Upanyasa - VNU792

ಶ್ರೀಮದ್ ಭಾಗವತಮ್ — 217— ದುರ್ಯೋಧನನನ್ನು ದೇವರು ಮೊದಲೇ ಏಕೆ ಕೊಲ್ಲಲಿಲ್ಲ

ಸಂಧಾನ ಮುಗಿದ ನಂತರ, ಯುದ್ಧ ಆರಂಭವಾಗುವದಕ್ಕಿಂತ ಮುಂಚೆ ವಿದುರರನ್ನು ಹೊಡೆದು ಬಡಿದು ಊರಿಂದ ಹೊರ ಹಾಕಿ ಎಂದು ದುರ್ಯೋಧನ ಆಜ್ಞೆ ಮಾಡುತ್ತಾನೆ, ಧೃತರಾಷ್ಟ್ರ ತಡೆಯುವದಿಲ್ಲ. ಈ ರೀತಿ ಅವಮಾನಿತರಾಗಿ ಹೊರಬಂದ ವಿದುರರಿಗೆ ದುಃಖವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರವನ್ನು ಸ್ವಯಂ ವಿದುರರೇ ನೀಡುತ್ತಾರೆ. ಆ ಮಾತಿನ ವಿವರಣೆಯೊಂದಿಗೆ, ನಾವು ಮಾಡಿದ ಧರ್ಮಾಚರಣೆಯನ್ನು ಯಾವಾಗ ಯಾರಿಗೆ ಹೇಳಬೇಕು, ಯಾವಾಗ ಯಾರಿಗೆ ಹೇಳಬಾರದು ಎನ್ನುವ ಸೂಕ್ಷ್ಮವಿಷಯದ ನಿರೂಪಣೆ ಇಲ್ಲಿದೆ. 

ಪಾಂಡವರು ನನ್ನ ಪ್ರಾಣ ಎಂದು ಹೇಳಿದ ಭಗವಂತ, ಭೀಮನಿಗೆ ದುರ್ಯೋಧನ ವಿಷ ಹಾಕಿದಾಗಲೇ, ಅರಗಿನ ಮನೆಯಲ್ಲಿ ಅವರೆಲ್ಲರನ್ನೂ ಸುಡಲು ಪ್ರಯತ್ನಿಸಿದಾಗಲೇ, ದ್ಯೂತದಲ್ಲಿ ದ್ರೌಪದಿಗೆ ಅವಮಾನ ಮಾಡಿದಾಗಲೇ ಏಕೆ ದುರ್ಯೋಧನಾದಿಗಳನ್ನು ಕೊಲ್ಲಲಿಲ್ಲ. ದ್ವೇಷ ಮಾಡಲೂ ಸಹ ದುರ್ಯೋಧನನಿಗೆ ಅಷ್ಟು ಸಮಯ ನೀಡುವದಾದರೆ, ಪೂತನೀ ಮುಂತಾದವರಿಗೆ ಏಕಾಗಿ ಸಮಯ ಕೊಡಲಿಲ್ಲ. 

ಅವರ ಪಾಪದ ಕೊಡ ಇನ್ನೂ ತುಂಬಿರಲಿಲ್ಲ ಎನ್ನುವದು ಮಹಾಭಾರತ ನೀಡುವ ಉತ್ತರ. ಅದರ ಜೊತೆಯಲ್ಲಿ ಭಾಗವತ ಅದ್ಭುತವಾದ ಉತ್ತರವನ್ನು — ನಮಗೆ ಶ್ರೀಹರಿಯಲ್ಲಿ ಭಕ್ತಿಯನ್ನು ಅಭಿವೃದ್ಧಿ ಮಾಡುವಂತದ ಶ್ರೇಷ್ಠ ಮಾತನ್ನು — ತಿಳಿಸುತ್ತದೆ. ಅದರ ವಿವರಣೆ ಇಲ್ಲಿದೆ. 

ನಮ್ಮ ಶ್ರೀಮದ್ವಿಜಯಧ್ವಜಾಚಾರ್ಯರ ವ್ಯಾಖ್ಯಾನದ ಸೊಬಗನ್ನು ಈ ಪ್ರಸಂಗದಲ್ಲಿ ಕಾಣುತ್ತೇವೆ. 

Play Time: 50:36

Size: 5.51 MB


Download Upanyasa Share to facebook View Comments
7581 Views

Comments

(You can only view comments here. If you want to write a comment please download the app.)
 • prema raghavendra,coimbatore

  12:36 PM, 30/10/2019

  Anantha Namaskara! Danyavada!
 • prema raghavendra,coimbatore

  12:35 PM, 30/10/2019

  Anantha banasjara! Danyavada!
 • DESHPANDE P N,BANGALORE

  10:11 AM, 03/08/2019

  S.Namaskargalu. Fantastic analysis worth & deep knowledge to attain
 • Mudigal sreenath,Bengulutu

  7:45 AM , 01/08/2019

  Duryodhana samharakke vidambane maadiddakke Mana muttuvanthe vivarane kottu maadida we pravachane bahula visistavaagide.
 • Jasyashree Karunakar,Bangalore

  5:02 PM , 31/07/2019

  ಗುರುಗಳೆ
  
   ಉಪನ್ಯಾಸದ ಹೆಸರು "ವಿದುರರ ಕುಶಲ ಪ್ರಶ್ನೆಗಳು" ಅಂತ ನೋಡಿದಾಗ, ನನಗೆ ಅನಿಸಿತ್ತು.....
  ಇಲ್ಲಿ ಎನೂ ಅಂತಹ ವಿಶೇಷತೆ ಇರಲಿಕ್ಕಿಲ್ಲ...
  ಹೆಸರೇ ಹೇಳುವಂತೆ ದಿನ ನಿತ್ಯದ ಆಗುಹೋಗುವ ಮಾತುಕತೆಗಳು....ಅಷ್ಟೇ....ಭಗವಂತನ ಮಹಿಮೆಗಳು ಇರಲಿಕ್ಕಿಲ್ಲ....ಅಂತ....
  
  ಆದರೆ ಶ್ರವಣ ಮಾಡುತ್ತಾ ಹೋದಂತೆ ಗೊತ್ತಾಯಿತು...
  
   ಶ್ರೀಮದ್ಭಾಗವತವು, ನಾವು ಮಾಡುವ ಮೊದಲ ಹಂತದ ತಪ್ಪುಗಳನ್ನೇ ತೊರಿಸಿಕೊಡಲು ಹೊರಟಿದೆ ಅಂತ.....
  
  ಲೌಕಿಕ ಕೆಲಸ ಕಾಯ೯ಗಳಲ್ಲಿಯೇ ಭಗವಂತನ ಮಹಾತ್ಮ್ಯವನ್ನು ಯಾವ ರೀತಿಯಲ್ಲಿ ಕಂಡುಕೊಂಡು ಅನುಸಂಧಾನ ಮಾಡಬೇಕು ಅನ್ನುವದನ್ನು ತಿಳಿಸಲು, ಇಂತಹ "ಕುಶಲಪ್ರಶ್ನೆಗಳು" ಅನ್ನುವ ಭಾಗವು ಅದೆಷ್ಟು ಪ್ರಮುಖ ಪಾತ್ರ ವಹಿಸಿದೆ... ಅಂತ ಗೊತ್ತಾಯಿತು.
  
  ಇಲ್ಲಿ ತುಂಬಿರುವದೆಲ್ಲವೂ ಹಣ್ಣಿನ ರಸವೇ ....🙏🙏
 • Vikram Shenoy,Doha

  1:05 PM , 31/07/2019

  ಈ ತಮೊ- ರಜೋ,ತಮೊ- ಸತ್ವ ತರಹದ ಜನರನ್ನೇ ತುಂಬಿ ಬಿಟ್ಟಿದೆ ಈ ಕಲಿಕಾಲ.