Upanyasa - VNU736

ಐದು ತಿಂಗಳ ಸಮಯ ಬೇಕಾಗಿದೆ

ಆತ್ಮೀಯ ವಿಶ್ವನಂದಿನಿ ಬಾಂಧವರ ಗಮನಕ್ಕೆ, 

ವಿಶ್ವನಂದಿನಿಯಲ್ಲಿ ಸಂಸ್ಕೃತ ಸುರಭಿ ಆರಂಭವಾಗಿದೆ ಮತ್ತು ಭಾಗವತದ ಪ್ರವಚನಗಳು ನಡೆಯುತ್ತಿವೆ. 

ಇಷ್ಟು ದಿವಸಗಳ ಕಾಲ ಸಂಸ್ಕೃತ ಸುರಭಿಯ ನಿರ್ಮಾಣದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದ ಕಾರಣಕ್ಕೆ ಹೆಚ್ಚಿನ ಪ್ರವಚನಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. 

ಸಂಸ್ಕೃತ ಸುರಭಿಯ ಒಂದು ಸಮಗ್ರ ಪಾಠವನ್ನು (ವಿಡಿಯೋ, ಅಭ್ಯಾಸ ಮತ್ತು ಪರೀಕ್ಷೆಗಳನ್ನು) ತಯಾರು ಮಾಡಿ Upload ಮಾಡಲು ನಾಲ್ಕು ದಿವಸಗಳ ಪೂರ್ಣ ಸಮಯ ಬೇಕು. 

ಒಂದು ಗಂಟೆಯ ಪ್ರವಚನ ಮಾಡಿ ಅದನ್ನು Upload ಮಾಡಲು ಇಬ್ಬರಿಗೆ ಪೂರ್ಣವಾಗಿ ಹನ್ನೆರಡು ಗಂಟೆಗಳ ಸಮಯ ಬೇಕು. 

ಇಷ್ಟರ ಮಧ್ಯದಲ್ಲಿ ಆ ವಿಷಯದ ಕುರಿತ ಸಂಶೋಧನೆ, ನಿರ್ಣಯಗಳಾಗಬೇಕು. 

ಆದ್ದರಿಂದ ಪ್ರವಚನ ಮತ್ತು ವಿಡಿಯೋಗಳನ್ನು Upload ಮಾಡಲು ವಿಲಂಬವಾಗುತ್ತಿದೆ. 

ಇದರ ಜೊತೆಯಲ್ಲಿ ಸರಿಯಾದ ಸಮಯಕ್ಕೆ ಹಾಕಲಾರದ್ದಕ್ಕೆ ಮನಸ್ಸಿಗೆ ತುಂಬ ಬೇಸರವಾಗುತ್ತಿದೆ. ಸಾವಿರಾರು ಸಜ್ಜನರು ಪ್ರತೀಕ್ಷೆ ಮಾಡುತ್ತಿರುತ್ತಾರೆ. ಆದರೆ ಆ ಸಮಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. 

ಇದು ಹೀಗೇ ಮುಂದುವರೆಯಬಾರದು, ಮತ್ತು ಪಾಠ-ಪ್ರವಚನಗಳು ನಿಮಗೆ ನಿರಂತರವಾಗಿ ದೊರೆಯುತ್ತಿರಬೇಕು. 

ಅದಕ್ಕಾಗಿ ಸಾಕಷ್ಟು ಪಾಠಗಳನ್ನು ಮತ್ತು ಪ್ರವಚನಗಳನ್ನು ಮೊದಲೇ ಮಾಡಿಟ್ಟುಬಿಡುವ ನಿರ್ಧಾರ ಕೈಗೊಂಡಿದ್ದೇನೆ. 

ಅದಕ್ಕಾಗಿ ಸುಮಾರು ನಾಲ್ಕೈದು ತಿಂಗಳುಗಳ ಕಾಲಾವಕಾಶದ ಆವಶ್ಯಕತೆಯಿದೆ. ಈ ಸಮಯದಲ್ಲಿ ಸಾಕಷ್ಟು ಆಡಿಯೋ ವಿಡಿಯೋಗಳನ್ನು ತಯಾರು ಮಾಡಿಕೊಂಡು ಬಿಡುತ್ತೇನೆ. ಕನಿಷ್ಠ ಆರು ತಿಂಗಳಿಗಾಗುವಷ್ಟು Content ಮಾಡಿಟ್ಟುಕೊಂಡರೆ ನಿಮಗೆ ನಿರಂತರವಾಗಿ ನೀಡಬಹುದು. ನಾನು ಸಾಕಷ್ಟು ಕಾರ್ಯಗಳನ್ನು ಮಾಡಬಹುದು. 

ಸಂಸ್ಕೃತಸುರಭಿಯಲ್ಲಿ ನೂರು ಪಾಠಗಳು, ವಿಶ್ವನಂದಿನಿಗಾಗಿ 200 ಪ್ರವಚನಗಳನ್ನು ಸಿದ್ಧ ಮಾಡಿಕೊಂಡು ಪ್ರಕಟ ಮಾಡಲು ಆರಂಭಿಸುತ್ತೇನೆ. ನೀವು ಅಷ್ಟು ಪ್ರವಚನಗಳನ್ನು ಕೇಳಿ, ಪಾಠಗಳನ್ನು ಕಲಿಯುವಷ್ಟರಲ್ಲಿ ಮುಂದಿನದನ್ನು ಸಿದ್ಧ ಪಡಿಸುತ್ತೇನೆ. 

ಇಷ್ಟರ ಮಧ್ಯದಲ್ಲಿ ದ್ವಿತೀಯಸ್ಕಂಧದ ಪ್ರವಚನಗಳನ್ನು ಮುಗಿಸಿಕೊಡುತ್ತೇನೆ. ಸಂಸ್ಕೃತಸುರಭಿಯಲ್ಲಿ ಎರಡು ನಮೂರು ವಾರಕ್ಕೆ ಒಂದಾದರೂ ಪಾಠವನ್ನು ಹಾಕುತ್ತೇನೆ. 

ಆಸಕ್ತ ಜಿಜ್ಞಾಸುಗಳು ಬೇಸರಿಸಬಾರದು, ಸಹಕರಿಸಬೇಕು ಎಂದು ಅಪೇಕ್ಷಿಸುತ್ತೇನೆ. 

ಅಭಿಮಾನವಿರಲಿ

— ವಿಷ್ಣುದಾಸ ನಾಗೇಂದ್ರಾಚಾರ್ಯ

Play Time: 05:51

Size: 5.51 MB


Download Upanyasa Share to facebook View Comments
3983 Views

Comments

(You can only view comments here. If you want to write a comment please download the app.)
 • Ranganatha D S,Bangalore

  4:27 PM , 13/07/2020

  ಆಚಾರ್ಯರೇ, ಸಂಸ್ಕೃತ ಸುರಭಿಯಲ್ಲಿ ಸಂಸ್ಕೃತ ಜ್ಞಾನ ವಿಲ್ಲದವರು ಕಲಿಯಬಹದೇ, ಕಲಿಯಬಹುದಾದರೆ ತಾವು ನಮಗೆ ಮಾರ್ಗದರ್ಶನ ನೀಡಬೇಕೆಂದು ವಿನಂತಿ. ನಾವು 67 ಸಂವತ್ಸರ ಮುಗಿದಿರುವುದರಿಂದ ಈ ವಯಸ್ಸಿನಲ್ಲಿ ಇದು ಸಾಧ್ಯವೇ? ದಯವಿಟ್ಟು ತಿಳಿಸಿರಿ. 🙏
 • Jasyashree Karunakar,Bangalore

  4:37 PM , 22/04/2019

  ಗುರುಗಳೆ ಮುಂದಿನ "ಸುರಭಿಯ" ಪಾಠ ಯಾವಾಗ ? ಅಂತ ಕೇಳಬೇಕೆಂದುಕೊಂಡೆ.....
  ಮಾತೇಹೊರಡಲಿಲ್ಲ.....
  ಕಾರಣ....
  ಯಾಕಿಷ್ಟು ವಿಳಂಬವಾಗುತ್ತಿದೆ ಅಂತ ಅಥ೯ವಾದದ್ದು, ಈಗಾಗಲೇ ಅಭ್ಯಾಸಮಾಡಿದ ಪ್ರಾರಂಭಿಕಹಂತದ ಪಾಠಗಳನ್ನು ಮತ್ತೊಮ್ಮೆ ಅಭ್ಯಾಸಮಾಡಿದಾಗಲೆ...
  ವಿಶಿಷ್ಟವಾದ ರೀತಿಯಲ್ಲಿ ಗುರುವಂದನ ಮಾಡಿಸುತ್ತಾ ಆರಂಭವಾಗುವ ಸುರಭಿ, ಕೀಬೋಡ್೯ನ್ನು ಉಪಯೋಗಿಸುವ ಕ್ರಮದಿಂದಾರಂಭಿಸಿ, ಎಲ್ಲವನ್ನೂ ಕ್ರಮಬದ್ಧವಾದ ರೀತಿಯಲ್ಲಿ , ವಿಶ್ವನಂದಿನಿಯ ಮೂಲಕ, ಯಾವುದೇ ಶುಲ್ಕದ ಹೊರೆಯಿಲ್ಲದೇ, ಪ್ರಶ್ನೆ ಕೇಳಲು ಅವಕಾಶವಿದ್ದರೂ , ಕೇಳುವ ಅವಕಶ್ಯಕತೆ ಬೀಳದಂತೆ, ನಾವು ಎಲ್ಲಿಗೆ ನಿಲ್ಲಿಸಿದ್ದೇವೊ ಅಲ್ಲಿಂದಲೇ ತೆರೆದುಕೊಳ್ಳುವ ಪುಟಗಳು, ವಿಷಯಗಳನ್ನು ಅಥ೯ಮಾಡಿಸುವ ರೀತಿ.....ಅಬ್ಬಾ...
   ನೀವು ನೀಡುತ್ತಿರುವ ಪಾಠದ ವೖಭವವನ್ನು ಪದಗಳಿಂದ ಹೇಳಲು ಸಾಧ್ಯವಿಲ್ಲ.....ಇಷ್ಟೆಲ್ಲಾ features ಇರುವ ಆಪ್ ನ ನಿಮಾ೯ಣ ಅಷ್ಟು ಸುಲಭವಾಗಿರಲು ಸಾಧ್ಯವೇ ಇಲ್ಲ.... 
  ಅಂತಯಾ೯ಮಿಯನ್ನು ಸಾಕ್ಷಾತ್ಕಾರ ಮಾಡಿಸುವ, ಶಾಸ್ತ್ರಾಧ್ಯಯನವನ್ನು ನಮ್ಮಿಂದ ಮಾಡಿಸುವ ಸಲುವಾಗಿ ನಿಮ್ಮ ಶ್ರಮವನ್ನೂ, ಸಮಯವನ್ನೂ ಲೆಕ್ಕಿಸದೆ ಸಂಸ್ಕೃತವನ್ನು ಕಲಿಸಲು ಮುಂದಾಗಿರುವ ಗುರುಗಳಿಗೆ ಭಕ್ತಿಯ ಪ್ರಣಾಮ...🙏
 • Raghu Nandan,Shiralakoppa

  12:15 PM, 11/02/2019

  ಆಚಾರ್ಯ ರೇ ನೀವು ಮಾಡುವ ಕೆಲಸ ಒಳ್ಳೆಯ ದೇ ಭಗವಂತ ನಿಮಗೆ ಆಯುಷ್ ಮತ್ತು ಸಾಮರ್ಥ್ಯ ಹೆಚ್ಚಿಸಲಿ
 • Raghunath,Bengaluru

  4:43 PM , 09/01/2019

  Thanks acharyare we will wait
 • Shreedhar S Bhat,Sagar

  10:50 PM, 29/12/2018

  ನಮಸ್ಕಾರ 
  ನಿಮ್ಮ ನಿರ್ಧಾರ ಸರಿಯಾಗಿದೆ
 • Vishwanandini User,Sagar

  10:38 PM, 28/12/2018

  ನಮಸ್ಕಾರ, ನಿಮ್ಮ ಜ್ಞಾನ ದಾಸೋಹ ಅನ್ನ ದಾಸೋಹಕ್ಕಿಂತ ಹೆಚ್ಚಿನದಾದದ್ದು ನೀವು ತೆಗೆದು ಕೊಂಡ ನಿರ್ಧಾರ ಸರಿಯಾಗಿದೆ. ನಿಮ್ಮ ಸಂದೇಶಕ್ಕಾಗಿ ನಿಮ್ಮ ಉತ್ತರಕ್ಕಾಗಿ ಕಾಯುತ್ತೇನೆ.
  
   - ಶ್ರೀಧರ ಎಸ್ ಭಟ್ ಹೊರಬೈಲು
 • Mudigal sreenath,Bengulutu

  8:17 PM , 27/12/2018

  Acharyarige namanagalu.ella Hari vayu gurugala anugraha.nimma abhipraya sariyagide.
 • Giridhar Rao,Bangalore

  11:34 AM, 26/12/2018

  Acharyarige shastanga pranamagalu. Nimage 5 tingalu matra valla 15 tingalu bekadaru naavu kayalu sidda! Thammantha gurugalu sikkidhu namma aho baghya mattu hari, vayu, guru parampara maditha parama anugraha karunya. 🙏🙏🙏🙏🙏
 • Raghavendra A V,Bangalore

  7:04 AM , 26/12/2018

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ನಿಮ್ಮ ನಿರ್ಧಾರ ಸರಿಯಾಗಿಯೇ ಇದೆ. ಪಾಠ, ಪ್ರವಚನಗಳನ್ನು ಓದಿ, ಕೇಳಿ ಅಭ್ಯಾಸ ಮಾಡಲು ಮಂದಮತಿಗಳಾದ ನಮಗೂ ಕಾಲಾವಕಾಶ ಬೇಕಿದೆ. ದೇವರು ನಿಮ್ಮ ಜ್ಞಾನ ಕಾರ್ಯದಲ್ಲಿ ಯಶಸ್ಸು ಕೊಡಲಿ ಎಂದು ಪ್ರಾರ್ತಿಸುವುದಷ್ಟೇ ನಾವು ಮಾಡಬಹುದಾದ ಕಿಂಚಿತ್ ಸೇವೆ.
 • MURALIDHARA BHIMARAO KULKRNI,BANGALORE

  6:54 AM , 26/12/2018

  ಖಂಡಿತವಾಗಿಯೂ ಆಚಾರ್ಯರೆ ನಾವು ಈ ಸಲಹೆಯ ಪರವಾಗಿದ್ದೇವೆ. ತಾವು ನಿಮಗೋಸ್ಕರ ಈಪರಿಯ ಶ್ರಮವಹಿಸಿ ಬೇರೆಲ್ಲಾ ಕಾರ್ಯಗಳನ್ನು ಬದಿಗಿಟ್ಟು ಈ ಕಾರ್ಯದಲ್ಲಿ ತೊಡಗಿಸಿಕೊಂಡು ನಿಮಗೋಸ್ಕರ ಶ್ರಮವಹಿಸಿ ಪೂರೈಸಿ ಕೊಡುತ್ತಿರುವಾಗ ನಿಮ್ಮ ಸಹಕಾರ ಮತ್ತೂ ಈ ಕಾರ್ಯದಲ್ಲಿ ನಾವುಗಳು ಏನೂ ಮಾಡಲು ಆಗುತ್ತಿಲ್ಲವಲ್ಲಾಎಂಬ ಸಂಕೋಚ ಬಹಳ ಕಾಡುತ್ತದೆ. ತಾವು ಖಂಡಿತವಾಗಿಯೂ ಮುಂದುವರೆಯಿರಿ ಆಚಾರ್ಯರೆ ನಾವು ಕಾಯುತ್ತೇವೆ. ಪ್ರವಚನಗಳು ಬರುತ್ತಿದ್ದಾರೆ ಸಾಕು. ನಂತರದ ದಿನಗಳಲ್ಲಿ ಹೇಗೂ ಸಂಸ್ಕೃತ ಸುರಭಿಯ ನಿರಂತರ ಕಲಿಕೆಗೆ ಸಹಾಯವೂ ಆಗುತ್ತದೆ. ಅಲ್ಲಿಯವರೆಗೆ ಈಗಿನ ಪಾಠಗಳನ್ನೇ ಅಭ್ಯಾಸಮಾಡುತ್ತಿರುತ್ತೇವೆ. ಪಾಠಗಳನ್ನು ಕಂಪ್ಯೂಟರಿಕರಿಸುವ ಶ್ರಮ ನಮ್ಮಲ್ಲಿ ಅನೇಕರಿಗೆ ತಿಳಿದ ವಿಷಯವಾದ್ಧರಿಂದ ನಾವು ಸರ್ವಥಾ ಅನ್ಯ ಭಾವಿಸುವುದಿಲ್ಲ.
 • Subramanya N,Bangalore

  12:26 PM, 25/12/2018

  ಇದೂ ಸಹ ರಾಯರ ಪರಮಾನುಗ್ರಹ ಅಂತಾನೇ ಅನಿಸತ್ತೆ , ಈಗಿರುವ ಆರೂ ಪಾಠಗಳೂ ಸಹ foundation ,.ಬೇಸಿಕ್ ಚೆನ್ನಾಗಿ ಧೃಢವಾಗಿ ನಿಧಾನವಾಗಿ ಆದರೂ ಕಲಿಯಲೀ ಅಂತ ಅವರ ಆದೇಶ ಇರಬಹುದು , 
  
  ಹಾಗೆಯೇ ಸಮಯ ಸಿಕ್ಕಾಗ ವಾಯುಸ್ತುತಿಯದೂ ಆದರೆ ಖುಷಿ, ಕಳೆದ ವರ್ಷದ ಫೆಬ್ರವರಿಯಲ್ಲಿ ಮಾಡ್ತೀರೀ ಅಂತ ಅಂದಿದ್ದಿರಿ , 
  ಈಗಲಾದರೂ ಸಮಯ ಮಾಡಿಕೊಂಡು ಅದನ್ನ ಮಾಡಿ ಅಂತ ಗೌರವಪೂರ್ವಕವಾಗೀ ಪ್ರೀತಿಯಿಂದ ಒತ್ತಾಯ
 • T venkatesh,Hyderabad

  10:58 AM, 25/12/2018

  Respected friends,
  Till such time the bank is ready with its deposits and we can withdraw, we can listen or relisten entire madhwavijaya pravachana.
 • Snehalatha,Singapore

  10:45 AM, 25/12/2018

  Namaskara Acharyare, 
  
  Highly appreciate your sincere dedication and commitment to this gyanasatra.
  
  Pl accept our humble pranamas🙏🙏
 • Aprameya,Bangalore

  1:57 AM , 25/12/2018

  🙏🙏🙏
 • Aprameya,Bangalore

  1:57 AM , 25/12/2018

  🙏🙏🙏
 • Vishwanandini User,Dharawad

  11:41 PM, 24/12/2018

  🙏ಹರೇ ಶ್ರೀನಿವಾಸ 🙏
  ಧನ್ಯವಾದಗಳು ಗುರುಗಳೇ ನಿಮ್ಮ ಬಗ್ಗೆ ನಮಗೆ ಖಂಡಿತ ಬೇಸರವಿಲ್ಲ ಯಾಕೆಂದರೆ ಹಿಂದಿನ ಪಾಠಗಳನ್ನು 
  ತಿಳಿದುಕೊಂಡು ಮುಂದಿನ ಪಾಠಕ್ಕೆ ನಮಗೂ ಸಮಯ ಬೇಕು ಇನ್ನು ಹೆಚ್ಚು ಅಭ್ಯಾಸ ಮಾಡುತ್ತೇವೆ ಗುರುಗಳೇ 🙏🙏
  ಇನ್ನು ಭಾಗವತ ಉಪನ್ಯಾಸಗಳು ನಾವು ಒಂದು ಉಪನ್ಯಾಸವನ್ನು ತುಂಬಾ ಸಲ ಕೇಳಿ ಶ್ರವಣ ಮನನ ಅನುಸಂಧಾನ ಇವೆಲ್ಲ ಆಗಬೇಕು ಅಂದರೆ ಎಲ್ಲವನ್ನು ಸರಿಯಾಗಿ ತಿಳಿದುಕೋಳ್ಳಬೇಕು ಗುರುಗಳೇ ನೀವು ಕಳಿಸಿದ್ದು ಮತ್ತು ಕಲಿಸಿದ್ದು ಸಾಕಷ್ಟು ಇದೆ ಗುರುಗಳೇ ನಾವು ಅದನ್ನೇಲ್ಲ ಮೊದಲು ಅರ್ಥ ಮಾಡಿಕೊಂಡರೆ ಕೇಳಿದ್ದಕ್ಕು ಸಾರ್ಥಕ ಹೇಳಿದ್ದಕ್ಕೂ ಸಾರ್ಥಕ ಅದಕ್ಕೆ ಗುರುಗಳೇ ನೀವು ಬೇಸರ ಮಾಡಿಕೊಳ್ಳುವ ಅವಶ್ಯಕತೆನೆ ಇಲ್ಲ ಗುರುಗಳೇ 
  ನಿಮ್ಮ ಈ ಪರಿಶ್ರಮ ಸಾಧನೆ ದೊಡ್ಡದು ಹರಿ ವಾಯು ಗುರುಗಳು ನಿಮಗೆ ಸದಾ ನಿಮ್ಮ ಹಿಂದೆ ಮುಂದೆ ಇದ್ದು ಯಾವುದೇ ಅಡೆ ತಡೆ ಬರದೆ ಇರುವ ಹಾಗೆ ಕಾಪಾಡಲಿ ನಿಮಗೆ ಅನಂತಾನಂತ ಧನ್ಯವಾದಗಳು ಗುರುಗಳೇ 
  🙏🙏🙏🙏🙏
 • Shreesha Vitthala,Bangalore

  8:23 PM , 24/12/2018

  ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏
  ನನ್ನಂತೆ ತಡವಾಗಿ ವಿಶ್ವನಂದಿನಿಯನ್ನು ಅನುಸರಿಸಲು ಶುರು ಮಾಡಿದವರಿಗೆ ನೀವು ಕೊಡುತ್ತಿರುವ ಸಮಯಾವಕಾಶ ಇದು. ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು!
 • Nikhil Dattatraya Dravid,Nipani

  12:19 PM, 24/12/2018

  ನಮಸ್ಕಾರ ಆಚರ್ಯರೆ. ನೀವು ಮಾಡುತ್ತಿದ್ದು ಅತಿ ದೊಡ್ಡದಾದ ಕಾರ್ಯ. ಅದನ್ನು ಮಾಡಲು ಸಮಯ ಬೇಕೇ ಬೇಕು. ಅಷ್ಟರಲ್ಲಿ ನಮಗೂ ಮೊದಲು ಕೇಳಿದ ಪಾಠ ಪ್ರವಚನಗಳನ್ನು ಮತ್ತೆ ಕೇಳಿ ಅದರ ಮನನ, ಚಿಂತನೆ ಮಾಡಿ ತತ್ತ್ವವನ್ನು ಸರಿಯಾಗಿ ದೃಢ ಮಾಡಿಕೊಳ್ಳಲು ಸಮಯ ಸಿಗುತ್ತದೆ. ಧನ್ಯವಾದಗಳು.

  Vishnudasa Nagendracharya

  ಖಂಡಿತ. ಶ್ರೀಮದ್ ಭಾಗವತದ ಪ್ರವಚನಗಳನ್ನು ಅನೇಕ ಬಾರಿ ಕೇಳಿದಾಗ ಮಾತ್ರ ಅವು ಮನಸ್ಸಿನಲ್ಲಿ ನಾಟಿ ಉಳಿಯುತ್ತವೆ. 
 • Y V GOPALA KRISHNA,Mysore

  12:43 PM, 24/12/2018

  Pujya Gurugalege,
  
  Sastanga Namaskaragalu,
  The marvelous task of sharing thatva jnana in a most and best methodical way definitely requires huge and sufficient time which any one can easily understand. Therefore, we all with YOU and your team to accomplish d task with d grace of Sri Hari Vayu Gurugalu.
  
  Warm Regards,
  Gopalakrishna Y V

  Vishnudasa Nagendracharya

  Thank you very much. 
 • Jasyashree Karunakar,Bangalore

  4:57 PM , 24/12/2018

  ಗುರುಗಳೆ
  
  ಆಥಿ೯ಕ ಮೂಲ ಇದ್ದವರೂ ಸಹ ಆತ್ಮವಿಶ್ವಾಸ ಮೂಡಲು ಸಂಭಾವನೆ ಒಂದು ಹಂತದವರೆಗೆ ಅನಿವಾಯ೯ ಅಂತ ಭಾವಿಸಿ, ವಿದ್ಯಾಥಿ೯ಗಳಿಂದ ಹಣ ಪಡೆದು ಪಾಠ ಹೇಳುವ ಲೌಖಿಕ ರೀತಿಯನ್ನು ಅನುಸರಿಸುವವರು ತುಂಬಾ....
  
  ಆದರೆ ತಾವು ವಿದ್ಯೆ ಹೇಳಿ ಸಾಂಕೇತಿಕವಾದ( ಶಾಸ್ತ್ರಹೇಳುವ) ಗುರುದಕ್ಷಿಣೆಯನ್ನೂ ಅಪೇಕ್ಷಿಸದೆ ಪಾಠಹೇಳುವ ತಮ್ಮದೇ ಆದ ವಿನೂತನ ರೀತಿಯನ್ನು ಅನುಸರಿಸುತ್ತಿರುವದು ತುಂಬಾ ಶ್ಲಾಘನೀಯ... 
  
  ಅಧ್ಯಾತ್ಮ ಪ್ರಪಂಚದಲ್ಲಿ ಪಾಠ, ಪ್ರವಚನ, ಸಂಶೋಧನೆಯಂತಹ ಬಹುಮುಖವಾದ ಜ್ಞಾನಕಾಯ೯ದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು, ನಮ್ಮನ್ನೂ ಉದ್ಧಾರದ ಹಾದಿಯಲ್ಲಿ ಮುನ್ನಡೆಸುತ್ತಿರುವ ಗುರುಗಳಿಗೆ ಭಕ್ತಿಯ ನಮಸ್ಕಾರಗಳು....
  
  ನಾವು ಕುಳಿತಲ್ಲಿಯೇ ತಮ್ಮ ಜ್ಞಾನ ಸತ್ರದ ಫಲವನ್ನು ಪಡೆಯುತ್ತಿರುವದು ನಮ್ಮ ಸೌಭಾಗ್ಯ...

  Vishnudasa Nagendracharya

  ಅನಂತ ಜನ್ಮಗಳ ಸೌಭಾಗ್ಯದಿಂದ ಶ್ರೀಹರಿ ವಾಯು ದೇವತಾ ಗುರುಗಳು ನೀಡಿರುವ ಎಚ್ಚರವಿದು. 
  
  ಅನನ್ಯಾಶ್ಚಿಂತಯಂತೋ ಮಾಂ 
  ಯೇ ಜನಾಃ ಪರ್ಯುಪಾಸತೇ
  ತೇಷಾಂ ನಿತ್ಯಾಭಿಯುಕ್ತಾನಾಂ
  ಯೋಗಕ್ಷೇಮಂ ವಹಾಮ್ಯಹಮ್ 
  
  ಎಂಬ ಸ್ವಾಮಿಯ ಮಾತು ಅನುಭವಕ್ಕೆ ಬರುತ್ತಿದೆ. 
  
  
 • Venkatesan,Chennai

  4:03 PM , 24/12/2018

  Gurugalige sastanga namaskaragalu. Thavu kottiruva upanyasagalanna matha navu ondu bari keluvadakke namage nalkaidu masagalu bekebeku. Madhva Vijaya ide innu sagasttu articles ide. Enu thonthare illa acaryare.
 • Anirudh.r,Bangalore

  1:50 PM , 24/12/2018

  🙏🙏
 • Anirudh.r,Bangalore

  1:50 PM , 24/12/2018

  🙏🙏