Upanyasa - VNU742

ಲಘುಶಿವಸ್ತುತಿಃ

ಲಘುಶಿವಸ್ತುತಿಃ

ಲಲಿತಚಂದ್ರನಿಭಾನನಸುಸ್ಮಿತಂ ಶಿವಪದಂ ಶಿವದಂ ಸ್ಮರತಾಂ ಶಿವಮ್ |
ವಿಶದಕೋಟಿತಟಿತ್ಪ್ರಭಯಾ ಯುತಂ ಶಿವಜಯಾ ಶಿವಯಾ ಶಿವಯಾ ಯುತಮ್ || ೧ ||

ನಟನನಾಟ್ಯನಟಂ ನಟಗಾಯಕಂ ಜನಮುದಂ ಜಲಜಾಯತಲೋಚನಮ್ |
ಭುಜಗಭೂಷಣಭೂಷಿತವಿಗ್ರಹಂ ಪ್ರಣಮ ಹೇ ಜನತೇ ಜನವಲ್ಲಭಮ್ || ೨ ||

ಶ್ರುತಿಶತಪ್ರಭಯಾ ಪ್ರಭಯಾ ಯುತಂ ಹರಿಪದಾಬ್ಜಭವಾಂ ಶಿರಸಾ ಧೃತಮ್ |
ಶಿವ ಶಿವೇತಿ ಶಿವೇತಿ ಶಿವೇತಿ ವೈ ಭವ ಭವೇತಿ ಭವೇತಿ ಭವೇತಿ ವಾ |
ಮೃಡ ಮೃಡೇತಿ ಮೃಡೇತಿ ಮೃಡೇತಿ ವೈ ಭಜತಿ ಯಃ ಸತತಂ ಪ್ರಣತಾಮಿಯಾತ್ || ೩ ||

|| ಇತಿ ಶ್ರೀವ್ಯಾಸತೀರ್ಥಯತಿಕೃತಾ ಲಘುಶಿವಸ್ತುತಿಃ ||

Play Time: 01:13

Size: 1.78 MB


Download Upanyasa Share to facebook View Comments
4469 Views

Comments

(You can only view comments here. If you want to write a comment please download the app.)
 • Abhi,Banglore

  5:08 PM , 02/06/2020

  1. ಹಾಗಿದ್ದರೆ ಮಾದ್ವರಾದ ನಾವು ... ರುದ್ರ ದೇವರ ನೈವೇದ್ಯ ಸ್ವೀಕರಿಸಬಹುದು ಅಲ್ಲವೆ ಅಚಾರ್ಯರೇ 
  
  2. ಆ ರೀತಿ ರುದ್ರ ದೇವರು ವಾಕ್ಯ ಹೇಳಿದ್ದು ಸತ್ಯವೇ ? ಸತ್ಯವಾದರೆ ಏಕೆ ಹೇಳುದರು . ಸಂಕ್ಷಿಪ್ತ ವಾಗಿ ತಿಳಿಸಿ ಗುರುಗಳೇ

  Vishnudasa Nagendracharya

  ಆ ರೀತಿಯಾದ ವಾಕ್ಯಗಳು ಪಾಶುಪತ ಆಗಮದಲ್ಲಿವೆ. ಪಾಶುಪತ ಆಗಮ ದೇವರ ಆಜ್ಞೆಯಂತೆ ರುದ್ರದೇವರು ದುಷ್ಟರ ಮೋಹಕ್ಕಾಗಿ ರಚಿಸಿರುವಂತಹುದು. 
  
  ಭಗವಂತ, ಲಕ್ಷ್ಮೀದೇವಿಯರು, ಮುಖ್ಯಪ್ರಾಣ, ಭಾರತೀದೇವಿಯರು ಈ ನಾಲ್ಕು ಜನರ ಹೊರತಾಗಿ ಯಾವ ದೇವತೆಗಳ ನೈವೇದ್ಯವನ್ನೂ ಸ್ವೀಕರಿಸಬಾರದು. ಅವರಿಗೆ ಸಮರ್ಪಿತವಾದ ನೈವೇದ್ಯವನ್ನು ಗೋವುಗಳಿಗೆ ನೀಡಿಬಿಡಬೇಕು. 
 • Abhi,Banglore

  11:18 AM, 01/06/2020

  🙏🙏🙏 , 
  ರುದ್ರ ದೇವರ ನೈವೇದ್ಯ ಸ್ವೀಕಾರ ನಿಷಿದ್ಧ ವೇ ಅಚಾರ್ಯರೇ ? ಯಾರು ನನ್ನ ಪ್ರಸಾದವನ್ನು ಅದು ಅನ್ನವಾಗಲಿ , ಪಾಯಸವಾಗಲಿ , ಅದನ್ನು ಸ್ವೀಕರಿಸಿದವನಿಗೆ ಘೋರ ನರಕದಲ್ಲಿ ನರಳಾಟ ನಿಶ್ಚಿತ. ಅವನು ನನಗೆ ಭಕ್ತಿ ಇಂದ ನೀರು , ಹಣ್ಣು , ಪುಷ್ಪ ಏನು ಕೊಟ್ಟರು ಅದನ್ನು ಸ್ವೀಕರಿಸದೆ ನಿಶ್ಚಿಂತೆ ಇಂದ ನೀರಿನಲ್ಲಿ ಬಿಡಿ ಅಥವಾ ತುಳಿಯದ ಭೂಮಿಯಲ್ಲಿ ಇಡೀ , ಹೀಗೆಂದು ಶಿವನೇ ತನ್ನ ತತ್ವದಲ್ಲಿ ತಿಳಿಸಿದ್ದಾರೆ ಅಂತೆ .... ಇದು ಎಷ್ಟು ವಾಸ್ತವ ಅಚಾರ್ಯರೇ ದಯಮಾಡಿ ತಿಳಿಸಿ

  Vishnudasa Nagendracharya

  ಯಾವುದೇ ಒಂದು ಗ್ರಂಥದಲ್ಲಿ ಒಂದು ವಾಕ್ಯವಿದೆ ಎಂದ ಮಾತ್ರಕ್ಕೆ ಅದನ್ನು ಅನುಷ್ಠಾನ ಮಾಡಬಾರದು. 
  
  ಮೊದಲಿಗೆ ಆ ಗ್ರಂಥ ಬ್ರಹ್ಮಸೂತ್ರಗಳ ಸಿದ್ಧಾಂತಕ್ಕೆ, ವೇದಶಾಸ್ತ್ರಕ್ಕೆ ಅನುಕೂಲವಾಗಿದೆಯೇ ವಿರುದ್ಧವಾಗಿದೆಯೇ ಎಂದು ನಿರ್ಣಯಿಸಿಕೊಳ್ಳಬೇಕು. 
  
  ಆ ನಂತರ, ಗ್ರಂಥವನ್ನು ಹಿರಿಯರೇ ರಚಿಸಿದ್ದರೂ, ರಚನೆ ಮಾಡಿರುವದು ಯಾರಿಗಾಗಿ ಎಂದು ನಿರ್ಣಯಿಸಿಕೊಳ್ಳಬೇಕು. ಅಸುರರಿಗಾಗಿ ನಿರ್ಮಿತವಾದ ಶಾಸ್ತ್ರವನ್ನು ಬಿಡಬೇಕು. ಕೈಲಾಸದ ಮಾನಸಸರೋವರದ ಬಳಿಯಲ್ಲಿಯೇ ಇರುವ ರಾಕ್ಷಸಸರೋವರವನ್ನು ಬಿಡುವಂತೆ. 
  
  ಹಾಗೆಯೇ ಪುರಾಣಗಳಲ್ಲಿಯೂ ಅಸುರಮೋಹನಕ್ಕಾಗಿ ರಚಿತವಾದ ಭಾಗಗಳನ್ನು ಬಿಡಬೇಕು. 
  
  ಬ್ರಹ್ಮಸೂತ್ರ-ವೇದ-ಉಪನಿಷತ್ತು-ಭಾರತ-ಭಾಗವತಾದಿ ಗ್ರಂಥಗಳಿಗೆ ಅನುಸಾರಿಯಾದ ತತ್ವವನ್ನು ತಿಳಿದು ಅನುಷ್ಠಾನ ಮಾಡಬೇಕು. 
 • Girish,BELLARY

  4:06 PM , 21/02/2020

  🙏🙏
 • Padma Sirisha,Mysore

  9:18 AM , 07/06/2019

  ಅನಂತಾನಂತ ಧನ್ಯವಾದಗಳು 🙏