28/06/2019
ಅಹಲ್ಯಾದೇವಿಯರು ನಿಜವಾಗಿಯೂ ಶಿಲೆಯಾಗಿದ್ದರೆ? ಅಹಲ್ಯಾದೇವಿಯರು ಗೌತಮರ ಶಾಪದಿಂದ ಕಲ್ಲಾಗಿದ್ದರು ಎಂಬ ಮಾತನ್ನು ನಾವು ದಾಸಸಾಹಿತ್ಯದಲ್ಲಿ ಮೇಲಿಂದ ಮೇಲೆ ಕೇಳುತ್ತೇವೆ. ಸ್ವಯಂ ಆಚಾರ್ಯರೂ ಸಹ ಶಿಲೀಕೃತಾಮ್ ಎಂದು, ಅಹಲ್ಯೆ ಶಿಲೆಯಾಗಿದ್ದರು ಎಂದು ಹೇಳಿದ್ದಾರೆ. ಆದರೆ ಚೇತನ ಜಡವಾಗಲು ಸಾಧ್ಯವಿಲ್ಲ, ಜಡ ಚೇತನವಾಗಲು ಸಾಧ್ಯವಿಲ್ಲ ಎನ್ನುವದನ್ನು ಭಗವತ್ಪಾದರು ನ್ಯಾಯವಿವರಣದಲ್ಲಿ ಪ್ರತಿಪಾದಿಸುತ್ತಾರೆ. ಕಲ್ಲಾಗಿದದ್ದರು ಎಂದರೆ ನ್ಯಾಯವಿವರಣದ ವಿರೋಧ, ಕಲ್ಲಾಗಿರಲಿಲ್ಲ ಎಂದರೆ ತಾತ್ಪರ್ಯನಿರ್ಣಯದ ಮತ್ತು ದಾಸಸಾಹಿತ್ಯದ ವಿರೋಧ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಅತಿರಿಕ್ತ ತಪಸ್ಸಿನ ವಿವರಣೆ ಗೌತಮರು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದರು, ಆ ಪುಣ್ಯವನ್ನು ಅವರಿಂದ ಕಸಿಯಲು ಈ ಘಟನೆ ನಡೆಯಿತು ಎಂದು ಕೇಳಿದೆವು. ಘಟನೆಯ ನಂತರ ಗೌತಮರು ಮತ್ತೆ ಇನ್ನೂ ಶ್ರೇಷ್ಠ ತಪಸ್ಸನ್ನು ಮಾಡಲು ಹಿಮಾಲಯದ ಶೃಂಗಗಳಿಗೆ ತೆರಳುತ್ತಾರೆ ಎಂಬ ಮಾತನ್ನೂ ಕೇಳಿದೆವು. ಈಗ ಮಾಡಿದ ತಪಸ್ಸೇ ಅಧಿಕವಾಗಿದೆ ಎನ್ನುವ ಕಾರಣಕ್ಕೇ, ಈ ಘಟನೆ ನಡೆದಿರುವದು, ಮತ್ತೆ ಏಕೆ ತಪಸ್ಸು ಮಾಡಬೇಕು ಎನ್ನುವ ಪ್ರಶ್ನೆಗೆ ಭಗವತ್ಪಾದರ ಸಿದ್ಧಾಂತ ನೀಡುವ ಅದ್ಫುತ ಉತ್ತರಗಳನ್ನು ನಾವಿಲ್ಲಿ ತಿಳಿಯುತ್ತೇವೆ. ಈ ಸಂದರ್ಭದಲ್ಲಿ ಎಲ್ಲದಕ್ಕಿಂತ ಮುಖ್ಯವಾಗಿ ತಿಳಿಯಬೇಕಾದ ತತ್ವ ಎಂದರೆ ಭಗವಂತನ ಭಕ್ತಿಯ ಮಾಹಾತ್ಮ್ಯ. ಅದನ್ನು ತಿಳಿಸುವ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಪರಮಮಂಗಳ ವಚನದ ವಿವರಣೆಯೊಂದಿಗೆ, ನಮ್ಮ ಪ್ರಾಚೀನ ಋಷಿಮುನಿಗಳ ಕುರಿತು ತಿಳಿಯಬೇಕಾದರೆ ಇರಬೇಕಾದ ಎಚ್ಚರದ ಚಿಂತನೆಯೊಂದಿಗೆ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.
Play Time: 49:44
Size: 5.51 MB