Upanyasa - VNU774

ಇಂದ್ರ ಅಹಲ್ಯೆಯರಿಗೆ ಶಾಪ

ಗೌತಮರು ನದಿಯ ಸ್ನಾನಕ್ಕಾಗಿ ತೆರಳಿದ್ದಾಗ ಗೌತಮರ ವೇಷದಲ್ಲಿಯೇ ಇಂದ್ರದೇವರು ಬರುತ್ತಾರೆ. ಬಂದಿರುವದು ಗಂಡನಲ್ಲ, ಇಂದ್ರ ಎಂದು ತಿಳಿದಿದ್ದರೂ, ಆ ಕ್ಷಣದ ದೌರ್ಬಲ್ಯದಿಂದ, ದುಷ್ಟಬುದ್ಧಿಯಿಂದ ಅಹಲ್ಯೆಯೂ ತಪ್ಪನ್ನೆಸಗುತ್ತಾರೆ. ಆ ನಂತರ ಇಂದ್ರದೇವರು ಆಶ್ರಮದಿಂದ ಸರಸರನೇ ನಡೆದು ಹೋಗುವಾಗ, ಗೌತಮರು ಬಂದು, ತಮ್ಮ ಜ್ಞಾನದೃಷ್ಟಿಯಿಂದ ಎಲ್ಲವನ್ನೂ ಕಂಡು ಇಂದ್ರ-ಅಹಲ್ಯೆ ಇಬ್ಬರಿಗೂ ಶಾಪವನ್ನು ನೀಡುತ್ತಾರೆ. ತಮ್ಮ ತಪ್ಪನ್ನರಿತು ಕಾಲಿಗೆ ಬಿದ್ದು ಕ್ಷಮೆ ಕೇಳಿದ ಅಹಲ್ಯೆಗೆ ಶಾಪವಿಮೋಚನೆಯನ್ನೂ ಅನುಗ್ರಹಿಸುತ್ತಾರೆ, ಪಾಪಪ್ರಕ್ಷಾಲನೆಯ ನಂತರ ಸ್ವೀಕರಿಸುತ್ತೇನೆ ಎಂಬ ಅಭಯವನ್ನೂ ನೀಡುತ್ತಾರೆ.

ಕುಳಿತಿದ್ದಕ್ಕೆ ನಿಂತದ್ದಕ್ಕೆ ವಿಚ್ಛೇದನವನ್ನು ತೆಗೆದುಕೊಳ್ಳುವ, ಅಗ್ನಿಸಾಕ್ಷಿಯಾಗಿ ಆದ ಮದುವೆಯನ್ನು ಮುರಿಯುವ ಇಂದಿನ ಜನರಿಗೆ ಗೌತಮರು ಕಲಿಸುವ ಅದ್ಬುತ ಪಾಠ ಇಲ್ಲಿದೆ. 

ಗಂಡ ಹೆಂಡತಿಯರಲ್ಲೊಬ್ಬರು ಲೈಂಗಿಕ ಅಪರಾಧ ಮಾಡಿದಾಗ, ತಪ್ಪಿನ ಎಚ್ಚರ ಇದ್ದಾಗ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಶ್ರೀಮದಾಚಾರ್ಯರ ನಿರ್ಣಯದ ವಿವರಣೆ ಇಲ್ಲಿದೆ. 

ತಪ್ಪನ್ನು ಒಪ್ಪಿಕೊಳ್ಳುವ ಸಜ್ಜನಿಕೆ, ಶಿಕ್ಷೆಯನ್ನು ಅನುಭವಿಸಿ ಪಾಪವನ್ನು ಕಳೆದುಕೊಳ್ಳು ಧರ್ಮಪ್ರಜ್ಞೆ, ಶಿಕ್ಷೆ ಅನುಭವಿಸಿದ ನಂತರ ಅವರನ್ನು ಸ್ವೀಕರಿಸುವ ಹೃದಯಶ್ರೀಮಂತಿಕೆಯೇ ನಮ್ಮ ಭಾರತೀಯ ಸಂಸ್ಕೃತಿ, ವಿಚ್ಛೇದನ ನಮ್ಮ ಸಂಸ್ಕೃತಿ ಅಲ್ಲ ಎನ್ನುವದರ ಪ್ರತಿಪಾದನೆ ಇಲ್ಲಿದೆ. 

ಏಧಮಾನದ್ವಿಟ್ ಎಂಬ ಭಗವಂತನ ಹೆಸರಿನ ಅರ್ಥದ ವಿವರಣೆಯೊಂದಿಗೆ ಅತಿರಿಕ್ತವಾದ ತಪಸ್ಸು ಎಂದರೇನು, ಅದರಿಂದ ಬರುವ ಪುಣ್ಯ ಯಾವ ರೀತಿಯಲ್ಲಿ ಕಳೆಯುತ್ತದೆ ಎಂಬ ತತ್ವದ ವಿವರಣೆ ಇಲ್ಲಿದೆ. 

Play Time: 44:07

Size: 5.51 MB


Download Upanyasa Share to facebook View Comments
8149 Views

Comments

(You can only view comments here. If you want to write a comment please download the app.)
 • Vikram Shenoy,Doha

  5:53 PM , 09/07/2019

  ಯೋಗ್ಯತೆಗೆ ತಕ್ಕ ಫಲ ಎಂಬ ತಾರತಮಯತ್ಮಕ ಜ್ಞಾನ ಈ ಆಧುನಿಕ ಜಗತ್ತಿನಲ್ಲಿ ದುರ್ಲಭ. ಈ ಜ್ಞಾನ ಪಡೆಯಲು ಶ್ರೀಮಧ್ ಆನಂದತೀರ್ಥರ ಕೃಪೆ ಅನಿವಾರ್ಯ.
 • Vishwnath MJoshi,Bengaluru

  1:50 PM , 25/06/2019

  श्रीगुरुभ्यो नमः। अथ गुरुपादौ नमस्करोमि
  ಗುರುಗಳಿಗೆ ನಮಸ್ಕಾರ 
  ನಿಮ್ಮ ಅಹಲ್ಯದೇವಿಯರ ಉಪನ್ಯಸವನ್ನು ಕೇಳಿದೆನು. ನನ್ನ ಪ್ರಶ್ನೆ,ಅಹಲ್ಯದೇವಿಯರು ಮಹಾ ಪತಿವ್ರತೆ,ಆದರೆ ಪಂಚ ಕನ್ಯ ಸ್ತೋತ್ರ ದಲ್ಲಿ ಅಹಲ್ಯದೇವಿಯರನ್ನು ಕನ್ಯ ಎಂದು ಎಕೆ ಬಿಂಬಿತವಾಗಿದೆ. ದಯವಿಟ್ಟು ತಿಳಿಸಿಕೊಡಿ ಧನ್ಯವಾದಗಳು

  Vishnudasa Nagendracharya

  ಇದೊಂದು ಪ್ರತ್ಯೇಕ ವಿಷಯ. 
  
  ಅರುಂಧತೀ ಮುಂತಾದ ಸಮಸ್ತ ಋಷಿಪತ್ನಿಯರೂ, ಶಕುಂತಲಾ ಮುಂತಾದ ರಾಜಸ್ತ್ರೀಯರೂ ಸಹ ಮಹಪತಿವ್ರತೆಯರೇ. 
  
  ಆದರೆ ಅಹಲ್ಯಾ ದ್ರೌಪದೀ ಎನ್ನುವ ಶ್ಲೋಕದಲ್ಲಿ ಕೇವಲ ಪತಿವ್ರತೆಯರ ಉಲ್ಲೇಖವಲ್ಲ ಇರುವದು. ಕನ್ಯೆಯರ ಉಲ್ಲೇಖ. ಅದೂ ಸಹಿತ ವಿಭಿನ್ನ ರೀತಿಯ ಕನ್ಯಾತ್ವದ ವಿವರಣೆ ಅಲ್ಲಿದೆ. 
  
  ಅಹಲ್ಯೆಯ ದೃಷ್ಟಿಯಲ್ಲಿ ಹೇಳುವದಾದರೆ, ಇಂದ್ರದೇವರ ಸಂಪರ್ಕದಿಂದ ಉಂಟಾದ ದೋಷವನ್ನು ಹೋಗಲಾಡಿಸಿ, ಮತ್ಯೆ ಕನ್ಯಾತ್ವವನ್ನೇ ಭಗವಂತ ಅವರಿಗೆ ನೀಡಿದ. 
  
  ಈ ಶ್ಲೋಕದ ಕುರಿತು, ಶ್ಲೋಕದ ಶುದ್ಧ ಪಾಠದ ಕುರಿತು (ಬನ್ನಂಜೆ ಹೇಳುವಂತೆ ಪಂಚಕಂ ನಾ ಅಲ್ಲ, ಅದು ಪಂಚಕನ್ಯಾಃ) ವಿವರವಾಗಿ ತಿಳಿಸಬೇಕು. 
  
  ಸಮಯ ದೊರೆತ ತಕ್ಷಣ ಅದರ ಕುರಿತು ಬರೆಯುತ್ತೇನೆ.