23/07/2019
ಇಬ್ಬರು ಪರಿಚಿತರು ಭೇಟಿಯಾದಾಗ ಪರಸ್ಪರರ ಕುಟುಂಬದವರ ಕ್ಷೇಮದ ಕುರಿತು ಪ್ರಶ್ನೆಯನ್ನು ಮಾಡುವದು ಲೋಕದಲ್ಲಿ ಸಹಜ, ಕಾರಣ ಮನುಷ್ಯರಿಗೆ ಯಾವ ಕ್ಷಣದಲ್ಲಿ ಏನು ಸಮಸ್ಯೆ ಬೇಕಾದರೂ ಉಂಟಾಗಬಹುದು. ವಿದುರ-ಉದ್ಧವರು ಭೇಟಿಯಾದಾಗ ವಿದುರರು ಶ್ರೀಕೃಷ್ಣ ಮುಂತಾದ ಸಕಲರ ಕುರಿತು ಪ್ರಶ್ನೆಯನ್ನು ಮಾಡುತ್ತಾರೆ. ಆದರೆ, ಶ್ರೀಕೃಷ್ಣನಿಗೆ ಅಸೌಖ್ಯದ, ಅನರ್ಥದ ಪ್ರಸಕ್ತಿಯೇ ಇಲ್ಲ. ಸಾಮಾನ್ಯರು ಪ್ರಶ್ನೆ ಮಾಡಿದರೆ ಅವರಿಗೆ ತತ್ವ ತಿಳಿದಿಲ್ಲ ಎನ್ನಬಹುದು. ಆದರೆ ವಿದುರರಂತಹ ಮಹಾನುಭಾವರು, ಉದ್ಧವರಂತಹ ಭಾಗವತೋತ್ತಮರಿಗೆ ಈ ರೀತಿ ಪ್ರಶ್ನೆ ಮಾಡುವದು ತತ್ವಶಾಸ್ತ್ರದ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಂಡು ಭಗವತ್ಪಾದರು ಕಾರುಣ್ಯದಿಂದ ಉತ್ತರಿಸಿದ್ದಾರೆ. ಆ ವಚನಗಳ ವಿವರಣೆ ಇಲ್ಲಿದೆ. ಇನ್ನು ಕುಶಲಪ್ರಶ್ನೆ ಎನ್ನುವದು ಲೌಕಿಕ ಕ್ರಿಯೆಯಲ್ಲವೇ, ಭಾಗವತ ಹಿಂದೆ ಎರಡನೆಯ ಸ್ಕಂಧದಲ್ಲಿ ಹೇಳಿದಂತೆ “ಅತಃ ಕವಿರ್ನಾಮಸು ಯಾವದರ್ಥಃ ಸ್ಯಾತ್” ಎಷ್ಟು ಬೇಕೋ ಅಷ್ಟೇ ಮಾತನಾಡಬೇಕು ಎನ್ನುವದು ಭಾಗವತ ಧರ್ಮ. ವಿದುರರು ವಿಸ್ತಾರವಾಗಿ ಕುಶಲಪ್ರಶ್ನೆ ಮಾಡುತ್ತಾರೆ, ಇದು ಧರ್ಮ ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ದಿವ್ಯತತ್ವದ ನಿರೂಪಣೆಯೊಂದಿಗೆ. ಶ್ರೀಕೃಷ್ಣ, ಬಲರಾಮ, ವಸುದೇವ, ಪ್ರದ್ಯುಮ್ನರ ಕುರಿತ ಕುಶಲಪ್ರಶ್ನೆಗಳ ವಿವರಣೆ ಇಲ್ಲಿದೆ.
Play Time: 38:13
Size: 5.51 MB