09/12/2018
ಇಸ್ಲಾಮ್ ಮತ್ತು ಕ್ರಿಶ್ಚಿಯಾನಿಟಿ ಮುಂತಾದ ಮತಗಳು ಹೇಳುವಂತೆ ದೇವರು ನಿರಾಕರನೋ, ಅಥವಾ ಸಾಕಾರನೋ ಎಂಬ ಪ್ರಶ್ನೆಗೆ ಪುರುಷ ಸೂಕ್ತ ನೀಡುವ ಉತ್ತರ ಇಲ್ಲಿದೆ. ಮಾಯಾವಾದ ಹೇಳುವಂತೇ ಜೀವಾತ್ಮನೇ ಪರಮಾತ್ಮನೋ ಅಥವಾ ತತ್ವವಾದ ಹೇಳುವಂತೆ ಪರಮಾತ್ಮ ಬೇರೆ ಜೀವಾತ್ಮ ಬೇರೆಯೋ ಎಂಬ ಪ್ರಶ್ನೆಗೆ ಪುರುಷಸೂಕ್ತ ನೀಡುವ ಉತ್ತರದ ವಿವರಣೆ ಇಲ್ಲಿದೆ. ಸಕಲ ಸುಖ ದುಃಖಗಳನ್ನೂ ಸಮವಾಗಿ ಕಾಣಬೇಕು ಎಂಬ ಗೀತೆಯ ಸಿದ್ಧಾಂತ ಅನುಷ್ಠಾನಕ್ಕೆ ಬರಬೇಕಾದರೆ ನಾವು ಮಾಡಬೇಕಾದ ಅನುಸಂಧಾನದ ವಿವರಣೆ ಇಲ್ಲಿದೆ. ವೇದ-ವೇದಾಂತಗಳನ್ನೂ ನಾವೂ ಓದುತ್ತೇವೆ, ತಪ್ಪೇನು ಎಂಬ ಆಧುನಿಕ ಸ್ತ್ರೀ ಶೂದ್ರರಿಗೊಂದು ಕಿವಿಮಾತು ಇಲ್ಲಿದೆ. ತಪ್ಪದೇ ಕೇಳಿ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — ಎರಡನೆಯ ಸ್ಕಂಧ, ಆರನೆಯ ಅಧ್ಯಾಯ अहं भवान् भवश्चैव य इमे मुनयोऽग्रजाः । सुरासुरनरा नागा गावो मृगसरीसृपाः ।। १२ ।। गन्धर्वाप्सरसो यक्षा रक्षोभूतगणोरगाः । पशवः पितरः सिद्धा विद्याध्राश्चारणा द्रुमाः ।। १३ ।। अन्ये च विविधा जीवा जलस्थलनभौकसः । ग्रहर्क्षकेतवस्तारास्तडितः स्तनयित्नवः ।। १४ ।। सर्वं पुरुष एवेदं भूतं भव्यं भवच्च यत् । तेनेदमावृतं विश्वं वितस्तिमधितिष्ठता ।। १५ ।। भागवततात्पर्यम् । “सर्वं पुरुष एवेति भण्यते भेदवज्जगत् । तदधीनं तु सत्तादि यतो ह्यस्य सदा भवेत्” इति ब्रह्मतर्के । “वितस्तिमात्रं हृदयमास्थाय व्याप्नुते जगत्” इति गारुडे । स्वधिष्ण्यं प्रतपन् प्राणो बहिश्च प्रतपत्यसौ । एवं विराजं प्रतपंस्तपत्यन्तर्बहिः पुमान् ।। १६ ।। भागवततात्पर्यम् । “पश्यन् स्वधिष्ण्यं देहं स बहिष्ठान् विषयानपि । एवमण्डान्तरं पश्यन् बहिः सर्वं च पश्यति” इति वामने ।
Play Time: 45:02
Size: 5.54 MB