23/04/2019
ಐವತ್ತು ಕೋಟಿ ಯೋಜನ ವಿಸ್ತೀರ್ಣವಾದ ಬ್ರಹ್ಮಾಂಡ. ಅದರೊಳಗೆ ಭಗವಂತ ತನ್ನ ನಾಭಿಕಮಲದಲ್ಲಿ ಬ್ರಹ್ಮದೇವರನ್ನು ಸೃಷ್ಟಿ ಮಾಡುತ್ತಾನೆ. ಆದರೆ, ತನ್ನನ್ನು ತಾನು ತೋರಗೊಡುವದಿಲ್ಲ. ಅಷ್ಟು ದೊಡ್ಡದಾದ ಬ್ರಹ್ಮಾಂಡದಲ್ಲಿ ಬ್ರಹ್ಮದೇವರು ಏಕಾಂಗಿ. ತನ್ನ ಜನಕ ಯಾರು ಎಂದು ಹುಡುಕಾಡುತ್ತಾರೆ, ಆಟವಾಡುತ್ತಿರುವ ಸ್ವಾಮಿ ಅವರಿಗೆ ಕಾಣಿಸುವದಿಲ್ಲ, ತಪಸ್ಸು ಮಾಡು ಎಂದು ಆದೇಶಿಸುತ್ತಾನೆ. ಬ್ರಹ್ಮದೇವರು ಮಾಡಿದ ತಪಸ್ಸು ಎಂತಹುದು, ಎಷ್ಟು ದೀರ್ಘವಾದದ್ದು ಎನ್ನುವ ರೋಚಕ ವಿವರ ಇಲ್ಲಿದೆ. ಈ ಘಟನೆ ನಡೆಯುವದೇ ಸಮಗ್ರ ಸಜ್ಜನಪ್ರಪಂಚಕ್ಕೆ ಪಾಠವೊಂದನ್ನು ಕಲಿಸಲು. ನಮ್ಮ ಸುತ್ತಮುತ್ತಲೂ ಕೋಟಿ ಕೋಟಿ ಜನರಿದ್ದರೂ ಸಾಧನೆಯ ವಿಷಯ ಬಂದಾಗ ನಾವು ಏಕಾಂಗಿಗಳೇ. ಮೋಕ್ಷ ಪಡೆಯಬೇಕು ಎಂದು ಗೊತ್ತಿದ್ದರೂ ಹೇಗೆ ಪಡೆಯುವದು ಗೊತ್ತಿರುವದಿಲ್ಲ. ಆಗ ನಾವು ಮಾಡಬೇಕಾದ್ದೇನು ಎನ್ನುವದನ್ನು ಈ ಬ್ರಹ್ಮಾಂಡದಲ್ಲಿ ಹುಟ್ಟಿ ಬಂದ ಮೊದಲ ಜೀವ, ಜೀವೋತ್ತಮರಾದ ಬ್ರಹ್ಮದೇವರು ನಮಗೆ ಕಲಿಸುತ್ತಾರೆ. ನಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ಭಾಗವತದ ಭಾಗವಿದು. ತಪ್ಪದೇ ಕೇಳಿ. ಏಕಾಂತದಲ್ಲಿ ಕೇಳಿ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು — आत्मतत्वविशुद्ध्यर्थं यदाह भगवानृतम् । ब्रह्मणेऽदर्शयद् रूपमव्यलीकव्रतादृतः ।। ४ ।। भागवततात्पर्यम् — यतो भगवदुक्तं प्रमाणमतस्तदुक्तं पुराणं त्वत्प्रश्नानामुत्तरत्वेन वक्ष्ये । स आदिदेवो भजतां परो गुरुः स्वधिष्ण्यमास्थाय सिसृक्षयैक्षत तं नाध्यगच्छद् दृशमत्र सम्मतां प्रपञ्चनिर्माणविधिर्यया भवेत् ।। ५ ।। सञ्चिन्तयन् द्व्यक्षरमेकदाम्भस्युपाशृणोद् द्विर्गदितं वचो विभुः । स्पर्शेषु यच्छोडशमेकविंशं निष्किञ्चनानां नृप यद् धनं विदुः ।। ६ ।। निशम्य तद्वक्तृदिदृक्षया दिशो विलोक्य तत्रान्यदपश्यमानः । स्वधिष्ण्यमास्थाय विमृश्य तद्धितं तपस्युपादिष्ट इवाऽदधे मनः ।। ७ ।। दिव्यं सहस्राब्दममोघदर्शनो जितानिलात्मा विजितोभयेन्द्रियः । अतप्यत स्माखिललोकतापनं तपस्तपीयांस्तपतां समाहितः ।। ८ ।। भागवततात्पर्यम् — तपो ब्रह्म । “तपसोऽध्यजायत” इति श्रुतेः । अखिललोकप्रकाशनं तत् तदाऽऽलोचयामास । तपतां तपीयानित्यनेनात्युत्तमोत्तमत्वमुक्तं भवति । “महान् महीयसामादि ब्रूयादत्युत्तमोत्तमम् । यत्राधिकं वदेत् किञ्चित् ज्ञेयोऽर्थस्तत्र चाधिकः” इति व्यासनिरुक्ते । “तपोरूपं परं ब्रह्म ब्रह्माऽचिन्तयदञ्जसा” इति षाड्गुण्ये ।
Play Time: 51:08
Size: 5.51 MB