04/08/2019
ಅತ್ಯಂತ ಆಶ್ಚರ್ಯಕರವಾದ ವಸ್ತುವೊಂದು ನಮಗೆ ಶಾಶ್ವತವಾಗಿ ದೊರೆತಾಗ ಅದರ ಕುರಿತ ಬೆರಗು ನಮಗೆ ಕಡಿಮೆಯಾಗುತ್ತ ಹೋಗುತ್ತದೆ. ಹಾಗೆ, ಮೋಕ್ಷದಲ್ಲಿ ದೇವರು ಶಾಶ್ವತವಾಗಿ ಸಿಗುತ್ತಾನೆ, ಅವನ ಬಗ್ಗೆ ಬೆರಗು ಕಡಿಮೆಯಾಗಬೇಕಲ್ಲವೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ದೇವರು ಮತ್ತೊಬ್ಬರಿಗೆ ಆಶ್ಚರ್ಯಕರರಾಗಿರಬಹುದು, ಆದರೆ ಅವನಿಗೆ ಅವನು ಆಶ್ಚರ್ಯಸ್ವರೂಪ ಎಂದು ಭಾಗವತ ಹೇಳುತ್ತದೆ — “ವಿಸ್ಮಾಪನಂ ಸ್ವಸ್ಯ ಚ” ಎಂದು. ಒಬ್ಬ ವ್ಯಕ್ತಿ ತನಗೆ ತಾನೇ ಹೇಗೆ ಆಶ್ಚರ್ಯಕರನಾಗಲು ಸಾಧ್ಯ ಎಂಬ ವಿಷಯದ ಚರ್ಚೆ ಇಲ್ಲಿದೆ. ಭಗವಂತ ಯಾವ ಅವತಾರದಲ್ಲಿಯೂ ತೋರದ ಒಂದು ವಿಡಂಬನೆಯನ್ನು ಶ್ರೀಕೃಷ್ಣರೂಪದಲ್ಲಿ ತೋರುತ್ತಾನೆ, ಅದು ಮರಣದ ವಿಡಂಬನೆ. ಆ ವಿಡಂಬನೆ ಯಾವ ಕ್ರಮದಲ್ಲಿ ನಡೆಯಿತು ಎನ್ನುವದರ ನಿರೂಪಣೆಯೊಂದಿಗೆ ದೇವರಿಗೆ ಜನನ ಮರಣಗಳಿಲ್ಲ ಎನ್ನುವದರ ಪ್ರತಿಪಾದನೆ ಇಲ್ಲಿದೆ . ಮಹತೋ ಮಹೀಯಾನ್ ಆದ ಶ್ರೀಮನ್ನಾರಾಯಣನ ಅವತಾರ ರೂಪಗಳು ಅವನ ಅಚಿಂತ್ಯ ಅದ್ಭುತ ಶಕ್ತಿಗೆ ಸಾಕ್ಷಿ ಎನ್ನುವ ಪ್ರಮೇಯವನ್ನಿಲ್ಲಿ ಕೇಳುತ್ತೇವೆ. ಭಗವಂತನ ಸೌಂದರ್ಯವನ್ನು ಹೆಚ್ಚು ಮಾಡುವ ಸಾಮರ್ಥ್ಯ ಆಭರಣಗಳಿಗಿಲ್ಲ ಎಂಬ ದಿವ್ಯ ಪ್ರಮೇಯದ ನಿರೂಪಣೆಯೂ ಈ ಭಾಗದಲ್ಲಿದೆ.
Play Time: 48:47
Size: 5.51 MB