Upanyasa - VNU786

ಶ್ರೀಮದ್ ಭಾಗವತಮ್ — 213 —  ತೀರ್ಥಯಾತ್ರೆಯ ಮಹತ್ತ್ವ

ಮನುಷ್ಯ ಸುಖ ದುಃಖಗಳಿಗೆ ಅತೀತನಲ್ಲ. ಅವು ಆಗಿಯೇ ಅಗುತ್ತವೆ. ಆದರೆ ಸುಖ ದುಃಖಗಳ ಪರಿಣಾಮಕ್ಕೊಳಗಾಗಬಾರದು ಎನ್ನುವದು ಗೀತಾಸಿದ್ಧಾಂತ. “ದುಃಖವಾಗುತ್ತದೆ, ಆದರೆ ಅದರ ಪರಿಣಾಮಕ್ಕೊಳಗಾಗಬಾರದು” ಎನ್ನುವ ಮಾತು ನಮಗೆ ಅರ್ಥವಾಗುವದು ತುಂಬ ಕಷ್ಟ. ಆದರೆ ವಿದುರರು ಸ್ವಯಂ ಆ ಗೀತಾತತ್ವವನ್ನು ಆಚರಿಸಿ ತೋರಿಸಿ ಅತ್ಯಂತ ಸುಲಭವಾಗಿ ಅದನ್ನು ಅರ್ಥ ಮಾಡಿಸುತ್ತಾರೆ. 

ಎರಡು ಸರಸ್ವತೀನದಿಗಳ ಕುರಿತ ವಿವರಣೆಯೊಂದಿಗೆ ಆರಂಭವಾಗುವ ಈ ಪ್ರವಚನದಲ್ಲಿ ಕುಮಾರಾಧಾರಾತೀರ್ಥದಲ್ಲಿರುವ ಸಂಪುಟತೀರ್ಥ, ಮತ್ಸ್ಯತೀರ್ಥ, ಕಾಶಿಯಲ್ಲಿರುವ ಹರಿಶ್ಚಂದ್ರ, ಮಣಿಕರ್ಣಿಕಾಘಟ್ಟಗಳು, ಅಲಕನಂದೆಯಲ್ಲಿರುವ ನಾರದತೀರ್ಥ, ಗರುಡತೀರ್ಥಗಳ ದೃಷ್ಟಾಂತಗಳ ಮುಖಾಂತರ ಒಂದೇ ನದಿಯಲ್ಲಿ ಅನೇಕ ತೀರ್ಥಗಳಿರುವ ಮಹತ್ತ್ವದ ಅಂಶವನ್ನು ಇಲ್ಲಿ ವಿವರಿಸಲಾಗಿದೆ. 

ಪ್ರಾಸಂಗಿಕವಾಗಿ ಛತ್ತೀಸಗಡದ ಮಹಾಕಾಲಮಂದಿರ, ರಾಜೀವಲೋಚನಮಂದಿರ, ನಮ್ಮ ಸ್ವಾದಿ ಮಂತ್ರಾಲಯ ಮುಂತಾದ ಕ್ಷೇತ್ರಗಳ ವೈಶಿಷ್ಟ್ಯಗಳ ಚಿಂತನೆ ಇಲ್ಲಿದೆ. 

ಪರಿಶುದ್ಧವಾದ ಕ್ರಮದಲ್ಲಿ ತೀರ್ಥಯಾತ್ರೆ ಮಾಡುವದರಿಂದ ನಿರಂತರ ಹರಿಸ್ಮರಣೆ, ಭಕ್ತಿ ಜ್ಞಾನಗಳ ಅಭಿವ್ಯಕ್ತಿಗಳು ಫಲವಾಗಿ ದೊರೆಯುತ್ತವೆ ಎಂಬ ತತ್ವವನ್ನು ಭಾಗವತ ಅದ್ಭುತವಾಗಿ ಈ ಪ್ರಸಂಗದಲ್ಲಿ ತಿಳಿಸುತ್ತದೆ. ಕೇಳಿ.


Play Time: 47:48

Size: 5.51 MB


Download Upanyasa Share to facebook View Comments
9457 Views

Comments

(You can only view comments here. If you want to write a comment please download the app.)
 • prema raghavendra,coimbatore

  12:42 PM, 22/10/2019

  Anantha Namaskara! Danyavada
 • DESHPANDE P N,BANGALORE

  1:51 PM , 27/07/2019

  S.Namaskargalu. Uttamarad tamminda shrvana maaduttiruwa naavea dhannaru
 • Chandrika prasad,Bangalore

  10:37 PM, 25/07/2019

  ನೀವು ನೀಡಿ ದ ವಿವರಣೆ ಗಳನ್ನು ಮತ್ತೆ ಯಾವುದೇಆಚಾರ್ಯ ರಿಂದ ನಾನು ತಿಳಿದಿಲ್ಲ. ಧನ್ಯವಾದಗಳು. ಅನಂತ ಕೋಟಿ ನಮನಗಳು.
 • Sangeetha prasanna,Bangalore

  7:49 PM , 25/07/2019

  ಹರೇ ಶ್ರೀನಿವಾಸ 🙏ನಮ್ಮಂಥ ಸಾಮಾನ್ಯರು ಕಷ್ಟದ ಪರಿಸ್ಥಿತಿಯಲ್ಲಿ ಕುಗ್ಗಿ ಹೋಗಿ ದೇವರ ಸ್ಮರಣೆ ಮಾಡದೆ ಇನ್ನಷ್ಟು ದುಃಖಕ್ಕೆ ಒಳಗಾಗುತ್ತೇವೆ .ಸುಖವಾಗಲಿ ದುಃಖವಾಗಲಿ ಸಖ ನೀನಾಗಿರು ಪಾಂಡುರಂಗ ಎನ್ನುವ ಮoತ್ರ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಲಿ .