15/11/2018
ನಾವು ಹೇಗೆ ಬಂಧನಕ್ಕೊಳಗಾಗಿದ್ದೇವೆ ಎಂದು ಗೊತ್ತಾದರೆ ಬಂಧನದಿಂದ ಬಿಡಿಸಿಕೊಳ್ಳಲು ಸಾಧ್ಯ. ದೇವರು ಮೂರುಗುಣಗಳಿಂದ ನಮ್ಮನ್ನು ಕಟ್ಟಿಹಾಕಿರುವದರ ವಿವರಣೆ ಇಂದಿನ ಭಾಗವತದ ವಿಷಯ. ಇಂದು “ಬಂಧಕೋ ಭವಪಾಶೇನ” ಮುಂದಿನ ಉಪನ್ಯಾಸದಲ್ಲಿ “ಭವಪಾಶಾಚ್ಚ ಮೋಚಕಃ” ತಪ್ಪದೇ ಕೇಳಿ. ಇಂದ್ರಿಯಗಳ ಮುಖಾಂತರ ಜ್ಞಾನವನ್ನು ನೀಡುವದರ ಮುಖಾಂತರ ಸತ್ವಗುಣ, ಕರ್ಮೇಂದ್ರಿಯಗಳ ಮುಖಾಂತರ ಕಾರ್ಯವನ್ನು ಮಾಡಿಸುವದರ ಮುಖಾಂತರ ರಜೋಗುಣ, ತಪ್ಪು ತಿಳುವಳಿಕೆ, ತಪ್ಪು ಕಾರ್ಯಗಳನ್ನು ಮಾಡಿಸುವದರ ಮುಖಾಂತರ, ಆಲಸ್ಯ ನಿದ್ರಾ, ನೋವುಗಳ ಮುಖಾಂತರ ತಮೋಗುಣ ನಮ್ಮನ್ನು ಬಂಧಿಸುತ್ತದೆ ಎಂಬ ವಿಷಯವನ್ನು ನಾವಿಲ್ಲಿ ಕೇಳುತ್ತೇವೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — सत्वं रजस्तम इति निर्गुणस्य गुणास्त्रयः । स्थितिसर्गनिरोधेषु गृहीता मायया विभोः ।। १७ ।। भागवततात्पर्यम् — “युगपत् क्रमशोऽपि वा” इत्यस्य परिहारः— सत्वं रजस्तम इति ।। “नित्यं गृहीताः सत्वाद्याः स्थित्यादिषु विशेषतः । युगपत् क्रमशश्चैव गृह्णाति भगवान् स्वयम्” इति ब्रह्मवैवर्ते । कार्यकारणकर्तृत्वे द्रव्यज्ञानक्रियाश्रयाः । बध्नन्ति नित्यदा मुक्तं मायिनं पुरुषं गुणाः ।। १८ ।। भागवततात्पर्यम् । “ज्ञानेन्द्रियैश्च मनसा सत्वं बध्नाति पूरुषम् । रजः कर्मेन्द्रियैर्नित्यं शरीरेण तमस्तथा ।। आन्तरं यत्तु कर्तृत्वं तत् सत्वेनाभिमन्यते । रजसा त्वभिमन्येत करणैः कर्मकारणैः । शारीरं वेदनाद्यं तु तमसा ह्यभिमन्यते ।। अकर्ता करणैर्हीनः शरीरेण विवर्जितः । नित्यज्ञानस्वरूपोऽसौ गुणैरेवाभिमन्यते ।। एवं जीवः परेणैव प्रेरितः संसृतिं व्रजेत् । न परः संसृतिं क्वापि स्वातन्त्र्यादधिकत्वतः । एवं जीवपरौ भिन्नौ किमन्यच्छ्रोतुमिच्छसि” इति पाद्मे । मायिनं ज्ञानिनं स्वतः ।
Play Time: 38:58
Size: 5.97 MB