30/04/2019
ಮನಸ್ಸು ಗಾಸಿಗೊಂಡಾಗಲೂ, ದೇಹದಲ್ಲಿ ಆರೋಗ್ಯ ಇಲ್ಲದಾಗಲೂ ಯಾವ ಭಗವಂತನ ಗುಣದ ಚಿಂತನೆಯನ್ನು ಸರ್ವಥಾ ಬಿಡಬಾರದೋ ಅಂತಹ ಮಹತ್ತ್ವದ ಚಿಂತನೆಯನ್ನು ಭಗವಂತ ಬ್ರಹ್ಮದೇವರಿಗೆ ಉಪದೇಶಿಸುತ್ತಾನೆ. ಹಿಂದಿನ ಉಪನ್ಯಾಸಗಳಲ್ಲಿ ವಿಸ್ತಾರವಾಗಿ ತಿಳಿದಂತಹ ಚತುಃಶ್ಲೋಕೀ ಭಾಗವತದ ಸಂಗ್ರಹ ಇಲ್ಲಿದೆ. ಮನುಷ್ಯೋತ್ತಮರಿಂದ ಆರಂಭಿಸಿ ಬ್ರಹ್ಮದೇವರ ವರೆಗಿನ ಸಜ್ಜೀವರು ಭಗವಂತನನ್ನು ಯಾವ ರೀತಿ ಕಾಣುತ್ತಾರೆ ಎಂಬ ಅಪೂರ್ವ ವಿಷಯದ ವಿವರಣೆಯೊಂದಿಗೆ ಸೃಷ್ಟಿ ಮಾಡುವ ಮುನ್ನು ಬ್ರಹ್ಮದೇವರ ಮಾಡಿದ ಚಿಂತನೆ ಇಲ್ಲಿ ನಿರೂಪಿತವಾಗಿದೆ. ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯಗಳ ವಚನಗಳು — एतावदेव जिज्ञास्यं तत्वजिज्ञासुनाऽऽत्मनः । अन्वयव्यतिरेकाभ्यां यत् स्यात् सर्वत्र सर्वदा ।। ३५ ।। भागवततात्पर्यम् — अन्यभावाभावकाले देशे तद्विद्यमानाविद्यमानशक्तिमान् चेत्यन्वयव्यतिरेकः । एतन्मतं ममाऽतिष्ठ परमेण समाधिना । भवान् कल्पविकल्पेषु न विमुह्यति कर्हिचित् ।। ३६ ।। श्रीशुक उवाच — सम्प्रदिश्यैवमजनो जनानां परमेष्ठिनः । पश्यतस्तस्य तद् रूपमात्मनो न्यरुणद्धरिः ।। ३७ ।। अन्तर्हितेन्द्रियार्थाय हरयेऽवहिताञ्जलिः । सर्वभूतमयो विश्वं ससर्जेदं स पूर्ववत् ।। ३८ ।। भागवततात्पर्यम् — “सर्वस्यापि प्रधानत्वात् स सर्वमय ईर्यते” इति च ।
Play Time: 46:48
Size: 5.51 MB