14/04/2019
ದೇವರು ಅನಂತ, ಮಹಾಮಹಿಮ, ಬ್ರಹ್ಮಾದಿಗಳಿಗೂ ಪೂರ್ಣವಾಗಿ ತಿಳಿಯಲಿಕ್ಕೂ ಸಾಧ್ಯವಿಲ್ಲದವನು ಎಂದಾದ ಬಳಿಕ ಅತ್ಯಂತ ಕ್ಷುದ್ರರಾದ ಜೀವರು ತಿಳಿಯುವ ಬಗೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ನೀಡಲಿಕ್ಕಾರಂಭಿಸುವ ಬ್ರಹ್ಮದೇವರು, “ಯಾರ ಮೇಲೆ ದೇವರು ದಯೆ ತೋರುತ್ತಾನೆಯೋ ಅವರಿಗೆ ಅವರ ಯೋಗ್ಯತೆಯಂತೆ ದೇವರನ್ನು ತಿಳಿಯಲು ಸಾಧ್ಯವಾಗುತ್ತದೆ” ಎಂಬ ಉತ್ತರವನ್ನು ನೀಡುತ್ತಾರೆ. ದೇವರ ದಯೆಯಾಗಬೇಕಾದರೆ ನಾವು ಸಾಧನೆ ಮಾಡಬೇಕು, ಸಾಧನೆ ಮಾಡಬೇಕೆಂದರೆ ದೇವರು ದಯ ತೋರಬೇಕು. ಅಂದರೆ ದಯೆಯಾಗದೇ ಸಾಧನೆಯಾಗುವಿದಿಲ್ಲ, ಸಾಧನೆಯಾಗದೇ ದಯೆಯಾಗುವದಿಲ್ಲವಲ್ಲ ಎಂಬ ಜ್ವಲಂತ ಪ್ರಶ್ನೆಗೆ ಶ್ರೀಮದ್ ಭಾಗವತ ನೀಡುವ ಅದ್ಭುತ ಉತ್ತರದ ವಿವರಣೆ ಇಲ್ಲಿದೆ. ಈ ಪ್ರಸಂಗದಲ್ಲಿ ಮೂಡಿ ಬರುವ ಪ್ರಶ್ನೆಗಳಿಗೂ ಉತ್ತರ ನೀಡುವದರೊಂದಿಗೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — येषां स एव भगवान् दययेदनन्तः सर्वात्मनाऽऽश्रितपदो यदि निर्व्यलीकम् । ते वै विदन्त्यतितरन्ति च देवमायां नैषां ममाहमिति धीः श्वसृगालभक्ष्ये ।। ४२ ।। भागवततात्पर्यम् — देवमायां विदन्ति संसारमतितरन्ति च ।
Play Time: 53:26
Size: 5.51 MB