23/06/2019
ಇಂದ್ರದೇವರು ತಾವಾಗಿ ಅಪೇಕ್ಷೆ ಪಟ್ಟು, ಗೌತಮರ ಅಧಿಕ ಪುಣ್ಯವನ್ನು ಪಡೆಯಲು, ಶಾಪವನ್ನು ಸ್ವೀಕರಿಸಿದ್ದೇ ಹೊರತು, ಅವರನ್ನು ಶಾಸಿಸುವ ಅಧಿಕಾರ ಗೌತಮರಿಗಿಲ್ಲ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. ಶಾಪದಿಂದ ವೃಷಣಗಳನ್ನು ಕಳೆದುಕೊಂಡ ಇಂದ್ರದೇವರಿಗೆ ಮೇಕೆಯ ವೃಷಣಗಳನ್ನು ಪಿತೃಗಳು ಜೋಡಿಸುತ್ತಾರೆ. ಮೇಕೆಯನ್ನೇ ಏಕೆ ಆರಿಸಿಕೊಂಡರು, ಅಶ್ವಿನೀ, ವರುಣ, ಧನ್ವಂತರಿಗಳು ಈ ಕಾರ್ಯವನ್ನು ಮಾಡದೇ, ಪಿತೃದೇವತೆಗಳೇ ಏಕೆ ಮಾಡಿದರು, ಆ ಮೇಕೆಯ ಗತಿಯೇನು ಇತ್ಯಾದಿ ವಿಷಯಗಳ ನಿರೂಪಣೆ ಇಲ್ಲಿದೆ. ಒಟ್ಟಾರೆ ಅಹಲ್ಯೆಯ ಪ್ರಸಂಗದಿಂದ ಇಂದ್ರದೇವರಿಗೆ ಕಿಂಚಿತ್ತೂ ಕುಂದುಂಟಾಗಲಿಲ್ಲ, “ತಸ್ಯ ಲೋಮಾಪಿ ನ ಕ್ಷೀಯತೇ” ಎಂಬ ತತ್ವದ ಪ್ರತಿಪಾದನೆ ಈ ಭಾಗದಲ್ಲಿದೆ.
Play Time: 39:49
Size: 5.51 MB