16/08/2019
ವಿದುರರು ಗಂಗಾನದಿಯ ತೀರದಲ್ಲಿದ್ದ ಮೈತ್ರೇಯರ ಬಳಿಗೆ ಬಂದು ಅವರ ಸೇವೆ ಮಾಡಿ, ಅವರ ಕಾರುಣ್ಯವನ್ನು ಸಂಪಾದಿಸಿ ತತ್ವಜ್ಞಾನವನ್ನು ಪಡೆಯಲು ಮಾಡಿದ ಪ್ರಶ್ನೆಗಳ ವಿವರ ಇಲ್ಲಿದೆ. ಯಾವುದೇ ವಿದ್ಯೆ ಅಪರೋಕ್ಷಜ್ಞಾನಿಗಳಾದ ಗುರುಗಳಿಂದ ಉಪದಿಷ್ಟವಾದಾಗಲೇ ಫಲಪ್ರದವಾಗುವದು. ಆ ಗುರೂಪದೇಶವನ್ನು ಪಡೆಯುವ ಕ್ರಮವನ್ನು ಇಲ್ಲಿ ವಿವರಿಸಲಾಗಿದೆ. ಅನುವ್ಯಾಖ್ಯಾನ-ನ್ಯಾಯಸುಧಾಗ್ರಂಥಗಳಲ್ಲಿ ಭಗವತ್ಪಾದರು, ಟೀಕಾಕೃತ್ಪಾದರು ನೀಡಿದ ನಿರ್ಣಯಗಳೊಂದಿಗೆ, ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ತಿಳಿಸಿದ ಅಪೂರ್ವ ಅರ್ಥಗಳೊಂದಿಗೆ. ಹರಿದ್ವಾರವನ್ನು ಗಂಗಾದ್ವಾರ ಎಂದೇಕೆ ಕರೆಯುತ್ತಾರೆ? ಪ್ರಭಾಸದಲ್ಲಿ ವಿದುರ-ಮೈತ್ರೇಯರ ಭೇಟಿಯಾಗುತ್ತದೆ. ಮೈತ್ರೇಯರು ಅಲ್ಲಿ ತತ್ವವನ್ನು ಉಪದೇಶಿಸದೆ, ಹರಿದ್ವಾರದಲ್ಲಿ ಉಪದೇಶಿಸುತ್ತಾರೆ, ಇದಕ್ಕೆ ಕಾರಣವೇನು? ಜ್ಞಾನ ಸಂಪಾದನೆ ಮಾಡುವ ವ್ಯಕ್ತಿ, ಮಧ್ಯದಲ್ಲಿಯೇ ಮರಣವನ್ನು ಹೊಂದಿದರೆ ಕಲಿತದ್ದೆಲ್ಲವೂ ವ್ಯರ್ಥವಾಗುವಿದಲ್ಲವೇ? ಕೊಳೆ ಇರುವ ವಸ್ತುಗಳನ್ನು ಹೇಗೆ ಮನುಷ್ಯರು ಸ್ವೀಕರಿಸುವದಿಲ್ಲವೋ, ಹಾಗೆ, ನಮ್ಮ ಮಾತು-ಮನಸ್ಸು-ಕೃತಿಗಳು ಶುದ್ಧವಿಲ್ಲದಿದ್ದಲ್ಲಿ ಗುರುಗಳು ಸ್ವೀಕರಿಸುವದಿಲ್ಲ. ಆ ದೋಷಗಳನ್ನು ಕಳೆದುಕೊಳ್ಳಲು ಏನು ಮಾಡಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಪವಿತ್ರ ವಚನಗಳು — पञ्चमोऽध्यायः श्रीशुक उवाच — द्वारि द्युनद्या ऋषभः कुरूणां मैत्रेयमासीनमगाधबोधम्। क्षत्तोपसृत्याच्युतभावशुद्धः पप्रच्छ सौशील्यगुणातितृप्तम् ॥१॥ विदुर उवाच सुखाय कर्माणि करोति लोको न तैः सुखं नान्यदुपारमं वा। विन्देत भूयस्तत एव दुःखं यदत्र युक्तं भगवान् वदेन्नः ॥२॥ जनस्य कृष्णाद् विमुखस्य दैवादधर्मशीलस्य सुदुःखितस्य। अनुग्रहायेह चरन्ति नूनं भूतानि भव्यानि जनार्दनस्य ॥३॥ तत् साधुवर्यादिश वर्त्म शं नः संराधितो भगवान् येन पुंसाम्। हृदि स्थितो यच्छति भक्तिपूते ज्ञानं स्वसत्ताधिगमं पुराणम् ॥४॥ करोति कर्माणि कृतावतारो यान्यात्मतन्त्रो भगवांस्त्र्यधीशः। यथा ससर्जाग्र इदं निरीहः संस्थाप्य वृत्तिं जगतो विधत्ते ॥५॥ यथा पुनः स्वे ख इदं निवेश्य शेते गुहायां स निवृत्तवृत्तिः। योगेश्वराधीश्वर एक एतदनुप्रविष्टो बहुधा यथाऽऽसीत् ॥६॥ क्रीडन् विधत्ते द्विजगोसुराणां क्षेमाय कर्माण्यवतारभेदैः। मनो न तृप्यत्यपि शृण्वतां नः सुश्लोकमौलेश्चरितामृतानि ॥७॥
Play Time: 46:59
Size: 5.51 MB