Upanyasa - VNU765

ಶ್ರೀಮದ್ ಭಾಗವತಮ್ — 202 — ಎರಡು ರಹಸ್ಯ ಉಪಾಸನೆಗಳು

ಚತುಃಶ್ಲೋಕೀ ಭಾಗವತ — ಎರಡನೆಯ ಶ್ಲೋಕ

ಚೇತನ ಅಚೇತನಗಳ ಮುಖ್ಯ ಲಕ್ಷಣವನ್ನು ತಿಳಿಸುವದರೊಂದಿಗೆ ಆರಂಭವಾಗುವ ಈ ಎರಡನೆಯ ಶ್ಲೋಕದಲ್ಲಿ ಸಕಲ ಜೀವರಾಶಿಗಳು ಯಾವ ರೀತಿ ಪ್ರಕೃತಿಯ ಬಂಧನಕ್ಕೊಳಗಾಗಿದ್ದಾರೆ ಎಂಬುದನ್ನು ಮನಗಾಣಿಸಿ ಆ ಬಂಧನದಿಂದ ಬಿಡುಗಡೆಗೊಳ್ಳುವ ರಹಸ್ಯದ ಉಪಾಸನೆಯನ್ನು ಭಗವಂತ ಬ್ರಹ್ಮದೇವರಿಗೆ ಉಪದೇಶಿಸುತ್ತಾನೆ. 

ನಾವು ಪ್ರತೀದಿವಸ ಪ್ರತಿಯೊಂದು ಪದಾರ್ಥದಿಂದ ತೊಂದರೆಗೆ ಒಳಗಾಗುತ್ತಿರುತ್ತೇವೆ. ಆ ರೀತಿಯ ತೊಂದರೆ ಆಗಬಾರದು ಎಂದರೆ ಯಾವ ಜ್ಞಾನವನ್ನು ಪಡೆಯಬೇಕು, ದೇವರ ಯಾವ ಗುಣವನ್ನು ಉಪಾಸನೆ ಮಾಡಬೇಕೆಂಬ ವಿವರ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯಗಳ ವಚನಗಳು — 


ऋतेऽर्थं यत् प्रतीयेत न प्रतीयेत चाऽत्मनि ।
तद् विद्यादात्मनो मायां यथाभासो यथातमः ।। ३३ ।।

भागवततात्पर्यम् — अर्थवदिव प्रतीयते । नच परमात्मन्यर्थवत् प्रतीयते । अर्थं प्रयोजनमृते । नहि जीवप्रकृतिभ्यामीश्वरस्यार्थः 

“मुख्यतो विष्णुशक्तिर्हि मायाशब्देन भण्यते । 
उपचारतस्तु प्रकृतिर्जीवश्चैव हि भण्यते” इति च ।

यथाभासो जीवः ।

“सर्वं परे स्थितमपि नैव तत्रेति भण्यते ।
यतो हरेर्न जीवेन जीवनं न हरौ ततः ।।

जीवः प्रकृतिरप्यत्र यतो नैव हि बन्धकृत् ।
कर्म चाफलदातृत्वात् कालश्चापरिणामनात् ।।

यथा छत्रधराद्यास्तु रथस्था अपि सर्वशः ।
रथिनो नैव भण्यन्त एवं हरिगता अपि ।।

यथा महान्ति भूतानि शरीरेषु बहिस्तथा ।
एवं हरिश्च भूतेषु बहिश्च व्याप्तिहेतुतः ।।
तस्मात् तत्स्थो न तत्स्थश्च प्रोच्यते हरिरीश्वरः” इति च ।

Play Time: 48:21

Size: 5.51 MB


Download Upanyasa Share to facebook View Comments
8728 Views

Comments

(You can only view comments here. If you want to write a comment please download the app.)
 • Shrikant,Mangalore

  8:38 PM , 28/07/2019

  What is the reason for jeeva to get this prakruta deha?

  Vishnudasa Nagendracharya

  A detailed answer is already given in 196th Upanyasa  [ SB196 or VNU759]. 
  
  
 • Jasyashree Karunakar,Bangalore

  9:44 PM , 02/05/2019

  ವಸ್ತು ಸ್ಥಿತಿಯಲ್ಲಿ ಜ್ಞಾನಾನಂದಾತ್ಮಕವಾದ ಜೀವನು, ಪಂಚೇಂದ್ರಿಯಗಳ ಮೂಲಕ ವಿಷಯ ಸಂಪಕ೯ವನ್ನು ಹೊಂದಿದಾಗ , ಕೇವಲ ಸುಖದ ಸ್ಪಶ೯ ಮಾತ್ರವಿರುವ ದುಃಖವನ್ನೇ, "ಸುಖವೆಂದು" ಆಸ್ವಾದನೆ ಮಾಡುತ್ತಿರುತ್ತಾನೆ.........
  ಕಾರಣ, ಸ್ವತಂತ್ರನಾದ ಭಗವಂತ ಪ್ರಕೃತಿಯ ಮೂಲಕ ಬಂಧನ ನೀಡಿದ್ದಾನೆ....ಯಾಕೆಂದರೆ ಸಕಲ ಜಡ, ಜೀವರಾಶಿಗಳೂ ಅಸ್ವಾತಂತ್ರರು.....
  ಈ ಬಂಧನವನ್ನು ಕಳೆದುಕೊಳ್ಳಲು ನಾವು ಮಾಡಬೇಕಾದ ಚಿಂತನೆ "ಭಗವಂತ ಸ್ವತಂತ್ರ ನಾವು ಅಸ್ವಾತಂತ್ರರು".....
  
  ಸಕಲ ಜೀವ ಜಡಗಳು ಭಗವಂತನ ಉದರದಲ್ಲಿದ್ದರೂ ಲೆಕ್ಕಕ್ಕಿಲ್ಲ ಅನ್ನುವದನ್ನು ತಿಳಿಸಿಕೊಟ್ಟ
   "ರಥಿಕ" ಅನ್ನುವ ಶಬ್ದ...! ವಾಹ್🙏
  
  "ಜೀವರಾಶಿಗಳಿಂದಲೇ ವಿಯೋಗವಿಲ್ಲದ ಭಗವಂತನಿಗೆ, ಸೀತೆಯಿಂದ ಎಲ್ಲಿಯ ವಿಯೋಗ" ?
  
  ಭಗವಂತ ಸೃಷ್ಟಿ ಮಾಡಲು ಪ್ರಾರಂಭಮಾಡಿದ, ಅದು ಸೃಷ್ಟಿಕಾಲವಾಯಿತು....
  ಭಗವಂತ ಸ್ಥಿತಿ ಮಾಡಿದ, ಅದು ಸ್ಥಿತಿಕಾಲವಾಯಿತು...
  ಭಗವಂತ ಪ್ರಳಯ ಮಾಡಿದಾಗ, ಅದು ಪ್ರಳಯಕಾಲವಾಯಿತು...
  
  ಕಾಲವನ್ನೇ ತನ್ನ ಅಧೀನದಲ್ಲಿಟ್ಟುಕೊಂಡ ಭಗವಂತ....ಅಬ್ಬಾ...!!
  
  ಎಷ್ಟು ಸ್ವಾರಸ್ಯಕರವಾದ ವಿಷಯಗಳು.....
  ನೇರವಾಗಿ ಅಂತರಂಗಕ್ಕೇ ಇಳಿಯುವಂತೆ ವಿಷಯವನ್ನು ತಿಳಿಸಿಕೊಟ್ಟ ಗುರುಗಳಿಗೆ ಗೌರವದ ನಮನಗಳು🙏
 • DESHPANDE P N,BANGALORE

  9:05 AM , 01/05/2019

  S.Namaskargalu.Anugrahvirli