Upanyasa - VNU759

ಶ್ರೀಮದ್ ಭಾಗವತಮ್ — 196 — ಜೀವನಿಗೆ ದೇಹ ಬರಲು ಕಾರಣ

ಜೀವ ಅಪ್ರಾಕೃತನಾದವನು, ಅವನಿಗೆ ಪ್ರಾಕೃತ ಪದಾರ್ಥಗಳ ಸಂಪರ್ಕ ಹೇಗೆ ಉಂಟಾಗಲು ಸಾಧ್ಯ, ಆ ಸಂಪರ್ಕದಿಂದ ದೂರವಾಗುವ ಕ್ರಮವೇನು ಎನ್ನುವದನ್ನು ತಿಳಿಸುತ್ತ ಶುಕಾಚಾರ್ಯರು ಪ್ರಕೃತಿ ನಮ್ಮ ಮೇಲೆ ಮಾಡುವ ವಿಕಾರವನ್ನು ಅದ್ಭುತವಾಗಿ ಮನಗಾಣಿಸುತ್ತಾರೆ, ದೇಹ ಇಂದ್ರಿಯಗಳ ಮೇಲೆ ಅಭಿಮಾನವನ್ನು ತ್ಯಾಗ ಮಾಡಿದರೆ ಮಾತ್ರ ಮುಕ್ತಿ ದೊರೆಯಲು ಸಾಧ್ಯ ಎಂಬ ತತ್ವವನ್ನು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ತಿಳಿಸುತ್ತಾರೆ. 

ಕನಸುಗಳ ಕುರಿತ ಅಪರೂಪದ ವಿಷಯಗಳ ಚರ್ಚೆ ಇಲ್ಲಿದೆ.

ಯಾವುದೋ ಕಾರ್ಯವನ್ನು ಮಾಡುತ್ತ ಕೇಳಿದರೆ ಈ ಗಂಭೀರವಾದ ವಿಷಯಗಳು ಅರ್ಥವೇ ಆಗುವದಿಲ್ಲ. ಏಕಾಗ್ರವಾದ ಮನಸ್ಸಿನಿಂದ ಕೇಳಿ. ಕೇಳಿದ್ದನ್ನು ಬರೆಯಿರಿ. ಸ್ಪಷ್ಟವಾಗಿ ಅರ್ಥವಾಗುತ್ತದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯನಿರ್ಣದ ವಚನಗಳು —

अथ नवमोऽध्यायः ।

श्रीशुक उवाच — 

आत्ममायामृते राजन् परस्यानुभवात्मनः । 
न घटेतार्थसम्बन्धः स्वप्ने द्रष्टुरिवाञ्जसा ।। १ ।।

बहुरूप इवाऽभाति मायया बहुरूपया ।
रममाणो गुणेष्वस्या ममाहमिति मन्यते ।। २ ।।

यर्हि चायं महित्वे स्वे परस्मिन् कालमाययोः ।
रमेत गतसम्मोहस्त्यक्त्वोदास्ते तदोभयम् ।। ३ ।।

भागवततात्पर्यम् — परस्य अर्थव्यतिरिक्तस्य । “यदधातुमतः” इत्यस्य ह्युत्तरम् । 

“अशरीरस्य जीवस्य शरीरोत्पत्तिकारणम् । 
ईश्वरेच्छा प्राथमिकी तां विना नहि किञ्चन ।।

द्वितीया प्रकृतिः प्रोक्ता तद्रूपा हि गुणास्त्रयः ।
 तेषां सम्पातजो भावो ममाहमिति या मतिः ।।

देहात् परस्य देहित्वमहम्भावमृते कुतः ।
 यथा रजस्तमोभावैर्विना स्वाप्नो न जायते ।।

निद्राकामाद्यभावेन तद्वद् देहः क्व तान् विना ।
तस्मात् प्रकृत्यैव पुमान् मानुषादिविकारया ।।

मानुषादिरिवाऽभाति नित्यचैतन्यरूपवान् ।
यदा स्वरूपं जानाति कालप्रकृतिवर्जितम् ।
वासुदेवप्रसादेन तदा मुक्तो भवत्यसौ” इति भविष्यत्पुराणे ।

Play Time: 54:11

Size: 5.51 MB


Download Upanyasa Share to facebook View Comments
9281 Views

Comments

(You can only view comments here. If you want to write a comment please download the app.)
 • Hari,Chennai

  9:46 PM , 22/01/2022

  Acharyarige Namaskara..
  
  Bhagavanthana prathibhimbhave Jeeva raashigalu. Jeeva swaroopa is gyana anadha shareera.
  
  Bhagavantha is vasthava mattu vastu(as per 2nd sloga 1st skanda) means guna paripoorna, dhoosha doora.
  Then, Bhagavanthanige agyana villa. Then, Jeeva swaroopa yenge agyana baralikka sadya? (Madhyamaru & Adhamaru)
  
  E prashnakke uttara dhaya bittu needuree. Sri Krishnarpanamastu
 • Jyothi Gayathri,Harihar

  1:13 PM , 12/10/2021

  🙏🙏🙏🙏🙏
 • prema raghavendra,coimbatore

  4:47 PM , 05/09/2019

  Anantha namaskara! Danyavada!
 • Madhusudan Gururajarao Chandragutti,Belagavi

  3:46 PM , 23/06/2019

  ಪರಮಪೂಜ್ಯ ಆಚಾರ್ಯರಿಗೆ ಹೃತ್ಪೂರ್ವಕ ಪ್ರಣಾಮಗಳು. ಒಂದು ಪ್ರಶ್ನೆ

  Vishnudasa Nagendracharya

  ಕೇಳಿ. 
 • Madhusudan Gururajarao Chandragutti,Belagavi

  3:53 PM , 23/06/2019

  ಜೀವನಿಗೆ ಏಕಕಾಲಕ್ಕೆ ಅನೇಕ ದೇಶಗಳಲ್ಲಿ/ಲೋಕಗಳಲ್ಲಿ ವಿವಿಧ ರೀತಿಯ ದೇಹಗಳನ್ನು ಪ್ರಕೃತಿ ನೀಡಬಹುದೇ?

  Vishnudasa Nagendracharya

  ಸಾಂಶಜೀವರು ಒಂದೇ ಕಾಲಕ್ಕೆ ಅನೇಕ ಪ್ರದೇಶಗಳಲ್ಲಿ ಇರಬಲ್ಲರು. ಹೀಗಾಗಿ ಅವರಿಗೆ ಪ್ರಕೃತಿ ಏಕಕಾಲಕ್ಕೆ ಅನೇಕ ದೇಹಗಳನ್ನು ನೀಡುತ್ತದೆ. ಉದಾಹರಣೆಗೆ ಇಂದ್ರ ಎಂಬ ಒಬ್ಬ ಜೀವ ಬ್ರಹ್ಮಾಂಡದ ಆಚೆಯಿಂದ ಆರಂಭಿಸಿ ಭೂಲೋಕದಲ್ಲಿ ಅರ್ಜುನನವರೆಗೆ ಅನೇಕ ರೂಪಗಳಲ್ಲಿ ಏಕಕಾಲಕ್ಕೆ ಇರಬಲ್ಲರು. 
  
  ನಿರಂಶ ಜೀವರಿಗೆ ಅನೇಕ ಪ್ರದೇಶಗಳಲ್ಲಿ ಏಕಕಾಲಕ್ಕೆ ಇರುವ ಸಾಮರ್ಥ್ಯವಿಲ್ಲವಾದ ಕಾರಣ ಅವರಿಗೆ ಆ ರೀತಿ ಅನೇಕ ದೇಹಗಳು ಒಟ್ಟಿಗೇ ದೊರೆಯುವದಿಲ್ಲ. 
  
  
  ಸಾಂಶಜೀವರೆಂದರೇನು, ನಿರಂಶಜೀವರೆಂದರೇನು ಎನ್ನುವದನ್ನು ಭಾಗವತದ 110ನೆಯ ಉಪನ್ಯಾಸದಲ್ಲಿ ವಿವರವಾಗಿ ತಿಳಿಸಿದ್ದೇನೆ. 
  
  ವಿಶ್ವನಂದಿನಿಯಲ್ಲಿ 624ನೇ ಉಪನ್ಯಾಸ. 
  ಭಾಗವತದಲ್ಲಿ 110ನೆಯ ಉಪನ್ಯಾಸ. 
  ಪ್ರಥಮಸ್ಕಂಧದಲ್ಲಿ “ವಿದುರರ ತೀರ್ಥಯಾತ್ರೆ” ಎಂಬ ಉಪನ್ಯಾಸ. 
  
  http://vishwanandini.com/fullupanyasa.php?serialnumber=VNU624
 • Vishwanandini User,Hubli

  2:27 PM , 30/04/2019

  Acharyarige anantha namaskaragalu.. We are truly blessed to listen to your bhagavatha discourses... Nimma jnana karya heege saagali.. Anantha Dhanyavadagalu.
 • Narayanswamy,chamarajanagara

  10:56 AM, 24/04/2019

  ಪರಮ ಪೂಜ್ಯ ಗುರುಗಳಿಗೆ ಅನಂತ ಪ್ರಣಾಮಗಳು 
  ನಿಮ್ಮ ಪಾದದ ದೂಳನ್ನ ಜನ್ಮ ಜನ್ಮ ದಲ್ಲೂ ಭಗವಂತ ನಮ್ಮ ತಲೆ ಮೇಲೆಹಾಕಲಿ ಮೈ ಮನ ರೋಮಾಂಚನ ಗೊಳಿಸುವ ಭಾಗವತ ಶ್ರವಣ ಮಾಡುತಿರುವ ನಾವೇ ದನ್ಯರು 🙏🙏🙏🙏🙏🙏🙏🙏🙏
 • Aditya Nadagowda,Dharawad

  7:46 AM , 24/04/2019

  Hare Krishna
  
  Thank you, now got full length audio after downloading once again.
 • Aditya Nadagowda,Dharawad

  8:37 PM , 23/04/2019

  Hare Krishna
  Very informative Pravachana.
  
  Acharya, where can I get full length audio of the Srimad Bagavatam -02/196.

  Vishnudasa Nagendracharya

  Full audio is available here itself. 
  
  Delete and download again, you will get the full audio. 
  
  
  
 • Shanthala Mamilla.S,Davanagere

  9:34 PM , 23/04/2019

  ಅನಂತ ಧನ್ಯವಾದಗಳು ಗುರುಗಳೇ 🙏
  ನನ್ನ ಬಹಳ ದಿನದ ಪ್ರಶ್ನೆಗೆ ಉತ್ತರ ಸಿಕ್ಕಿದೆ....
 • Jasyashree Karunakar,Bangalore

  2:10 PM , 23/04/2019

  ಗುರುಗಳೆ 
  ಕನಸ್ಸನ್ನು ಕಾಣುವಂತೆ ಜೀವನು ಸಂಸಾರದಲ್ಲಿರುವದು , ಎರಡಕ್ಕೂ ಮೂಲಭತವಾಗಿ ಭಗವದಿಚ್ಚೆ ಮತ್ತು ಪ್ರಕೃತಿ ಕಾರಣವಾಗಿ ನಿಂತಿರುವದು,
  ವಿವಿಧ ಪುಷ್ಪಗಳಿಂದ ಮಕರಂಧವನ್ನು ಹೀರುವಂತೆ ,ವಿವಿಧ ಶಾಸ್ತ್ರಗಳಿಂದ ತತ್ವಗಳನ್ನು ಕ್ರೂಡಿಕರಿಸಿ ತಿಳಿಯುವ ಕ್ರಮ ವಾಹ್ ....🙏
  
  ಭಗವಂತನನ್ನು ತಿಳಿಯುವ ಮುಂಚೆ ನಮ್ಮ ಸ್ವರೂಪವನ್ನು ತಿಳಿಯುವದು, ಎಂತಹ ಅದ್ಭುತವಾದ ವಿಷಯಗಳು...
  
  ನಮ್ಮ ಬುದ್ದಿಯನ್ನು ಚುರುಕು ಮಾಡಲು ಯಾವುದೇ ಲೌಖಿಕವಾದ ಸೆಫ್ ಡೆವಲಪ್ ಮೆಂಟ್ ಕೋಸ್೯ಗಳ ಅವಶ್ಯಕತೆಯೇ ಇಲ್ಲ....
  
  ನಮ್ಮನ್ನು ನಾವು ಮರೆತುಬಿಡುವಂತೆ ಮಾಡುತ್ತದೆ ಶ್ರೀಮದ್ಭಾಗವತ.....
  ಅದೂ ಕೊಡ ನೀವು ಉಪನ್ಯಾಸನೀಡುತ್ತಿರುವ ಶ್ರೀಮದ್ಭಾಗವತ.....
  🙏🙏🙏😊 ಹೆಮ್ಮೆಯ ಗುರುಗಳಿಗೊಂದು ಭಕ್ತಿಪೂವ೯ಕ ಪ್ರಣಾಮ.
 • Vikram Shenoy,Doha

  1:24 PM , 23/04/2019

  ಜೀವ ತಾರತಮ್ಯದ ಬಗ್ಗೆ ಈರುವ ಪ್ರಶ್ನೆಗೆ ಉತ್ತರ ಕೊಟ್ಟಿದೀರ ನನ್ನ ಪ್ರಶ್ನೆಗೆ ಉತ್ತರ ಕೊತ್ತಿದೀರ. ಹೃದ್ಲೂರ್ವಕ ಧನ್ಯವಾದಗಳು ಆಚಾರ್ಯರಿಗೆ....
 • Vikram Shenoy,Doha

  12:54 PM, 23/04/2019

  ಆಚಾರ್ಯರಿಗೆ ತುಂಬ ಧನ್ಯವಾದಗಳು. ಅಪ್ರಾಕೃತ ಜೀವ ಮತ್ತೆ ಜೀವ ತಾರತಮ್ಯ ವಿಚಾರದ ಬಗ್ಗೆ ದಾಯವಾಗಿ ವಿಸ್ತಾರ ಮಾಡಿರಿ. ಒಂದು ಬೇಡಿಕೆ.
 • DESHPANDE P N,BANGALORE

  8:24 AM , 23/04/2019

  S.Namaskargalu. those who all are listening to these SrimadBhagwata pravchan are blessed persons. You may please grace them