23/04/2019
ಐವತ್ತು ಕೋಟಿ ಯೋಜನವಿಸ್ತೀರ್ಣವಾದ ಬ್ರಹ್ಮಾಂಡದ ಮಧ್ಯದಲ್ಲಿ ಒಬ್ಬರೇ ಇರುವ ಬ್ರಹ್ಮದೇವರು ತನ್ನ ಸ್ವಾಮಿಯ ಗುಣಗಳ ಚಿಂತನರೂಪವಾದ ತಪಸ್ಸನ್ನು ಮಾಡುತ್ತಾರೆ, (ನಮ್ಮ ಲೆಕ್ಕದಲ್ಲಿ ಮೂರು ಲಕ್ಷದ ಅರವತ್ತು ಸಾವಿರ ವರ್ಷಗಳು, ದೇವತೆಗಳ ಲೆಕ್ಕದಲ್ಲಿ ಒಂದು ಸಾವಿರ ವರ್ಷಗಳು, ಬ್ರಹ್ಮದೇವರ ಲೆಕ್ಕದಲ್ಲಿ 3.6 ಸೆಕೆಂಡುಗಳು) ಆ ತಪಸ್ಸಿಗೆ ಒಲಿದ ಭಗವಂತ ತನ್ನ ಶ್ವೇತದ್ವೀಪವನ್ನು ಬ್ರಹ್ಮದೇವರಿಗೆ ತೋರಗೊಡುತ್ತಾನೆ. ಆ ಶ್ವೇತದ್ವೀಪದ ವೈಭವ ಇಲ್ಲಿದೆ. ಶ್ವೇತದ್ವೀಪದಲ್ಲಿ ಸತ್ವಗುಣ, ರಜೋಗುಣ, ತಮೋಗುಣ ಮುಂತಾದವುಗಳಿಲ್ಲ ಎಂದು ಭಾಗವತ ಹೇಳುತ್ತದೆ. ಆದರೆ ಶ್ವೇತದ್ವೀಪ ಇರುವದು ಬ್ರಹ್ಮಾಂಡದ ಒಳಗೆ. ಇಲ್ಲಿ ಪ್ರಕೃತಿಯಿಂದಾರಂಭಿಸಿ ಪೃಥಿವೀತತ್ವದ ವರೆಗೆ ಎಲ್ಲವೂ ವ್ಯಾಪಿಸಿಯೇ ಇದೆಯಲ್ಲ, ಭಾಗವತದ ಮಾತಿಗೆ ಅರ್ಥವೇನು ಎಂಬ ಪ್ರಶ್ನೆಗೆ ನಮ್ಮ ನ್ಯಾಯಸುಧಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ. ಮೋಕ್ಷದಲ್ಲಿ ಅಸುರರಿದ್ದಾರೆ ಎಂಬ ಭಾಗವತ ತಿಳಿಸುತ್ತದೆ. ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜತೀರ್ಥಗುರುಸಾರ್ವಭೌಮರು ಚರ್ಚೆ ಮಾಡಿ ನಿರ್ಣಯ ಮಾಡಿರುವ ಸ್ವಾರಸ್ಯದ ವಿಷಯಗಳಿವೆ ಇಲ್ಲಿವೆ ಕೇಳಿ. ನಮ್ಮ ಶ್ರೀಮದ್ವಿಜಯಧ್ವಜಾಚಾರ್ಯರು ತಿಳಿಸಿದ ಮತ್ತೊಂದು ಅಪೂರ್ವ ಅರ್ಥದೊಂದಿಗೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತ ಮತ್ತು ಭಾಗವತತಾತ್ಪರ್ಯನಿರ್ಣಯಗಳ ವಚನಗಳು — दिव्यं सहस्राब्दममोघदर्शनो जितानिलात्मा विजितोभयेन्द्रियः । अतप्यत स्माखिललोकतापनं तपस्तपीयांस्तपतां समाहितः ।। ८ ।। तस्मै स्वलोकं भगवान् सभाजितः सन्दर्शयामास परं न यत् पदम् । व्यपेतसङ्क्लेशविमोहसाध्वसं सन्दृष्टवद्भिर्विबुधैरभिष्टुतम् ।। ९ ।। भागवततात्पर्यम् — यत् यतः। “यत् तत्तदित्यादयः शब्दाः पञ्चम्यन्ताः प्रकीर्तिताः” इति च। न वर्तते यत्र रजस्तमस्तयोः सत्वं च मिश्रं नच कालविक्रमः । न यत्र माया किमुतापरे हरेरनुव्रता यत्र सुरासुरार्चिताः ।। १० ।।
Play Time: 42:54
Size: 5.51 MB