Upanyasa - VNU709

ಶ್ರೀಮದ್ ಭಾಗವತಮ್ — 159 — ಮಹರಾದಿ ಲೋಕಗಳ ಮಾಹಾತ್ಮ್ಯ

ಶಾಸ್ತ್ರಗಳು ಶೇಷದೇವರನ್ನು, ಕೂರ್ಮನನ್ನೂ ಜಗದಾಧಾರ ಎನ್ನುತ್ತವೆ, ಶಿಂಶುಮಾರನನ್ನೂ ಜಗದಾಧಾರ ಎನ್ನುತ್ತವೆ. ಈ ವಿರೋಧವನ್ನು ಪರಿಹಾರ ಮಾಡಿಕೊಳ್ಳುವ ಬಗೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕಗಳ ಮಾಹಾತ್ಮ್ಯವನ್ನು ಕೇಳುತ್ತೇವೆ. 

ಮಹರ್ಲೋಕದಲ್ಲಿ ಮೂರು ತರಹದ ಆಯುಷ್ಯವುಳ್ಳ ಜನರಿರುತ್ತಾರೆ. ಅದರ ವಿವರಣೆಯೊಂದಿಗೆ ಬ್ರಹ್ಮಜ್ಞಾನಿಗಳ ಶರೀರ ಯಾವ ರೀತಿ ಇರುತ್ತದೆ ಎನ್ನುವದರ ನಿರೂಪಣೆಯೂ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — 

ತದ್ ವಿಶ್ವನಾಭಿಂ ತ್ವಭಿಪದ್ಯ ವಿಷ್ಣೋರಣೀಯಸಾ ವಿರಜೇನಾಽತ್ಮನೈಕಮ್ ।
ನಮಸ್ಕೃತಂ ಬ್ರಹ್ಮವಿದಾಮುಪೈತಿ ಕಲ್ಪಾಯುಷೋ ಯದ್ ವಿಬುಧಾ ರಮಂತೇ ।। ೨೮ ।।

“ಅಶೇಷಜಗದಾಧಾರಃ ಶಿಂಶುಮಾರೋ ಹರಿಃ ಪರಃ । 
ಸರ್ವೇ ಬ್ರಹ್ಮವಿದೋ ನತ್ವಾ ತಂ ಯಾನ್ತಿ ಪರಮಂ ಪದಮ್” ಇತಿ ಬ್ರಹ್ಮಾಂಡೇ ।

ತದ್ ವಿಷ್ಣೋಃ ವಿಶ್ವಾಧಾರಸ್ವರೂಪಂ ಪ್ರತಿಪದ್ಯ ಯತ್ರ ಕಲ್ಪಾಯುಷಸ್ತಂ ಮಹರ್ಲೋಕಮುಪೈತಿ। 
“ಮನ್ವಂತರಾಯುಷಃ ಸ್ವರ್ಗ್ಯಾಃ ಮಹರ್ಲೋಕೇ ತು ಕಾಲ್ಪಿಕಾಃ। 
ಆ ಬ್ರಹ್ಮಣೋ ಜನಾದ್ಯಾಸ್ತು ಮಹರ್ಲೋಕೇಽಪಿ ಯೇ ವರಾಃ” ಇತಿ ಬ್ರಾಹ್ಮೇ। 

(Explanation of the 29th shloka will be available in the coming Upanyasa)

ನ ಯತ್ರ ಶೋಕೋ ನ ಜರಾ ನ ಮೃತ್ಯುರ್ನಾಽಧಿರ್ನಚೋದ್ವೇಗ ಋತೇ ಕುತಶ್ಚಿತ್ ।
ಯಶ್ಚಿತ್ತತೋದಃ ಕ್ರಿಯಯಾಽನಿದಂವಿದಾಂ ದುರಂತದುಃಖಪ್ರಭವಾನುದರ್ಶನಾತ್ ।। ೩೦ ।।

ಋತೇ ಸತ್ಯಲೋಕೇ । ಅನಿದಂವಿದಾಂ ಅಬ್ರಹ್ಮವಿದಾಮ್ । ದುರಂತದುಃಖಂ ಚ ಪ್ರಭವಶ್ಚ ।

“ಸರ್ವದುಃಖವಿಹೀನಾ ಯೇ ಮುಕ್ತಾಃ ಪ್ರಾಯಸ್ತು ತಾದೃಶಾಃ । 
ಅಮುಕ್ತಾಸ್ತೇ ಜನಾದ್ಯೇಷು ವಿಶೇಷೇಣ ತು ಸತ್ಯಗಾಃ” ಇತಿ ವಾರಾಹೇ ।

“ವಿಷ್ಣೋರ್ಲೋಕಂ ತದೈವೇಕೇ ಯಾಂತಿ ಕಾಲಾಂತರೇ ಪರೇ ।
ಆಜ್ಞಯೈವ ಹರೇಃ ಕೇಚಿದಪೂರ್ತೇಃ ಕೇಚಿದಂಜಸಾ । 
ವಿಹೃತ್ಯೈವಾನ್ಯಲೋಕೇಷು ಮುಚ್ಯಂತೇ ಬ್ರಹ್ಮಣಾ ಸಹ” ಇತಿ ವಾಮನೇ ।


Play Time: 52:35

Size: 5.97 MB


Download Upanyasa Share to facebook View Comments
7163 Views

Comments

(You can only view comments here. If you want to write a comment please download the app.)
 • Indirabai,Hyderabad

  8:18 PM , 07/04/2022

  Hg d
 • Jyothi Gayathri,Harihar

  12:48 PM, 16/08/2021

  🙏🙏🙏🙏🙏
 • kowsthub Srihari,Bangalore

  12:04 AM, 06/04/2020

  ಆಚಾರ್ಯರಿಗೆ ನಮಸ್ಕಾರಗಳು
  ಇಡ ಹಾಗೂ ಪಿಂಗಲ ನಾಡಿಗಳಲ್ಲಿ ಮರಣ ಹೊಂದಿದ ಜೀವ ಇನ್ನೂ ಅಪರೋಕ್ಷ ಜ್ಞಾನ ಆಗಿಲ್ಲ ಅಂತಹ ಜೀವ ಭಗವದ್ ಪ್ರಸಾದದಿಂದ ಮಹರಾದಿ ಲೋಕಗಳಿಗೆ ಹೋಗುವ ಮಾರ್ಗದಲ್ಲಿ ಶಿಂಶುಮಾರನ ಲೋಕದಲ್ಲಿ ಶಿಂಶುಮಾರ ರೂಪದ ಭಗವಂತನ ದರ್ಶನ ದೊರೆಯುತ್ತದೆಯೇ? ದಯವಿಟ್ಟು ತಿಳಿಸಿ

  Vishnudasa Nagendracharya

  ಇಲ್ಲ
 • H.Suvarna kulkarni,Bangalore

  8:56 PM , 10/05/2019

  ಗುರುಗಳಿಗೆ ಭಕ್ತಿಯ ನಮನಗಳು