Upanyasa - VNU752

ಭಾಗವತದಲ್ಲಿ ರಾಮಕಥೆ

ಬ್ರಹ್ಮದೇವರು ಹೇಳಿದ ರಾಮದೇವರ ದಿವ್ಯ ಕಥೆ. 
ಬ್ರಹ್ಮದೇವರ ವಚನಗಳಿಗೆ ಭಾವಿಬ್ರಹ್ಮರ ವ್ಯಾಖ್ಯಾನದೊಂದಿಗೆ.. ತಪ್ಪದೇ ಕೇಳಿ. 👆


Play Time: 18:13

Size: 6.39 MB


Download Upanyasa Share to facebook View Comments
8264 Views

Comments

(You can only view comments here. If you want to write a comment please download the app.)
 • Vishwa,Bangalore

  10:36 PM, 02/04/2020

  🙏🙏parusharMadevru 21 bari dusta kshtriyaranna samhara madidru, ravana kaladallu avaru idru, manusya rupadalliye idru, yake avaru ravana samhara madlilla athava yake devateyaru parusharama devaralli prarthissila. 
  
  Becoz avaru avatharisidu, dusta kshtriyaranna samhara madokke

  Vishnudasa Nagendracharya

  ಇದಕ್ಕೆ ಅನೇಕ ಉತ್ತರಗಳಿವೆ. 
  
  1. ಯಾವ ಆವತಾರ ಯಾವ ಕಾರ್ಯಕ್ಕಾಗಿ ಆಗುತ್ತದೆಯೋ ಆ ಕಾರ್ಯವನ್ನು ಮಾತ್ರ ಆ ಅವತಾರದಲ್ಲಿ ದೇವರು ಮಾಡುತ್ತಾನೆ. ಪರಶುರಾಮಾವತಾರವಾದದ್ದು ದುಷ್ಟರಾದ ಕ್ಷತ್ರಿಯರನ್ನು ನಿಗ್ರಹಿಸಲು. ರಾಕ್ಷಸ ನಿಗ್ರಹಕ್ಕಾಗಿ ಅಲ್ಲ. ಒಂದೇ ರೂಪದಿಂದ ಮಾಡುವದಾದರೆ ಅವತಾರವೇ ಬೇಡ ಅಲ್ಲವೇ. ಮತ್ತು ನರಸಿಂಹ, ವಾಮನಾದಿ ರೂಪಗಳೂ ಸಹ ಇದ್ದೇ ಇದ್ದವು. 
  
  2. ರಾವಣನಿಗ್ರಹ ಎಂದರೆ ಕೇವಲ ರಾವಣನ ಸಂಹಾರವಲ್ಲ. ರಾವಣನ ಲಂಕೆಯಲ್ಲಿದ್ದ ಮುನ್ನೂರು ಕೋಟಿ ಅಕ್ಷೋಹಿಣಿ ಸೈನ್ಯವನ್ನೂ ಕೊಲ್ಲಬೇಕಾಗಿತ್ತು. ಹೀಗಾಗಿ ಕೊಲ್ಲಲು ಲಂಕೆಗೇ ಹೋಗುವ ಅನಿವಾರ್ಯತೆಯಿತ್ತು. ಲಂಕೆ ಸಮುದ್ರದ ಆಚೆಯಲ್ಲಿದೆ. ಪರಶುರಾಮದೇವರು ಬ್ರಾಹ್ಮಣಕುಲದಲ್ಲಿ ಅವತಾರ ಮಾಡಿದವರು. ಸಮುದ್ರವನ್ನು ಬ್ರಾಹ್ಮಣರು ದಾಟುವಂತಿಲ್ಲ. ಹೀಗಾಗಿ ಕ್ಷತ್ರಿಯ ಕುಲದಲ್ಲಿ ಅವತರಿಸಿ, ಕಪಿಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ರಾಮದೇವರು ಕೊಂದರು. 
  
  3. ಜಯ-ವಿಜಯರಿಗೆ ದೇವರು ವರ ನೀಡಿದ್ದರು. ನಿಮ್ಮನ್ನು ಕೊಲ್ಲಲು ಪ್ರತ್ಯೇಕ ರೂಪವನ್ನು ಧರಿಸಿ ಬರುತ್ತೇನೆ, ಎಂದು. ಭಗವಂತನ ಇಚ್ಚೆಯನ್ನರಿತಿದ್ದ ದೇವತೆಗಳು, ಪರಶುರಾಮರೂಪವಿದ್ದರೂ, ರಾವಣನ ನಾಶಕ್ಕಾಗಿ ಪ್ರತ್ಯೇಕ ರೂಪಕ್ಕಾಗಿ ಪ್ರಾರ್ಥಿಸಿದ್ದರು. ಸ್ವಾಮಿ ರಾಮನಾಗಿ ಬಂದ. 
  
  4. ಭಗವಂತ ತನ್ನ ಭಕ್ತರಿಗೆ ತನ್ನ ಲೀಲಾವೈಭವವನ್ನು ತೋರಲು ಸರ್ವದಾ ಅಪೇಕ್ಷಿಸುತ್ತಾನೆ. ಅನಂತ ಜೀವರಾಶಿಗಳು ಹಾಡಿ ಹೊಗಳಲಿಕ್ಕಾಗಿ ಲೀಲೆಗಳನ್ನು ತೋರಲು ರಾಮನಾಗಿ ಬಂದ. ರಾಮರೂಪವನ್ನು ಸ್ವೀಕರಿಸದಿದ್ದರೆ, ರಾಮಾಯಣವೂ ಇರುತ್ತಿರಲಿಲ್ಲ. ಆ ಮಹಾವತಾರದ ಚಿಂತನದ ವೈಭವಂದಿಂದ ನಾವೆಲ್ಲ ವಂಚಿತರಾಗುತ್ತಿದ್ದೆವು. 
  
  
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:59 AM, 10/04/2022

  ಜಯ ಜಯ ರಾಮ ಶ್ರೀ ರಾಮ
  🙏🙏🙏
 • Santosh Patil,Gulbarga

  10:08 PM, 28/07/2019

  Thanks gurugale...