Upanyasa - VNU764

ಶ್ರೀಮದ್ ಭಾಗವತಮ್ — 201 — ದೇವರ ಸ್ವಾತಂತ್ರ್ಯ

ಚತುಃಶ್ಲೋಕೀ ಭಾಗವತದ ಮೊದಲ ಶ್ಲೋಕ

ಒಬ್ಬ ಚೇತನನನ್ನು ದೇವರು ಎಂದು ನಿಗದಿ ಮಾಡಿಕೊಂಡು ಅವನೇ ದೇವರು ಎಂದು ವಾದಿಸುವದಲ್ಲ, ದೇವರು ಎಂದಾಗಬೇಕಾದರೆ ಯಾವ ಲಕ್ಷಣಗಳಿರಬೇಕೋ ಆ ಲಕ್ಷಣಗಳುಳ್ಳ ಚೇತನನನ್ನು ದೇವರು ಎಂದು ಒಪ್ಪಬೇಕು ಎಂದು ಸಾರಿದವರು ಶ್ರೀಮದಾಚಾರ್ಯರು. 

ದೇವರು ಎಂದಾಗಬೇಕಾದರೆ ಇರಬೇಕಾದ ಮೊಟ್ಟ ಮೊದಲ ಲಕ್ಷಣ, ಸ್ವಾತಂತ್ರ್ಯ. ಆ ಗುಣದ ಕುರಿತು ಭಾಗವತ ಭಾಗವತ ತಾತ್ಪರ್ಯಗಳು ತಿಳಿಸಿರುವ ಅದ್ಭುತ ವಿಷಯಗಳ ನಿರೂಪಣೆ ಇಲ್ಲಿದೆ. 

ಶ್ವೇತದ್ವೀಪದಲ್ಲಿ ಬ್ರಹ್ಮದೇವರಿಗೆ ಪರಮಾತ್ಮ ಮಾಡಿದ ಉಪದೇಶವೇ ಚತುಃಶ್ಲೋಕೀ ಭಾಗವತ. ಶಾಸ್ತ್ರಪ್ರಪಂಚದ ಅತ್ಯಂತ ರಹಸ್ಯದ ಮತ್ತು ಗಂಭೀರವಾದ ತತ್ವರಾಶಿಗಳು ಈ ನಾಲ್ಕು ಪದ್ಯಗಳಲ್ಲಿವೆ. ಯಾವುದೋ ಕಾರ್ಯವನ್ನು ಮಾಡುತ್ತ ಈ ಪ್ರವಚನವನ್ನು ಕೇಳಬೇಡಿ. ಪರಿಪೂರ್ಣವಾದ ಮನಸ್ಸಿನ ಏಕಾಗ್ರತೆಯೊಂದಿಗೆ ಈ ಸರ್ವೋತ್ತಮ-ಜೀವೋತ್ತಮರ ಸಂವಾದವನ್ನು ಆಲಿಸಿ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು —

श्रीभगवानुवाच — 

ज्ञानं परमगुह्यं मे यद् विज्ञानसमन्वितम् ।
सरहस्यं तदङ्गं च गृहाण गदितं मया ।। ३० ।।

भागवततात्पर्यम् ।

“येनयेन यथा ज्ञात्वा नियतं मुक्तिराप्यते ।
 तद् विज्ञानमिति प्रोक्तं ज्ञानं साधारणं स्मृतम्” इति वामने ।

यावानहं यथाभावो यद्रूपगुणकर्मकः ।
तथैव तत्वविज्ञानमस्तु ते मदनुग्रहात् ।। ३१ ।।

अहमेवाऽसमग्रे च नान्यद् यत् सदसत् परम् ।
पश्चादहं त्वमेतच्च योऽवशिष्येत सोऽस्म्यहम् ।। ३२ ।।

भागवततात्पर्यम् — परं स्वतन्त्रं न ।

“विष्णोरधीनं प्राक् सृष्टेस्तथैव च लयादनु । 
अस्य सत्वप्रवृत्यादि विशेषेणाधिगम्यते ।।

स्वातन्त्र्यं स्थितिकाले तु कथञ्चिद् बुद्धिमोहतः ।
 प्रतीयमानमपि तु तस्मान्नैवेति गम्यते।

जनिष्येऽहं लयिष्येऽहमिति न ह्यभिसन्धितः । 
अतो जीवनमप्येतद् भवेदीशाभिसन्धितः ।।

अतः स्वरूपभेदेऽपि ह्यात्मैवेदमिति श्रुतिः ।
वदत्यस्येशतन्त्रत्वाद् यथाऽशक्तस्त्वसन्निति ।।

विद्यन्ते हि तदा जीवाः कालकर्मादिकं तथा ।
क्वान्यथा हि पुनः सृष्टिः पूर्वकर्मानुसारिणी” इति ब्रह्मतर्के ।

त्वमेतच्च परं न भवति स्वतन्त्रं न ।

Play Time: 52:36

Size: 5.51 MB


Download Upanyasa Share to facebook View Comments
7959 Views

Comments

(You can only view comments here. If you want to write a comment please download the app.)
 • prema raghavendra,coimbatore

  12:00 PM, 27/09/2019

  Anantha namaskara! Danyavada! Paramathma obbane Swathanthra.. Naavu poorna Aswathanthraru.
 • H.Suvarna kulkarni,Bangalore

  10:55 AM, 14/07/2019

  ಗುರುಗಳಿಗೆ ಪ್ರಣಾಮಗಳು ಮನುಷ್ಯ ಜನ್ಮಬಂದಾಗ ಅರಿಯಲೇಬೇಕಾದ ಉತ್ತಮ ಜ್ಞಾನ ನೀಡುತ್ತಿರುವ ಗುರುಗಳಿಗೆ ಭಕ್ತಿ ಪೂರ್ವಕ ನಮನಗಳು
 • Jasyashree Karunakar,Bangalore

  5:06 PM , 30/04/2019

  ಗುರುಗಳೆ ಸಾಧನೆ ಮಾಡಹೊರಟಿರುವ ಬ್ರಹ್ಮದೇವರು ಮಾಡುವ ಪ್ರಾಥ೯ನೆಯ ಕ್ರಮದಲ್ಲಿಯೇ ಮಧ್ವಶಾಸ್ತ್ರದ ಅನುಷ್ಟಾನವನ್ನು ತೋರಿಸಿಕೊಡುವ ಶ್ರೀಮದ್ಭಾಗವತದ ಪಾಠ ಪರಮಾದ್ಭುತ....ಕಥೆಯ ಜೊತೆಗೆ ಆ ತತ್ವವನ್ನು ಅಲ್ಲಿ ತಿಳಿಸಿಹೇಳದಿದ್ದರೆ ನಮ್ಮಂತಹ ಸಾಮಾನ್ಯರಿಗೆ ತಿಳಿಯುತ್ತಿರಲಿಲ್ಲ..
  
  ಮೊದಲಭಾಗಗಳಲ್ಲಿ ಬ್ರಹ್ಮದೇವರು ಆದಿಕವಿಗಳು ಅನ್ನುವದನ್ನು ಕೇಳಿದ್ದೆವು ಆದರೆ ಯಾಕೆ ಹೇಗೆ ಅನ್ನುವದನ್ನು ಇಂದಿನ ಉಪನ್ಯಾಸದಲ್ಲಿ ಅಥ೯ಮಾಡಿಸಿಕೊಟ್ಟ ರೀತಿ....🙏ಪರಮಾದ್ಭುತ....
  
  ಆ ಹಿಂದಿನ ಭಾಗದ ರಸಾಸ್ವಾದವನ್ನು ಮತ್ತೊಮ್ಮೆ ಪಾನ ಮಾಡಲು ಮನಸ್ಸು ಸಜ್ಜಾಗುತ್ತಿದೆ....ಅದನ್ನು ಈಡೇರಿಸಿಕೊಡಲು ಸದಾ ಸಿದ್ದವಿರುವ ವಿಶ್ವನಂದಿನಿಗೊಂದು ಭಕ್ತಿಯನಮನ🙏
  
  ಸ್ವತಂತ್ರನಾದ ಭಗವಂತ ಒಬ್ಬನೇ ಇದ್ದಾಗಲೂ , ಇದ್ದೂ ಇಲ್ಲದಂತಿರುವ ಅನಾದಿಯಾದ ಅಪರಿಪೂಣ೯ವಾದ ಪದಾಥ೯ಗಳೆಲ್ಲವೂ ಹೇಗೆ "ಭಗವದಧೀನ" ಅನ್ನುವದನ್ನು ಲೌಖಿಕ ಉದಾಹರಣೆಯೊಂದಿಗೆ ತಿಳಿಸಿಕೊಟ್ಟ ರೀತಿ ತುಂಬಾ ಚೆನ್ನಾಗಿತ್ತು.....
  
  ಗುರುಗಳೆ ನಮ್ಮ ಜ್ಞಾನದ ಹಂತಕ್ಕೆ ನೀವಿಳಿದು ಬಂದು ತತ್ವವನ್ನು ನಮಗಥ೯ವಾಗುವಂತೆ ಉದಾಹರಣೆಗಳನ್ನು ನೀಡಿ ಪಾಠ ಹೇಳುವ ಕ್ರಮ, ನಮಗೆ ನಿಮ್ಮಲ್ಲಿ ರುವ ಗೌರವವನ್ನು ಇಮ್ಮಯಾಗಿಸುತ್ತಿದೆ....
 • DESHPANDE P N,BANGALORE

  9:23 AM , 30/04/2019

  Please prey Almighty to give me the full life to listen to your all said secret things.

  Vishnudasa Nagendracharya

  ಖಂಡಿತ. ಸಮಗ್ರ ಶ್ರೀಮದ್ ಭಾಗವತದ ಪ್ರವಚನಗಳನ್ನು ನೀವು ಆಲಿಸುವಂತಾಗಲಿ, ದೃಢವಾದ ಆರೋಗ್ಯ ಪೂರ್ಣವಾದ ಆಯುಷ್ಯವನ್ನು ಶ್ರೀಹರಿ ವಾಯು ದೇವತಾ ಗುರುಗಳು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 
  
  ನಿಮ್ಮಂತಹ ವೃದ್ಧರು (ಶ್ರೀ ದೇಶಪಾಂಡೆಯವರಿಗೆ ಈಗ 80 ದಾಟಿದೆ) ಭಾಗವತವನ್ನು ಇಷ್ಟು ಶ್ರದ್ಧೆಯಿಂದ ಆಲಿಸುತ್ತಿರುವದನ್ನು ಕಂಡಾಗ ತುಂಬ ಸಂತೋಷವಾಗುತ್ತದೆ. 
  
 • DESHPANDE P N,BANGALORE

  9:20 AM , 30/04/2019

  S.Namaskaragalu. The depth of knowledge is proved in every pravachan. You said after 5/6 years further depty things will be conveyed.
 • Narayanswamy,chamarajanagara

  8:56 AM , 30/04/2019

  ಪರಮ ಪೂಜ್ಯ ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏
 • Mudigal sreenath,Bengulutu

  7:54 AM , 30/04/2019

  Nimma abheestadanthe ee pravachanagalu naavu sadaa keluva bhagya devaru namage odagisalee.
 • Mudigal sreenath,Bengulutu

  7:54 AM , 30/04/2019

  Nimma abheestadanthe ee pravachanagalu naavu sadaa keluva bhagya devaru namage odagisalee.