪರ್ಣಶೇಷರುದ್ರಾಶ್ಚ ಶಕ್ರಃ ಸೂರ್ಯಯಮಾವಪಿ ।। ಅಗ್ನಿರ್ಯಮಾನುಜಶ್ಚೈವ ಕಾಲಶಬ್ದೇರಿತಾಃ ಕ್ರಮಾತ್ । ಪೂರ್ವೋಕ್ತಾಸ್ತ್ವಪರೋಕ್ತಾನಾಂ ಪ್ರಭವಃ ಸರ್ವಶೋ ಮತಾಃ” ಇತ್ಯುದ್ದಾಮಸಂಹಿತಾಯಾಮ್ ।
Play Time: 53:48
Size: 5.97 MB