Upanyasa - VNU800

ಶ್ರೀಮದ್ ಭಾಗವತಮ್ — 224 — ಅಸುರಾವೇಶವಾಗದಿರಲು ಏನು ಮಾಡಬೇಕು

ಯಾರೇ ಸಜ್ಜೀವರೂ ತಪ್ಪು ಮಾಡಬೇಕಾದರೆ ಅವರಲ್ಲಿ ಅಸುರಾವೇಶವಾಗಿದ್ದಾಗ ಮಾತ್ರ ಮಾಡಲು ಸಾಧ್ಯ. ನಮ್ಮನ್ನು ಪ್ರಪಾತಕ್ಕೆ ಬೀಳಿಸುವ ಈ ಅಸುರಾವೇಶದಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ಶ್ರೀಮದ್ ಭಾಗವತ ತಿಳಿಸುತ್ತದೆ. 

ಶಿಶುಪಾಲ, ಪೂತನಿ ಮುಂತಾದವರಲ್ಲಿ ಇಬ್ಬರು ಜೀವರಿದ್ದಾರೆ, ಭಕ್ತಜೀವನಿಗೆ ಮುಕ್ತಿ, ದ್ವೇಷಿಜೀವನಿಗೆ ತಮಸ್ಸು ಎಂಬ ತತ್ವದ ನಿರೂಪಣೆ ಇಲ್ಲಿದೆ. 

ಲೋಕದಲ್ಲಿ ನಮ್ಮನ್ನು ಪ್ರೀತಿಸುವ ಎಲ್ಲರೂ ಒಂದು ಕಾರಣವಿಟ್ಟುಕೊಂಡೇ ಪ್ರೀತಿಸುತ್ತಾರೆ, ಆ ಕಾರಣ ಇಲ್ಲವಾದಾಗ ಪ್ರೀತಿಯೂ ಬತ್ತಿ ಹೋಗುತ್ತದೆ. ನಮ್ಮನ್ನು ನಿಷ್ಕಾರಣವಾಗಿ ಪ್ರೀತಿಸುವವನು ನಮ್ಮ ಅಂತರ್ಯಾಮಿ ಮಾತ್ರ ಎಂಬ ತತ್ವದ ನಿರೂಪಣೆ ಇಲ್ಲಿದೆ. 

दृष्टा भवद्भिर्ननु राजसूये चैद्यस्य कृष्णं द्विषतोऽपि सिद्धिः। 
यां योगिनः संस्पृहयन्ति सम्यग् योगेन कस्तद्विरहं सहेत ॥१९॥

तथैव चान्ये नरलोकवीरा य आहवे कृष्णमुखारविन्दम्। 
नेत्रैः पिबन्तो नयनाभिरामं पार्थास्त्रपूतः पदमापुरस्य ॥२०॥

स्वयं त्वसाम्यातिशयस्त्र्यधीशः स्वराज्यलक्ष्म्याप्तसमस्तकामः। 
बलिं हरद्भिः सुरलोकपालैः किरीटकोट्याहतपादपीठः ॥२१॥

तत् तस्य कैङ्कर्यमुपागतान् नो विग्लापयत्यङ्ग यदुग्रसेनम्। 
तिष्ठन् निषण्णं परमेष्ठिधिष्ण्ये न्यबोधयद् देव निधारयेति ॥२२॥

अहो बकीयं स्तनकालकूटं जिघांसयाऽपाययदप्यसाध्वी। 
लेभे गतिं धात्र्युचितां ततोऽन्यं कं वा दयालुं शरणं व्रजेम ॥२३॥

मन्येऽसुरान् भागवतांस्त्र्यधीशे संरम्भमार्गाभिनिविष्टचित्तान्। 
ये संयुगेऽचक्षत तार्क्ष्यपुत्रस्यांसे सुनाभायुधमापतन्तम् ॥२४॥

भागवततात्पर्यम्। 

“असुरा अपि ये विष्णुं शङ्खचक्रधरं रणे। 
भक्तिपूर्वमवेक्षन्ते ज्ञेया भगवता इति। 

विद्विषन्ति तु ये विष्णुमृषिपुत्रा अपि स्फुटम्। 
असुरास्तेऽपि विज्ञेया गच्छन्ति च सदा तमः। 

 जीवद्वयसमायोगाद्धिरण्यकमुखाः परे। 
भक्तिद्वेषयुताश्च स्युर्गतिस्तेषां यथानिजम्। 

कंसपूतनिकाद्याश्च बान्धवादियुता यतः। 
जीवद्वयसमायोगाद् गतिद्वयजिगीषवः। 

सर्वथा भक्तितो मुक्तिर्द्वेषात् तम उदीरितम्। 
नियमस्त्वनयोर्नित्यं मोहायान्यद् वचो भवेत्” इति ब्रह्मवैवर्ते ॥


Play Time: 48:07

Size: 5.51 MB


Download Upanyasa Share to facebook View Comments
7729 Views

Comments

(You can only view comments here. If you want to write a comment please download the app.)
 • Jyothi Gayathri,Harihar

  9:59 AM , 26/10/2021

  🙏🙏🙏🙏🙏
 • prema raghavendra,coimbatore

  12:32 PM, 14/11/2019

  Anantha namaskara! Danyavada!
 • DESHPANDE P N,BANGALORE

  8:29 AM , 12/08/2019

  S.Namasjargalu. Anugrahvirali
 • Vikram Shenoy,Doha

  1:37 PM , 11/08/2019

  ಕೋಟಿ ಕೋಟಿ ನಮನ ಆಚಾರ್ಯರಿಗೆ
 • Jasyashree Karunakar,Bangalore

  1:52 PM , 10/08/2019

  ಗುರುಗಳೆ
  
  ಮನಸ್ಸಿನಲ್ಲಿಯೇ ಹುಟ್ಟಿ ಮಾಯವಾಗುವಂತಹ ಎಲ್ಲಾ ಪ್ರಶ್ನೆಗಳಿಗೂ ತೃಪ್ತಿನೀಡುವಂತಹ ಉತ್ತರಗಳು ದೊರಕುತ್ತಿದೆ...
  
  ಶ್ರೀಕೃಷ್ಣನ ಚಕ್ರವು  ಶಿಶುಪಾಲನ ತಲೆಯನ್ನು ಸ್ಪಶ೯ ಮಾಡಿದಾಗ ಅಲ್ಲಿದ್ದ ಜಯ, ಜ್ಯೋತಿ ರೂಪದಲ್ಲಿ ಭಗವಂತನನ್ನು ಸೇರಿದ್ದು, ರಾಕ್ಷಸ ತಮಸ್ಸಿಗೆ ಹೋದದ್ದು....
   ಕಥೆ ಗೊತ್ತಿದ್ದರೂ, ಅಲ್ಲಿರುವ ತತ್ವಾಮೃತವನ್ನು ಪರಿಶುದ್ಧ ಕ್ರಮದಲ್ಲಿ ಗುರುಮುಖೇನ ತಿಳಿದಾಗಲೇ ನಿಜವಾದ ರಸಾನುಭವವಾಗಲು ಸಾಧ್ಯ....
  
  ಧನ್ಯರು ನಾವು ಅಂತಹ ರಸಾನುಭವವನ್ನು ಪ್ರತೀನಿತ್ಯ
   ಪಡೆಯುತಿದ್ದೇವೆ....
  
  ಕಲಿಯುಗದ ಮಂದಮತಿಗಳು ನಾವು.....
  
  ದೇವರು ಪಕ್ಷಪಾತಿಯಲ್ಲ ಅನ್ನುವದನ್ನು ಮತ್ತೆ ಮತ್ತೆ ತಿಳಿದುಕೊಳ್ಳಬೇಕಾಗುತ್ತದೆ..
  
  ಅಜು೯ನನ ಬಾಣದ ಸ್ಪಶ೯ವಾಗುತಿದ್ದಂತೆ, ಶತ್ರು ಪಕ್ಷದಲ್ಲಿದ್ದ ಭಕ್ತರು ತಮ್ಮ ಮರಣಯಾತನೆಯನ್ನೂ ಮೀರಿ, ಆ ಶಂಖ, ಚಕ್ರ ಗಧಾದಾರಿಯನ್ನು ಕಂಡ ಕ್ಷಣಗಳು ಪರಮಾದ್ಭುತ.... 
  
   ಅದನ್ನೇ ಅಸ್ವಾದಿಸುತ್ತಾ , ಮನಸ್ಸು ಅರೆ ಕ್ಷಣ ಅಲ್ಲಿಯೇ ನಿಲ್ಲುವಂತಾಯಿತು.....
  
  ಆ ಭಗವಂತ ನಮ್ಮೂಳಗೆ ಪ್ರವೇಶ ಮಾಡುವ ರೀತಿಯನ್ನು ನೆನೆದು ಮನಸ್ಸು ಪುಳಕಗೊಳ್ಳುತ್ತಿದೆ...
  
  ಅಸುರರು ನಮ್ಮೂಳಗೆ ಪ್ರವೇಶ ಮಾಡುವ ರೀತಿಯೇ ಭಯವನ್ನುಂಟು ಮಾಡುತ್ತಿದೆ....
  
  ಇಂತಹ ಶ್ರೇಷ್ಟವಾದ ಶ್ರೀಮದ್ಭಾಗವತದ ಶ್ರವಣವನ್ನು ಮಾಡಿಸುವ ಮೂಲಕ , ನಮ್ಮೂಳಗೆ ಅಸುರರು ಪ್ರವೇಶಮಾಡದಂತೆ ನಮ್ಮನ್ನು ರಕ್ಷಿಸಿ ಗುರುಗಳೆ.....
  
  ಬದುಕಿನ ರೀತಿಯನ್ನೇ ಬದಲಿಸುವಂತಹ ಉಪನ್ಯಾಸವನ್ನು ನೀಡುತ್ತಿರುವ ಗುರುಗಳಿಗೆ ನಮನ🙏
 • Sathya,Mysuru

  5:48 AM , 09/08/2019

  ನನಗೆ ಬಂದ ಎಲ್ಲ ಪ್ರಶ್ನೆಗಳಿಗೆ ಉಪನ್ಯಾಸ ಮುಗಿಯುವ ಹೊತ್ತಿಗೆ ಉತ್ತರ ನೀಡಿರುವ ನಿಮ್ಮ ರೀತಿಯಲ್ಲಿ ಹೇಳಿಕೊಡುವವರು ನನಗೆ ದೊರಕಿರುವುದಕ್ಕೆ ನಮ್ಮ ಅಮ್ಮ ಆ ರೀತಿ ಬದುಕಿದ್ದೇ ಕಾರಣ ಎಂದು ತಿಳಿದುಕೊಂಡು ನಿಮ್ಮ ತಿಳುವಳಿಕೆಗೆ ನನ್ನ ಅನಂತ ಕೋಟಿ ನಮಸ್ಕಾರಗಳು