23/07/2019
ತೀರ್ಥಯಾತ್ರೆಯನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರವನ್ನು ನೀಡುತ್ತ ವಿದುರರ ಮಾಡಿದ ಅದ್ಭುತ ತೀರ್ಥಯಾತ್ರೆಯ ವರ್ಣನೆ ಇಲ್ಲಿದೆ. ಶ್ರೀಮದ್ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ವ್ರತ ಎಂಬ ಶಬ್ದದ ಸಾಂಪ್ರದಾಯಿಕ ಅರ್ಥ ಇಲ್ಲಿದೆ. ಭರತಭೂಮಂಡಲವೇ ಕರ್ಮಭೂಮಿ ಮತ್ತೊಂದಲ್ಲ ಎನ್ನುವ ತತ್ವವನ್ನು ಭಾಗವತ ಈ ಸಂದರ್ಭದಲ್ಲಿ ಅತೀ ಪರಿಣಾಮಕಾರಿಯಾಗಿ ತಿಳಿಸುತ್ತದೆ. ಯದಾ-ತದಾ ಎಂಬ ಶಬ್ದಗಳಿಗೆ ಆಚಾರ್ಯರು ತಿಳಿಸುವ ಅರ್ಥದ ವಿವರಣೆಯೊಂದಿಗೆ, ಒಂದು ಶಬ್ದಕ್ಕೆ ಆಚಾರ್ಯರು ಅರ್ಥವನ್ನು ಹೇಳಬೇಕಾದರೆ ಅವರು ಆರಿಸಿಕೊಳ್ಳುವ ಪ್ರಸಂಗವೂ ಎಷ್ಟು ಯುಕ್ತವಾಗಿರುತ್ತದೆ ಎಂಬ ತತ್ವದ ನಿರೂಪಣೆ ಇಲ್ಲಿದೆ. ದುರ್ಯೋಧನ ದುರ್ಜನ ಎಂದು ವಿದುರರಿಗೆ ನಿಶ್ಚಯವಿದೆ, ಅದಕ್ಕಾಗಿಯೇ ಅವನನ್ನು ಮನೆಯಿಂದ ಹೊರಗೆ ಹಾಕು ಎಂದು ಮೇಲಿಂದ ಮೇಲೆ ಧೃತರಾಷ್ಟ್ರನಿಗೆ ತಿಳಿಸುತ್ತಿರುತ್ತಾರೆ. ಧೃತರಾಷ್ಟ್ರ ಕೇಳಿರುವದಿಲ್ಲ. ಆದರೆ, ದುರ್ಯೋಧನಾದಿಗಳು ಧೂರ್ತರು ಎಂದು ನಿಶ್ಚಯವಾಗಿ ತಿಳಿದ ಬಳಿಕವೂ ವಿದುರರು ಹಸ್ತಿನಾವತಿಯಲ್ಲಿ ವಾಸ ಮಾಡಿಕೊಂಡಿದ್ದದ್ದು ತಪ್ಪಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
Play Time: 40:56
Size: 5.51 MB