23/10/2018
ಜೀವರು ಉತ್ಕ್ಕಾಂತರಾದ ಬಳಿಕ ಯಾವ ಲೋಕಗಳಿಗೆ ತೆರಳುತ್ತಾರೆ, ಯಾವ ರೀತಿ ಇರುತ್ತಾರೆ, ಯಾವಯಾವ ಲೋಕಗಳಿಗೆ ಹೋಗಲು ಯಾವರೀತಿಯ ಅರ್ಹತೆ ಈ ಜ್ಞಾನಿಗಳಿಗೆ ಇರಬೇಕು? ಆ ಲೋಕಗಳಲ್ಲಿ ಯಾವ ರೀತಿಯಾದ ಶರೀರವಿರುತ್ತದೆ? ಎನ್ನುವ ಪ್ರಶ್ನೆಗಳಿಗೆ ಅಪೂರ್ವ ವಿಷಯಗಳನ್ನೊಳಗೊಂಡ ಉತ್ತರಗಳನ್ನು ಇಲ್ಲಿ ತಿಳಿಯುತ್ತೇವೆ. ಮಹಾಜ್ಞಾನ, ಜ್ಞಾನ, ತಪಸ್, ಯೋಗ, ಪಾದಯೋಗ ಎಂಬ ಅಪರೋಕ್ಷಜ್ಞಾನದಲ್ಲಿನ ನಾಲ್ಕು ವೈವಿಧ್ಯಗಳ ವಿವರಣೆ ಇಲ್ಲಿದೆ. ಶ್ರೀ ಅನಂತತೀರ್ಥಶ್ರೀಪಾದಂಗಳವರು, ಶ್ರೀ ಯಾದವೇಂದ್ರತೀರ್ಥಶ್ರೀಪಾದಂಗಳವರು, ಶ್ರೀ ಯಾದವಾರ್ಯರಲ್ಲಿನ ವ್ಯಾಖ್ಯಾನಗಳಲ್ಲಿನ ವಿಶೇಷ ಅಂಶಗಳೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಯದಿ ಪ್ರಯಾಸ್ಯತ್ಯಥ ಪಾರಮೇಷ್ಠ್ಯಂ ವೈಹಾಯಸಾನಾಮುತ ಯದ್ ವಿಹಾರಮ್ । ಅಷ್ಟಾಧಿಪತ್ಯಂ ಗುಣಸನ್ನಿವಾಯೇ ಸಹೈವ ಗಚ್ಛೇನ್ಮನಸೇಂದ್ರಿಯೈಶ್ಚ ।। ೨೩ ।। ಭಾಗವತತಾತ್ಪರ್ಯಮ್ — “ಚಿನ್ಮಾತ್ರಾಣೀಂದ್ರಿಯಾಣಾಣ್ಯಾಹುರ್ಮುಕ್ತಾನಾಮನ್ಯದೈವ ತು । ತಾನ್ಯೇವ ಜಡಯುಕ್ತಾನಿ ವಿಭಿನ್ನಾನಿ ಸ್ವರೂಪತಃ” ಇತಿ ಬ್ರಾಹ್ಮೇ । ಯೋಗೇಶ್ವರಾಣಾಂ ಗತಿಮಾಮನಂತಿ ಬಹಿಸ್ತ್ರಿಲೋಕ್ಯಾಃ ಪವನಾಂತರಾತ್ಮಾ । ನ ಕರ್ಮಭಿಸ್ತಾಂ ಗತಿಮಾಪ್ನುವಂತಿ ವಿದ್ಯಾತಪೋಯೋಗಸಮಾಧಿಭಾಜಾಮ್ ।। ೨೪ ।। ಭಾಗವತತಾತ್ಪರ್ಯಮ್ । ಪವನಸ್ಯಾಪ್ಯಂರಾತ್ಮಾ ಯಃ ತಮ್ । ಪವನಶ್ಚಾಸಾವಂರಾತ್ಮಾ ಚೇತಿ ವಾ । “ಈಯುಸ್ತ್ರೀನ್ ಕರ್ಮಣಾ ಲೋಕಾನ್ ಜ್ಞಾನೇನೈವ ತದುತ್ತರಾನ್ । ತತ್ರ ಮುಖ್ಯಾ ಹರಿಂ ಯಾಂತಿ ತದನ್ಯೇ ವಾಯುಮೇವ ತು। ಅಪಕ್ವಾ ಯೇ ನ ತೇ ಯಾಂತಿ ವಾಯುಂ ವಾ ಹರಿಮೇವ ವಾ । ಸ್ಥಾನಮಾತ್ರಾಶ್ರಿತಾಸ್ತೇ ತು ಪುನರ್ಜನಿವಿವರ್ಜಿತಾಃ” ಇತಿ ಬ್ರಹ್ಮತರ್ಕೇ ।
Play Time: 49:11
Size: 5.97 MB