Upanyasa - VNU712

ಶ್ರೀಮದ್ ಭಾಗವತಮ್ — 162 — ಬೇಡಿದರೆ ಎನ್ನೊಡೆಯನ ಬೇಡುವೆ

ಯಾವಯಾವ ದೇವತೆಯನ್ನು ಉಪಾಸನೆ ಮಾಡುವದರಿಂದ ಯಾವಯಾವ ಫಲಗಳುಂಟಾಗುತ್ತವೆ ಎನ್ನುವದನ್ನು ವಿಸ್ತಾರವಾಗಿ ತಿಳಿಸುವ ಶುಕಾಚಾರ್ಯರು ಪರಮಾತ್ಮನಲ್ಲಿ ಮಾಡುವ ಭಕ್ತಿಯಿಂದ ಸಕಲ ಐಹಿಕ ಫಲಗಳನ್ನೂ ಪಡೆಯಬಹುದು ಎನ್ನುವದನ್ನು ನಿರೂಪಿಸಿ ಶ್ರೀಮನ್ ನಾರಾಯಣನೇ ಸರ್ವಾರ್ಥಪ್ರದ, ಏನನ್ನು ಬೇಡಿದರೂ ಅವನಲ್ಲಿಯೇ ಬೇಡುವದೇ ಸರ್ವಶ್ರೇಷ್ಠ ಎನ್ನುವದನ್ನು ಮನೋಜ್ಞವಾಗಿ ನಿರೂಪಿಸುತ್ತಾರೆ. 

ಭಾಗವತ ನಿರೂಪಿಸಲು ಹೊರಟಿದ್ದು “ಪ್ರೋಜ್ಝಿತಕೈತವ”ವಾದ ಅಂದರೆ ನಿಷ್ಕಾಮವಾದ ಕರ್ಮಗಳನ್ನು ನಿರೂಪಿಸಲು. ಅಂದಮೇಲೆ ಇಲ್ಲೇಕೆ ಸಕಾಮ ಕರ್ಮವನ್ನು ನಿರೂಪಿಸುತ್ತಿದೆ ಎಂಬ ಪ್ರಶ್ನೆಗೆ ಶ್ರೀ ವಿಜಯಧ್ವಜತೀರ್ಥಗುರುಸಾರ್ವಭೌಮರು ನೀಡಿರುವ ಪರಮಾದ್ಭುತ ಉತ್ತರದ ವಿವರಣೆಯೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ದೇವತೆಗಳನ್ನು ಆರಾಧಿಸಬೇಕಾದರೆ ಇರಬೇಕಾದ ಎಚ್ಚರ, ಮಾಡಬೇಕಾದ ಅನುಸಂಧಾನಗಳನ್ನು ತಿಳಿಸಲಾಗಿದೆ. 

Play Time: 52:29

Size: 5.97 MB


Download Upanyasa Share to facebook View Comments
9538 Views

Comments

(You can only view comments here. If you want to write a comment please download the app.)
 • Sowmya,Bangalore

  2:25 PM , 15/07/2022

  🙏🙏🙏Adbutavagide 🙏🙏🙏
 • Savitha,Chamarajanagar

  10:23 AM, 17/07/2021

  🙏🙏🙏
 • Vijaya bharathi k b,Bangalore

  11:22 AM, 19/09/2019

  🙏🙏
 • Madhusudan Gururajarao Chandragutti,Belagavi

  7:41 AM , 08/06/2019

  ಪೂಜ್ಯ ಆಚಾರ್ಯರಿಗೆ ಧನ್ಯವಾದಗಳು.
 • Madhusudan Gururajarao Chandragutti,Belagavi

  7:41 AM , 08/06/2019

  ಪೂಜ್ಯ ಆಚಾರ್ಯರಿಗೆ ಧನ್ಯವಾದಗಳು.
 • Madhusudan Gururajarao Chandragutti,Belagavi

  6:20 PM , 05/06/2019

  ಪೂಜ್ಯ ಆಚಾರ್ಯರಿಗೆ ಹೃತ್ಪೂರ್ವಕ ಪ್ರಣಾಮಗಳು. ಅಶಾಸ್ತ್ರೀಯ ಕರ್ಮದ ಫಲಗಳನ್ನು ಅದೇ ದೇವತೆಗಳ ಹೆಸರಿನ ದೈತ್ಯರು ಕೊಂಡೊಯ್ಯುತ್ತಾರೆಂದು ಅದರಿಂದ ದುಷ್ಟ ಫಲಗಳು ದೊರೆಯುತ್ತವೆಂದು ಈ ಉಪನ್ಯಾಸದಲ್ಲಿ ಕೇಳಿದೆ. ಪ್ರಶ್ನೆ :ಈ ದುಷ್ಟ ಫಲಗಳನ್ನು ಕೊಡುವವರು ದೇವತೆಗಳೇ ಅಥವಾ ಫಲವನ್ನು ಒಯ್ದ ದೈತ್ಯರಿಗೇ ಆ ಸಾಮರ್ಥ್ಯ ಇರುತ್ತದೆಯೇ?

  Vishnudasa Nagendracharya

  ಸ್ವಯಂ ಭಗವಂತನೇ ಭಗವದ್ಗೀತೆಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾನೆ. “ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್” ಎಂದು. 
  
  ದೇವರಿಲ್ಲದೇ ಕರ್ಮಕ್ಕೆ ಫಲ ನೀಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ವಾಯುದೇವರಿಗೂ ಇಲ್ಲ. 
  
  ನಾವು ಶಾಸ್ತ್ರೀಯವಾದ ಆಚರಣೆ ಮಾಡಿದಾಗ ದೇವತೆಗಳ ಅಂತರ್ಯಾಮಿಯಾಗಿ ಫಲ ನೀಡುವವನೂ ಸ್ವಾಮಿಯೇ. 
  
  ಅಶಾಸ್ತ್ರೀಯವಾಗಿ ಆಚರಣೆ ಮಾಡಿದಾಗ, ಅದು ದೈತ್ಯರನ್ನು ಸೇರಿದಾಗ, ಅವರೊಳಗೆ ನಿಂತು ಫಲ ನೀಡುವವನೂ ದೇವರೇ. 
  
  ದೇವಾರಾಧನೆಯಾದಾಗ ಪಡೆಯುವ ಫಲ ಅನಂತ. 
  
  ದೈತ್ಯಾರಾಧನೆಯಾದಾದ ದೊರೆಯುವ ಫಲ, ಕಡೆಯಲ್ಲಿ ಅನರ್ಥವನ್ನೇ ಉಂಟು ಮಾಡುತ್ತದೆ. 
 • Roopa,Bangalore

  12:41 PM, 03/11/2018

  Tumba chenagide danyosmi gurugale