06/04/2019
ಶ್ರೀಮದ್ ಭಾಗವತಮ್ — 184 — ಯಜ್ಞಪುರುಷನ ನಾಲ್ಕು ರೂಪಗಳು ಪುರುಷಸೂಕ್ತದ ಐದನೆಯ ಭಾಗ ಪಾದೋಸ್ಯೇಹಾಭವತ್ ಪುನಃ ಎಂಬ ವಾಕ್ಯದ ಅರ್ಥವನ್ನು ತಿಳಿಸುತ್ತ ಭಾಗವತ ಮತ್ತು ಭಾಗವತತಾತ್ಪರ್ಯಗಳು ಯಜ್ಞಪುರುಷನಾಮಕ ಭಗವನಂತ ನಾಲ್ಕು ದಿವ್ಯರೂಪಗಳನ್ನು ತಿಳಿಸುತ್ತವೆ. ನಾಲ್ಕು ಆಶ್ರಮಗಳಲ್ಲಿದ್ದು ಸಾಧನೆ ಮಾಡುವ ಮನುಷ್ಯರ ಮೇಲೆ ಭಗವಂತ ಮಾಡುವ ಅನುಗ್ರಹದ ಚಿಂತನೆಯೊಂದಿಗೆ. ಬ್ರಹ್ಮಚರ್ಯಾಶ್ರಮ, ಗೃಹಸ್ಥಾಶ್ರಮ, ವನಪ್ರಸ್ಥಾಶ್ರಮ, ಸಂನ್ಯಾಸಾಶ್ರಮಗಳಲ್ಲಿ ಸರ್ವಶ್ರೇಷ್ಠವಾದ ಆಶ್ರಮ ಯಾವುದು ಎನ್ನುವದರ ಕುರಿತ ಚರ್ಚೆ ನಿರ್ಣಯಗಳು ಇಲ್ಲಿವೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — पादास्त्रयो बहिस्त्वासन्नप्रजानां य आश्रयाः । अन्तस्त्रिलोक्यास्त्वपरो गृहमेधैर्बृहद् हुतः ।। १९ ।। भागवततात्पर्यम् । “अनन्तासनवैकुण्ठनारायणपुराणि तु । त्रीणि धामानि वै विष्णोस्त्रिलोकाद् बहिरेव हि ।। अदायादास्तु पुत्राणामुद्रिक्तज्ञानचक्षुषः । नारायणपरा देवा एव तान्याप्नुवन्ति च ।। स एवान्यस्वरूपेण शक्रलोकसमीपगः । इज्यो यज्ञपुमान् नाम ज्ञानिनां गृहिणां पदम् ।। यतीनां ध्रुवलोकस्थो वनिनां मेरुमद्ध्यगः । आदित्यमण्डलस्थस्तु ज्ञानिनां ब्रह्मचारिणाम्” इति ब्रह्माण्डे । सृती विचक्रमे विश्वक् साशनानशने उभे । यदविद्या च विद्या च पुरुषस्तूभयाश्रयः ।। २० ।। भागवततात्पर्यम् । “त्रिपात् स एव भगवान् सर्वप्राणिषु संस्थितः । निरन्नेषु च विद्वत्सु त्रिदशेष्वितरेषु च” इत्यध्यात्मे ।
Play Time: 33:39
Size: 5.51 MB